ಪುಟ:ಅನ್ನಪೂರ್ಣಾ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿರುಕನೋರ್ವನೂರ ಮುಂದೆ

೩೩

ಎಂದಾದರೊಮ್ಮೆ ಸದಾ ಕಾಫಿ ಮಾಡುವುದಿತ್ತು. ಈಗ ಅದೆಲ್ಲವೂ ಮರೆತು
ಹೋಗಿದೆ. ಏನು ಮಾಡಬಲ್ಲ ?
....ಅಂತು ಆ ಸಾಹಸಿ ಹಿಂಜರಿಯಲಿಲ್ಲ.
****
ಹತ್ತು ನಿಮಿಷಗಳಲ್ಲಿ ಏನೋ ಒಂದು ಕಷಾಯ ಸಿದ್ದವಾಯಿತು. ಟ್ರೀ_
ಯಲ್ಲಿ ಎರಡು ಕಪ್ಪುಗಳನ್ನಿಟ್ಟು ಎತ್ತಿಕೊಂಡು ಯಜಮಾನಿಗೊಂದು,
ಯಜಮಾನನಿಗೊಂದು. " ಏನಾದರೂ ಮಾಡಿ ಈ ಕಲಗಚ್ಚಿಗೆ ಕಾಫಿಯ
ರುಚಿಯನ್ನು ಕೊಡಿಸು ದೇವಾ " ಎಂದಪ ಹಲವಾರು ತಿಂಗಳ ಮೇಲೆ ಮೊದಲ
ಬಾರಿಗೆ ಆತ ದೇವರನ್ನು ಪ್ರಾರ್ಥಿಸಿದ.
ಆ ಹೆಂಗಸು ಅವನನ್ನೊಯ್ದು ಯಜಮಾನಿಯ ಬಳಿ ಬಿಟ್ಟಳು.
ಹದಿನೆಂಟು ಹತ್ತೊಂಭತ್ತರ ಯುವತಿ_ಯೌವನ ಮುಗುಳ್ನಗುತ್ತಿದೆ.
ಸೋಫಾಕ್ಕೊರಗಿ ಅರೆತೆರೆದ ಕಣ್ನುಗಳಿಂದ ಸದಾ ಬರುತ್ತಿರುವುದನ್ನೇ ಅವಳು
ಇದಿರು ನೋಡುತ್ತಿದ್ದಾಳೆ. ರುಚಿಕಟ್ಟಾಗಿ ತೊಟ್ಟಿದ್ದ‌ ಪೋಷಾಕು ಅವಳ
ಸೌಂದರ್ಯವನ್ನು ಇಮ್ಮಡಿಸಿವೆ. ಕಾತರದಿಂದ ಏರಿಳಿಯುತ್ತಿದೆ ವಕ್ಷಸ್ಥಳ.
ಸದಾ ಮೂಕನಂತೆ ಮುಂದೆ ಬಂದು, ಟೀಪಾಯಿಯ ಮೇಲೆ ಟ್ರೇಯ
ನ್ನಿರಿಸಿದ.
ಕಂಪಿಸುವ ಧ್ವನಿಯಲ್ಲಿ ಅವಳು ಕೂಗಿದಳು.
" ಸದಾ! "
ದಿಗ್ಭ್ರಾಂತನಾಗಿ ಆತ ನಿಂತಲ್ಲೇ ನಿಂತ. ಯವುದೋ ನೆನಪು
ಧಾವಿಸಿ ಬಂತು. ಅವನಿಗರಿಯದೆಯೇ ಉತ್ತರ ಹೊರಟಿತ್ತು !
"ರಮಾ !"
ಸದಾ ಮತ್ತು ರಮಾ__ಮೂರು ವರ್ಷಗಳ ಕೆಳಗೆ ಅವರು ಸಹಪಾಠಿ
ಗಳಾಗಿದ್ದರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದರು ಆಗ. ಆಗರ್ಭ
ಶ್ರೀಮಂತರ ಮಗಳನ್ನು ದರಿದ್ರ ಸದಾ ಪ್ರೀತಿಸುವುದು ಸುಲಭದ ಕೆಲಸವಾಗಿ
ರಲಿಲ್ಲ. ಮನಸ್ಸು ಮಾಡಿದ್ದರೆ ಆತ ಕ್ರಮೇಣ ಮುಂದುವರಿಯಬಹುದಾಗಿತ್ತು.