ಪುಟ:ಅನ್ನಪೂರ್ಣಾ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿರುಕನೋರ್ವನೂರ ಮುಂದೆ

೩೫



" ಛೆ ! ಇಲ್ಲ ! ದೈವ ಬರೆದ ಬರಹ. ತಪ್ಪಿಸೋಕಾಗತ್ಯೆ?"
"ಅಲ್ಲವೆ ! "
****
ಸದಾನ ಅದೃಷ್ಟ ಖುಲಾಯಿಸಿತು. ಅವನು ಅಡಿಗೆ ಭಟ್ಟನಾಗಲಿಲ್ಲ. ರಮಾಳ ತಂದೆ ಬಂದೊಡನೆ ಆತ ಅವರಿಗೆ
ಗುಪ್ತಕಾರ್ಯದರ್ಶಿಯಾದ.
ಕೈಯಲ್ಲಿ ದುಡ್ಡು ಓಡಾಡಿತು.ಸ್ವಂತದ ಕಾರು....ತನ್ನ ಬಡಮನೆಯವರಿಗೆ
ಸದಾ ನೆರವಾದ.
ಒಂದು ದಿನ ರಮಾ ತೋಳಬಂಧನದಿಂದ ಅವನನ್ನು ಬಿಡುಗಡೆ ಮಾಡ
ಲಿಲ್ಲ. ತಾನು ಮಾಡುವುದು ಸರಿಯೆ? ಎಂದು ಸದಾ ಚಿಂತಿಸಿದ.
"ರಮಾ! ಇದು ತಪ್ಪು. ನಾವು ಹೀಗೆ ಮಾಡಬಾರದು....ತಮ್ಮದು
ಪವಿತ್ರ ಪ್ರೇಮವಾಗಿರಬೇಕು. ಆದರ್ಶ ಪ್ರೇಮವಾಗಿರಬೇಕು." ಎಂದು
ಭಾಷಣ ಮಾಡಿದ.
"ಮುಂದಿಟ್ಟ ನೈವೇದ್ಯವನ್ನು ಸ್ವೀಕರಿಸದ ನೀನೆಂಥ ಸನ್ಯಾಸಿ !"
ಎಂದಳು ರಮಾ.
ಸನ್ಯಾಸಿ ಎನಿಸಿಕೊಂಡಾಗ ಸದಾನಿಗೆ ಅಪಮಾನವಾಯಿತು. ಅವನು
ಪೂಜಾರಿಣಿ ತಂದ‌ ನೈವೇದ್ಯವನ್ನು ಸ್ವೀಕರಿಸಿದ.
****
ಮದುವೆ ಗೊತ್ತಾಗಿದೆ. ಅಗೋ ಸಂಭ್ರಮ....ಶ್ರೀಮಂತರ ಮನೆಯ
ಮಗಳ ಮದುವೆ. ಸಹಸ್ರ ಸಹಸ್ರವಾಗಿ ನಗರದ ಪ್ರತಿಷ್ಠಿತ ವ್ಯಕ್ತಿಗಳು
ಬರುತ್ತಿದ್ದಾರೆ. ಕಾರುಗಳಲ್ಲಿ__ಕುದುರೆಗಳ ಮೇಲೆ__ನಡೆದುಕೊಮಡು__
ಬಡವರಾಗಿ ಈ ಲೋಕದಲ್ಲಿ ಯಾರೂ ಹುಟ್ಚಬಾರದು. ಹಿಂದಿನ ಜನ್ಮದಲ್ಲಿ
ಪಾಪಿಗಳಾದವರೇ ಈಗ ಬಡವರಾಗುತ್ತಾರೆ. ಐಶ್ವರ್ಯವೇ ಸಂಸ್ಕ್ರುತಿಯ
ಭಂಡಾರದ. ಬೀಗದ ಕೈ. ಶ್ರೀಮಂತ. ವರ್ಗದಿಂದಲೇ ಸಂಸ್ಕ್ರುತಿಯ
ಪ್ರಸಾರ. ಇಂಥ ಹಲವು ಶ್ರೀಮಂತ ಕುಟುಂಬಗಳು ಇರುವುದರಿಂದಲೇ