ಪುಟ:ಅನ್ನಪೂರ್ಣಾ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆರಾಫ್ ಕಾಗದ

೬೧

ಬಂದು ಕೊಳದ ಪಾವಟಗೆಯ ಮೇಲೆ ಕುಳಿತು ಯೋಚಿಸಿದ. ನೀಲಿ ಆಕಾ
ಶದ ಶೂನ್ಯದತ್ತ ದೃಷ್ಟಿಹರಿಸಿದ.
ಅವನಿಗೊಂದು ಶಂಕೆ. " ಹಳ್ಳಿಯವರ ಜತೇಲೇಇರುವ ಆಸೆ " ಎಂದಳಲ್ಲ. ಎಲ್ಲಾದರೂ, ತಾನೊಬ್ಬ ಹಳ್ಳಿ ಮುಕ್ಕ ಅಂತ ಆಕೆ ಲೇವಡಿ
ಮಾಡಿರಬಹುದೆ ? ಥೂ - ಥೂ - ಅಷ್ಠುರಸಿಕತೆ ಎಲ್ಲಿಬಂತು ಅದಕ್ಕೆ ? ಆದರೂ
-ಅಬ್ಬ ಎಂಥ ಮಾಟಗಾತಿ !
ಸಮಸ್ಯೆ ಬಗೆಹರಿಯದೆ ಗೋಪಾಲ ಸಮಯ ಸಾಧಿಸಿ ಒಬ್ಬಳೇ
ಇದ್ದಾಗ ತಾಯಿಯ ಬಳಿಗೆ ಹೋದ.
" ಅವರು ಯಾರೇ ಅಮ್ಮ ? "
"ರಾಧಾಕೃಷ್ಣಯ್ಯ ಅಲ್ವೆನೋ. "
" ಅವರಲ್ಲವಮ್ಮ "
" ಮತ್ತೆ ? "
"ಆ ಇನ್ನೊಬ್ಬರು "
"ಇಲ್ಲ್ನೋಡು ಗೋಪು, ಆ ಹುಡುಗಿ ವಿಚಾರ ಕೇಳ್ತಿರೋದಾದ್ರೆ
ನಂಗೇನೂ ತಿಳಿಯದು. ಅವಳಪ್ಪ ಆಟದ ಸಾಮಾನಿನ ವ್ಯಾಪಾರ ಮಾಡ್ತಾ
ರಂತೆ. ಅವಳಮ್ಮ ಬಹಳ ಒಳ್ಳೆಯವಳು, ಇನ್ನೇನಪ್ಪಾ ? "
ಮತ್ತೆ ಗೋಪಾಲ ಹೊಂಚು ಹಾಕುತ್ತ ಕುಳಿತ. ಮಧ್ಯಾಹ್ನದ
ಹೊತ್ತು ಪಡಸಾಲೆಯಲ್ಲಿ ಆ ಹುಡುಗಿ - ಹೆಸರು ಗೌರಿ - ಒಬ್ಬಳೇ ಇದ್ಧಳು.
" ನಿಮ್ ಫಾದರ್ ಏನ್ಮಾಡ್ಕೊಂಡಿದಾರೆ ?
" ಆಟದ ಸಾಮಾನಿನ ವ್ಯಾಪಾರಿ. "
" ಮಾರಾಟ ಮಾಡೂದೆ ? "
ಗೌರಿ ನಕ್ಕು ಹೇಳಿದಳು :
" ಸುಲಭವಾಗಿ ಸಿಗ್ತೂಂತಂದ್ರೆ ಕೊಂಡ್ಕೋತೀವಿ ! "
ಗಿರ್ರಂದಿತು ಗೋಪುವಿನ ತಲೆ, ಹುಚ್ಚು ಹಿಡಿಯುವ ಸ್ಥಿತಿ ! ಕೊಂಡು
ಕೋತಾಳಂತೆ - ಹುಂ !
ಅಷ್ಟರಲ್ಲೇ ಪರಸ್ಪರ ಪ್ರೀತಿಗೆ ಶುರು. ಗೋಪಾಲ, ರಾಧಾಕೃಷ್ಣಯ್ಯನ
ಬಳಿ ಬಂದ. " ಮಾವಾ ನಿಮ್ಮನ್ನ ಒಂದು ಮಾತುಕೇಳಬೇಕೂಂತ. "