ಪುಟ:ಅನ್ನಪೂರ್ಣಾ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಅನ್ನಪೂರ್ಣಾ

ಕಲ್ಲಿನಂತೆ. ಕಮಲದೊಂದು ಮೊಗ್ಗು ಗಾಳಿಯಲ್ಲಿ ತೇಲುತ್ತಾ ಹೋದಂತಿತ್ತು
ನೆಟ್ಟದ್ರುಷ್ಟಿಯನ್ನು ಬಹುಹೊತ್ತು ಹಿಂದೆಗೆಯಲಿಲ್ಲ.
ಅವಳು ಹಿಂದಿರುಗಿ ನನ್ನನ್ನು ನೋಡಲಿಲ್ಲ. ನನ್ನ ಭಾಗ್ಯ.
ರಘುಾ ನಿನಗೆ ಹುಚ್ಚು! ಆ ಹರಿಜನರ ಹುಡುಗಿಯಲ್ಲಿ ಏನು ಕಂಡು
ಕೊಂಡೆಯಪ್ಪ ?
ಇಲ್ಲ ಒಳ್ಳೆಯ ನಿರಾಶೆಯಾಯಿತು ಈ ಸಂಜೆ.
ನಿನ್ನೆ ಹೊರಟುದಕ್ಕಿಂತ ಮುಂದಾಗಿಯೇ ಹೊರಗೋಡಿದೆ. ಕೊಳ
ವನ್ನು ಸಮಿಾಪಿಸಿ, ನೇರವಾಗಿ ಎದುರುದಡಕ್ಕೆ ದ್ರುಷ್ಟಿ ಹಾಯಿಸಿದೆ; ಪುನ್ಹ
ಗಾಳಿಯಲ್ಲಿ ತೇಲುವ ಆ ಹೂವನ್ನು ನೋಡುವ ಆಶೆ. ಆದರೆ ನಿರಾಶನಾದೆ
ಅಯ್ಯೋ! ಆಕೆ ಒಂದು ವೇಳೆ ಕೊಳದಲ್ಲಿ ಮುಳುಗಿ ಹೋಗಿದ್ದರೆ?
ಹುಚ್ಚು! ರಘೂ ನಿನಗೆ ಬೇಗನೆ ಹುಚ್ಚು ಹಿಡಿಯುತ್ತದೆ.
ಒಂದಾದರೂ ತಾವರೆಯ ಮೊಗ್ಗು ಹೊರಸೂಸಿದೆಯೆ ನೋಡೋಣ
ವೆಂದುಕೊಂಡೆ. ಇಲ್ಲ, ಅದೂ ಇರಲಿಲ್ಲ. ಪುನ್ಹ ನಿರಾಶೆ.
ಉಸ್ಸಪ್ಪ! ಕಳೆದ ರಾತ್ರಿ ನಿದ್ದೆಹಿಡಿಯಿತು ಸ್ವಲ್ಪ‌ ಮಟ್ಟಿಗಾದರೂ
ಐದು ದಿನಗಳ ಬಳಿಕ ನಿನ್ನೆ ಸಂಜೆ‌ ಅವಳನ್ನು ಕಂಡೆ.ಅದೇ ಎದುರು ದಡ
ದಸ್ಲಿ ಬಟ್ಟೆ ಎಲ್ಲಿಯ ಬಟ್ಟೆ ? ಬಟ್ಟೆಯ ಚಿಂದಿಗಳನ್ನೋಗೆಯುತ್ತಿದ್ದಳು
ಮರದ ಎಡೆಯಲ್ಲಿ ಮರೆಯಾಗಿ, ಬಹು ಹೊತ್ತು ಅತ್ತ‌ನೋಡಿದೆ. ಕದ್ದು
ನೋಡಿದುದರಿಂದ ಒಂದು ಪಾಪದ ಹೊರೆಯನ್ನು ಹೆಚ್ಚಾಗಿ ತಲೆಯ ಮೇಲೆ
ಹೊರಿಸಿದಂತಾಯಿತು....
ಅವಳು ಹೋದ ಬಳಿಕ ಎದುರಿಗೆ ಬಂದು ಕೊಳದಲ್ಲಿಣಿಕಿದೆ. ಒಂದು
ತಾವರೆಯ ಮೊಗ್ಗು ತಲೆದೋರಿತ್ತು.
ಮೊಗ್ಗು! ತಾವರೆಯ ಮೊಗ್ಗು!....ಸುತ್ತಲೂ ಯಾರೂ ಇರಲಿಲ್ಲ....
ಮತ್ತೆ ಆ ಮೊಗ್ಗನ್ನು ನೋಡಿದೆ....
ಅಬ್ಬ! ನಾನು ಮಾಡಿದ ಸಾಹಸವಾದರೂ ಎಷ್ಟು! ಅದು ವಿಶ್ವ
ಪ್ರಯತ್ನವೇ ಸರಿ! ಆ ಮುಸುರೆ ತಿಕ್ಕುವವಳಿಗೆ ಏನು ಕೊಡಲಿ?...ನನಗೆ
ಸಹಾಯ ಮಾಡಿದ ಉಪಕಾರಕ್ಕೆ.....ಆ ಹುಡುಗಿಯ ಹೆಸರು,ಮುದರೆ.