ಪುಟ:ಅನ್ನಪೂರ್ಣಾ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ

" ಕಸಗೂಡಿಸುವುದರಿಂದ ಹಿಡಿದು.... "
" ಅಡಿಗೆ ಮಾಡಬಲ್ಲೆಯಾ ? "
ಸದಾನಂದನ ನಾಲಿಗೆಯಲ್ಲಿ ನೀರೂರಿತು. ತುಟಿಯನ್ನೊದ್ದೆಗೊಳಿ
ಸುತ್ತಾ ಆತ " ಓಹೋ " ಎಂದ.
"ಈಗಿನಿಂದಲೆ ಬಾ. ಮುಂದೆ ಕೆಲಸ ನೋಡಿ ಸಂಬಳ ಗೊತ್ತು
ಮಾಡುತ್ತಾರೆ. "
ತನ್ನನ್ನು ತಾನೇ ನಂಬಲಿಲ್ಲ ಸದಾನಂದ ಕ್ಷಣಕಾಲ.
ಆ ಹೆಂಗಸು ಅವನಿಗೊಂದು ಕೊಠಡಿ ತೋರಿಸಿದಳು.ಪಕ್ಕದಲ್ಲೆ
attached bathroom; ಎರಡು ಕೊಳಯಿಗಳು_ಒಂದರಲ್ಲಿ ಬಿಸಿನೀರು
ಒಂದರಲ್ಲಿ ತಣ್ಣೀರು. ಬದಲಿಗೆಂದು ಬಟ್ಟೆಬರೆಗಳಿದ್ದವು_ಸೇವಿಂಗ್ ಸೆಟ್
ಇತ್ಯಾದಿ. ಅಂತೂ ಈ ಮೊದಲು ಅದೇ ಕೊಠಡಿಯಲ್ಲಿ ಬೇರೆ ಯಾರೋ
ಇದ್ದುದು ಖಂಡಿತ....ಅಲ್ಲೇ ಒಂದು ಮಂಚವಿತ್ತು. ಮಂಚದ ಮೇಲೆ ಸುತ್ತಿ
ಇಟ್ಟಿದ್ದ ಹಾಸಿಗೆ, ಮೂಲೆಯಲ್ಲಿ ಡ್ರೆಸ್ಸಿಂಗ್ ಟೇಬಲ್ಲು....
ಸದಾ, ಗಡ್ಡಕ್ಕೆ ಸೋಪು ಹಚ್ಚಿದ. ಸ್ವಲ್ಪ ಹೊತ್ತಿನಲ್ಲೇ ಮುಖ ನುಣ್ಣ
ಗಾಯಿತು. ನಿಶ್ಚಿಂತೆಯಾಗಿ ಸ್ನಾನ ಮಾಡಿದ. ಬಟ್ಟೆ ಬದಲಿಸಿದ.
ಅಷ್ಟರಲ್ಲಿ ಆ ಹೆಂಗಸು ಬಂದು ಐದೈದು ರೊಪಾಯಿಗಳ ಇಪ್ಪತ್ತು
ಹಸುರು ನೋಟುಗಳನ್ನು ಅವನ ಕೈಲಿಟ್ಟು " ಚಿಲ್ಲರೆ ಖರ್ಚಿಗೆ " ಎಂದಳು.
ಸದಾನಂದ ಮರುಮಾತಾಡಲಿಲ್ಲ.
ಸ್ವಲ್ಪ ಹೊತ್ತು ಸುಮ್ಮನಿದ್ದು " ಅಡಿಗೆ ಮನೆ ತೋರಿಸ್ತೀರಾ ?" ಎಂದು
ಕೇಳಿದ.
ಆಕೆ ಕರೇದೊಯ್ದಳು....ಅಡಿಗೆ ಮನೆ ಸೊಗಸಗಿತ್ತು. ವಿದ್ಯುತ್ ಒಲೆ
ಉದ್ದಕ್ಕೂ ಗುಂಡಿಗಳನ್ನು ಒತ್ತಿದರಾಯಿತು.
" ಎರಡು ಕಪ್ ಕಾಫಿ ಮಾಡಿ ಯಜಮಾನಿಗೆ ಒಯ್ದು ಮುಟ್ಟಿಸು "
ಎಂದಳು ಆ ಹೆಂಗಸು. ಆ ಮಾತಿನಲ್ಲಿ ಅಣಕದ ಧ್ವನಿಯಿದ್ದಂತೆ ತೋರಿತು
ಸದಾನಿಗೆ.
ಹಿಂದೆ‌ ಕಾಲೇಜು ಹಾಸ್ಟೆಲಿನಲ್ಲಿದ್ದಾಗ ಸ್ಟವ್ ಉರಿಸಿ ತಮಾಷೆಗೆಂದು