ಪುಟ:ಅನ್ನಪೂರ್ಣಾ.pdf/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಕೆಸರು ಕೊಚ್ಚೆಯ ಕಮಲ

ಕದ್ದು ಬರೆದುದು–ರಘುನಾಥನ ದಿನಚರಿಯ ಪುಸ್ತಕದಿಂದೆತ್ತಿ.

ನನಗೆ ಹುಚ್ಚುಗಿಚ್ಚು ಹಿಡಿಯೀತೇನು? ಏಕೆ ಹೋಗಬೇಕಿತ್ತು ನಿನ್ನೆ ಸಂಜೆ ಆ ಕೇರಿಯತ್ತ?
ಹೋಗಿಬಿಟ್ಟರೆ ಬಂದುದೇನು ಮಹಾ? ಆ ಎಮ್ಮೆ ಸೂಕರಗಳ ಕೇಳಿಯ ಕೊಳದ ಸವಮಿೂಪದಿಂದಾಗಿ ನಾನು ವಾಯುಸೇವನೆಗೆ ಹೋದುದು ಇದು ಪ್ರಥಮದ ಸಲವೇನು? ಅಲ್ಲ. ಆ ಕೊಳದ ನೀರಿನ ಕೊಳದ ಎಡಪಕ್ಕದಲ್ಲಿದ್ದ ಹರಿಜನ ವಸತಿಯೊಂದನ್ನು ಬಿಟ್ಟು, ಅಲ್ಲಿ ಬೇರೆ ಯಾರ ಮನೆಗಳೂ ಇಲ್ಲವೆಂಬುದನ್ನು ನಾನೊಬ್ಬನೆ ಏಕೆ, ನಗರವಾಸಿಗಳೆಲ್ಲರೂ ಬಲ್ಲರು. ಆದರೆ ಕೊಳದ ದಂಡೆಯಲ್ಲೆಲ್ಲ ಕೆಲದಿನಗಳ ಹಿಂದಿನ ಮಳೆಯಿಂದ ಹಚ್ಚನೆಯ ಹಸಿಹುಲ್ಲು ಚಿಗುರಿತ್ತೆಂಬುದನ್ನೂ ಅಲ್ಲೆಲ್ಲ ಹಾಯಾಗಿ ಬಿದ್ದುಕೊಂಡು ನಿಸರ್ಗದೇವತೆಯನ್ನು ಕಣ್ದಣಿಯೆ ಕಂಡು ಆನಂದಿಸಬಹುದೆಂಬುದನ್ನೂ ನಾನೊಬ್ಬನೇ-ಕವಿ ಹ್ರುದಯನಾದ ನಾನೊಬ್ಬನೇ ಇತರರಿಗಿಂತ ಚೆನ್ನಾಗಿ ಅರಿತಿದ್ದೆ.
ಅದಕ್ಕಾಗಿಯೇ ನಿನ್ನೆ ಆ ಕಡೆ ಹೋದುದು.ಕೊಳದತ್ತ ಇಣಿಕುವುದು ನನ್ನ ಅಭ್ಯಾಸ; ಮಳೆಯ ನೀರಿನಿಂದಾಗಿ ತುಂಬಿಕೊಂಡಿದ್ದ ಆ ಕೆರೆಯಲ್ಲಿ ತಾವರೆಯ ಮೊಗ್ಗುಗಳೇನಾದರುಾ ಕಾಣಸಿಗುತ್ತವೋ ಎಂಬ ಆತುರ ನನಗೆ.
ನೋಡಿದೆ; ತಾವರೆಯ ಎಲೆಗಳು ಒಂದಷ್ಟು ನೀರಿ ಮೇಲೆ ಹರಡಿದ್ದುದನ್ನು ಕಂಡೆ. ತಲೆಯೆತ್ತಿದೆ ಕಣ್ಣಿಗೆ ಇನ್ನೊಂದು ನೋಟ ಕಂಡಿತು.ಆಚೆಯ ಪಕ್ಕದಲ್ಲಿ ಹದಿನಾರು ವರುಷದ ಹರಿಜನರ ಹುಡುಗಿಯೊಬ್ಬಳು ಆ ಕೊಳದಲ್ಲಿ ಮಿಂದಿದ್ದವಳು.ಮುಡಿಯನ್ನು ಗಂಟಕ್ಕಿ,ಒದ್ದೆಬಟ್ಟೆಯನ್ವುಟ್ಟದ್ದು ಮೆಲ್ಲಗೆ ತನ್ನ ಕೇರಿಯತ್ತ ಸಾಗುತ್ತಿದ್ದಳು. ಪಡುಗಡೆಯಿಂದ ಕೆಂಪು ಕಾರುತ್ತಿದ್ದ ಸೂರ್ಯ ಅವಳನ್ನು ನನಗೆ ತೋರಿಸಿಕೊಟ್ಟ. ನಾನು ನಿಂತಲ್ಲೇ ನಿಂತೆ;