ಪುಟ:ಅನ್ನಪೂರ್ಣಾ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಅನ್ನಪೂರ್ಣಾ

ಲೋಕ ಸುಂದರವಾಗಿದೆ-ವಾಸ ಯೋಗ್ಯವಾಗಿದೆ. ಅಂಥವರ ಹುಡುಗಿ
ಯನ್ನು ಕೈ ಹಿಡಿಯವುದೊಂದು ಕಳೆದ ಜನ್ಮದ ಸುಕೃತದ ಫಲ!
ಅದೋ,ಮಂಗಳವಾದ್ಯ ವೊಳಾಗುತ್ತಿದೆ......ಒಂದೆಡೆ ಮೂಲೆಯಲ್ಲಿ
ಪುರೋಹಿತರು ಮಂತ್ರ ಪಠಿಸುತ್ತಿದ್ದಾರೆ...ರಮಾ..ರಮಾನನ್ನು ಸಿಂಗಸು
ತ್ತಿದ್ದಾರೆ.
ಸದಾ....ಸದಾ ಈ ಷರಾಯಿ ಸೊಂಟದಲ್ಲಿ ಸಡಿಲಾಗುತ್ತಿದೆಯಲ್ಲವೆ
ಬತ್ತಿದ ಬಡ ಹೊಟ್ಟಿ.

ಪರಿಸಮಾಪ್ತಿ.

" ಏಯ್! ಏಯ್!"
ಉತ್ತರವಿಲ್ಲ.
" ಏಯ್! ಏಯ್!"
ಆ ಪೋಲೀಸಿನವನು ಕೈಬೆತ್ತದಿಂದ ಮೆಲ್ಲನೆ ಹೊಡೆದ....
ಸದಾನಿಗೆ ಎಚ್ಚರವಾಯಿತು.
" ಫುಟಪಾಥ್ ಮಲಗೋದಕ್ಕಲ್ಲ....ಏಳು !"
"..................."
"ಏಳು! ಚಿತ್ತೂರಿನಿಂದ ಬಂದು ಇಲ್ಲಿ ಸಾಯ್ತಿವೆ."
"ಅಲ್ಲ! ನಾನು ಕನ್ನಡದವನೇ, ಇಲ್ಲಿಯವನೇ. ವಿಶ್ವವಿದ್ಯಾಲಯ
ಪದವೀಧರ...."
"ನಡಿಯಾಚೆ__ಪದವೀಧರನಂತೆ__ಹುಚ್ಚ!"
ಯಾರೋ ಕೊರಕಲು ಧ್ವನಿಯಲ್ಲಿ ಹಾಡುತ್ತಿದ್ದರು.
"ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ...."
ಇಲ್ಲ. ಇಲ್ಲ ಧರ್ಮಶಾಲೆ ಇಲ್ಲ__ಇಲ್ಲಿರುವುದು ಫುಟ್ ಪಾತ್ ಮತ್ತು
ಅದರ ರಕ್ಷಕರು !