ಪುಟ:ಅನ್ನಪೂರ್ಣಾ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಅನ್ನಪೂರ್ಣಾ

" ಹೊಡಿ ಬಾಣ "
" ನಮ್ಮ ಗೆಸ್ಟ್ ಇದಾರಲ್ಲಾ. ಅವರ ಹುಡುಗ ಏನ್ಮಾಡ್ಕೊಂಡಿದಾನೆ ? "
" ಹುಡುಗನೋ ಹುಡುಗಿನೋ ? "
" ಹೋಗಿ ಮಾವ, ಅವರ ಸನ್ನು ? "
" ಸನ್ನೇ ಇಲ್ಲವಪ್ಪ ಅವರಿಗೆ. ಮಗಮಗಳು ಎಲ್ಲಾ ಆಕೆ ಒಬ್ಬಳೇನೇ...
ಬಿ. ಎಸ್. ಸಿ. ಓದ್ತಾ ಇದಾಳೆ. ಫಸ್ಟ್ ಇಯರೂಂತ ಕಾಣುತ್ತೆ. "
" ಓ ! "
ರಾಧಾಕೃಷ್ಣಯ್ಯನಿಗೆ ನಗು ಬಂತು.
ಮತ್ತೆ ಇದೆಯಲ್ಲ - ಪ್ರೇಮದ ಘೋಷಣೆ; ಹಿರಿಯರು ಒಪ್ಪದೇ
ಹೋದರೆ, ಮಾವಿನ ತೋಪಿನ ಆಚೆಗೆ ಇದ್ದ ಈಜು ಕೊಳವೇ ಗತಿ - ಮುಳುಗಿ
ಸಾಯಲು - ಇತ್ಯಾದಿ, ಇತ್ಯಾದಿ.
ತುಂಬ ಸಿಟ್ಟಾದವರೆಂದರೆ ಶಂಕರಯ್ಯ. ಆ ಸಂಬಂಧದ ಬಗ್ಗೆ ತಾವೇ
ಮಾತಾಡಬೇಕು ಎಂದಿದ್ದರು ಅವರು ! ಅಷ್ಟರಲ್ಲೇ ಈ ಹುಡುಗ ಮುಂಡೇದೇ
ಹೀಗೆ ಮಾಡಿದರೆ ?
ರಾಧಾಕೃಷ್ಣಯ್ಯ ಶಂಕರಯ್ಯನಿಗೆ ಹೇಳಿದರು :
" ಸರಿಯಾಗಿದೆ ಸುಮ್ನಿರು. ನನ್ನ ನಿನ್ನ ಕಾಲದಲ್ಲಿ ಆಗ್ಲಿಲ್ಲಾಂತ,
ಈಗ ಈ ರೀತಿ ಆಗ್ಬಾರ್ದೆ? ಮ್ಯಾಚ್ ಸರಿಯಾಗಿದೆ. ಗೋಪೂಗೆ ಆ ಮಾವ
ಅವರ ಅಂಗ್ಡೀಲೇ ಕೆಲಸ ಕೊಡಿಸ್ತಾನೆ ! "
ಶಂಕರಯ್ಯ ಸಿಟ್ಟು ಬೆಂಕಿಯಾಗಿದ್ದರೂ ತಣ್ಣಗಾಗಿ ಹೋದರು.
" ಹೂ೦. ಇದೇ ನಿನ್ನ ತತ್ವಜ್ಞಾನ. ಇನ್ನು ಆರೇಳು ವರ್ಷ ಹೋಗಲಿ.
. ಶೀಲಾ ದೊಡ್ಡವಳಾಗಲಿ. ಆ ಮೇಲೆ ಗೊತ್ತಾಗುತ್ತೆ ! " ಎಂದರು.
" ಓಹೋ ! " ಎಂದು ನಕ್ಕರು ರಾಧಾಕೃಷ್ಣಯ್ಯ.
ಆಮೇಲೆ--

****

" ಗೊತ್ತಾಯ್ತು ಬಿಡಣ್ಣ " ಎಂದಳು ಶೀಲಾ.
" ಏನು ಗೊತ್ತಾಯ್ತು ? "
" ಕಥೆ ಗೊತ್ತಾಯ್ತು. "