ಪುಟ:ಅನ್ನಪೂರ್ಣಾ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೇರಾಫ್ ಕಾಗದ

೬೩

" ಕಥೇನಾ -- ? "
" ಹೂಂ ಕಥೆ . "
ನಾನು ತೆಪ್ಪಗಾಗಿ ಹೋದೆ. ನಿಜಕ್ಕೂ ಜಾಣೆ ನನ್ನ ಮಗಳು ಶೀಲಾ.
ನನ್ನ ಜಾಣತನದ ಬಗೆಗೂ ಹೆಮ್ಮೆ ಪಟ್ಟು ಕೊಳ್ಳುತ್ತಾ ಎಲ್ಲೋ ಬೆಟ್ಟ
ದಾಚೆ ಮರೆಯಾಗುತ್ತಿದ್ದ ಸೂರ್ಯನನ್ನು ನೋಡಿದೆ. ಒಂದು ಕ್ಷಣ ಎಲ್ಲವೂ
ಮರೆತುಹೋಯಿತು. ಶೀಲಾ ಕೇರಾಫ್ ರಾಧಾಕೃಷ್ಣಯ್ಯ ಎಂದು ಬಂದಿದ್ದ
ಕಾಗದ, ನನಗಾದ ಕಳವಳ, ಗೌರಿ - ಗೋಪಾಲರನ್ನು ಸೃಷ್ಟಿಸಿ ನಾನು ನಡೆಸಿದ
ಪ್ರಯೋಗ,.........
ಒಮ್ಮೆಲೆ ಸಮಾಧಿಗೆ ಭಂಗ ತಂದು ಶೀಲಾ ಹೇಳಿದಳು :-
"ಅಣ್ಣ ! ನಾಳೆ ಸಾಯಂಕಾಲ ಇಬ್ಬರು ಸ್ನೇಹಿತರನ್ನು ಕರೆದು
ಕೊಂಡು ಬರಲಾ ? "
" ಕೇಳೋದೇನು ? ಯಾವತ್ತಾದರೂ ಬೇಡ ಅಂದಿದ್ನೆ ನಾನು ? "
" ಆದರೂನೂ "
" ಓಹೋ ಖಾಸಗೀನೋ....ಸರೀನಮ್ಮ...ನಾಳೆ ನೀನೂ ಫ್ರೆಂಡ್ಸೂ
ಬರೂತ್ಲೂನೆ ವಾಕಿಂಗ್ ಹೊರಡ್ತೀನಿ. "
" ಅಣ್ಣ ! "
" ಏನು ? "
ಮಾತುಬರಲಿಲ್ಲ ಎರಡು ನಿಮಿಷ ಬಾಗಿ ಶೀಲೆಯ ಮುಂಗುರುಳು ನೇವ
ರಿಸಿದೆ. ಆಕೆ ನನ್ನೆದೆಯ ಮೇಲೆ ತಲೆಯೊರಗಿಸಿದಳು. ಎಂಥ ಲಜ್ಜೆ ಆ
ಹುಡುಗಿಗೆ ! ಹನಿಯಾಡುತ್ತಿತ್ತು ಆ ಕಣ್ಣುಗಳಲ್ಲಿ.
" ರಾಜ - ರಾಜಾಂತ ಅವನ ಹೆಸರು ರಾಜಗೋಪಾಲ. ಅವನ
ತಂಗೀನೂ ಬರ್ತಾಳೆ - ರಾಧಾ. ಅವನೇ ಕಾಗದ ಬರೆದಿರೋದು.... ಅಣ್ಣ !
ಅಣ್ಣ ! "
ಕರವಸ್ತ್ರಕ್ಕಾಗಿ ನಾನು ತಡವರಿಸಿದೆ. ಆಕೆಗೋಸ್ಕರ ಅಲ್ಲ. ನೋಯು
ತ್ತಿದ್ದ ವಯಸ್ಸಾದ ನನ್ನ ಕಣ್ಣುಗಳನ್ನು ಒತ್ತಿಕೊಳ್ಳುವುದಕ್ಕೇ ಅದು
ಬೇಕಾಗಿತ್ತು. !

——————