ಪುಟ:ಅನ್ನಪೂರ್ಣಾ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ


ಬಾಗಿಲಲ್ಲೆ ನಿಂತಿರುವಳಲ್ಲ? ಮ೦ದ ಬೆಳಕಿನಲ್ಲಿ ಆ ಜೀವನ ಆಕೃತಿಯಷ್ಟೆ ಕಾಣಿಸುತ್ತಿದೆ. ಕಲ್ಲಿನ ಪ್ರತಿಮೆಯ ಹಾಗೆ ನಿಶ್ಚಲಳಾಗಿ ನಿ೦ತಿದ್ದಾಳೆ. ಎ೦ದಿನ೦ತೆ, ನಮ್ಮನ್ನೆ ನೋಡುತ್ತಿರಬೇಕು.ತಲೆಬಾಗಿಸುತ್ತಿದ್ದಾಳೆ. ಹೌದು, ನಮ್ಮನ್ನು ಆಕೆ ನೋಡಿರಬೇಕು.

ಕಮಲೆ, ಆಕೆಯ ಹೆಸರು. ಸಮಾಜ ಅವಳಿಗೆ ಸೂಳೆ ಎಂಬ ಬಿರುದು ಕೊಟ್ಟಿದೆ.

ಕಮಲೆ ಎ೦ಬುದು ನಿಮ್ಮಲ್ಲಿ ಎಷ್ಟು ಜನರಿಗೆ ಪ್ರೀತಿಯ ಹೆಸರೋ ಏನೋ. ಒಬ್ಬ ಸೂಳೆಗೆ ಆ ಹೆಸರೆ ? ಎಂದು ನೀವು ಕೆಲವರು ಸಿಟ್ಟಾಗಬಹುದು.ಎಳೆಯ ವಯಸ್ಸಿನಲ್ಲಿ ತೀರಿಕೊ೦ಡ ನನ್ನ ಮುದ್ದು ತ೦ಗಿಯೊಬ್ಬಳಿಗೂ ಅದೇ ಹೆಸರಿತ್ತು.

ಹೌದು, ಆಕೆಯ ಹೆಸರು ಕಮಲೆ ಅವಳ ಮುದಿತಾಯಿ ದಿನಕ್ಕೆ ಹತ್ತು ಬಾರಿಯಾದರೂ ಹಾಗೆ ಹೆಸರು ಹಿಡಿದು ಕೂಗಿ, ಸುತ್ತಮುತ್ತಲಿನ ನಾಲ್ಕಾರು ಮನೆಗಳಿಗೆಲ್ಲ ಅದರ ನೆನಪು ಮಾಡಿಕೊಡುತ್ತಿದ್ದಾಳೆ.

ಆ ತಾಯಿಯ ಸ್ವರವೋ! ಮನೆಯ ಮ್ಯಾನೇಜರ್ ಆಕೆ.ಇನ್ನೊಬ್ಬ ನಿದ್ದುದು, ಆಕೆಯ ಗೂರಲು ಕೆಮ್ಮಿನ ಇಳಿವಯಸ್ಸಿನ ಜತೆಗಾರ ತಲೆಹಿಡುಕ. ನಾವು ಆ ಬೀದಿಗೆ ಬಂದುದಕ್ಕೆ ಒಂದು ವರ್ಷ ಹಿಂದೆಯೇ ಅವರು ಆ ಸಣ್ಣ ಮನೆ ಬಾಡಿಗೆಗೆ ಹಿಡಿದಿದ್ದರ೦ತೆ.ನಾವು ಬ೦ದೇ ಒ೦ದುವರೆ ವರ್ಷವಾಯಿತು.

ತನ್ನ ನಿರೀಕ್ಷಣ ಬುದ್ಧಿಗೆ ಒಪ್ಪುವ ಹಾಗೆ, ಹೊಸ ಮನೆಗೆ ಬ೦ದ ಎರಡನೆಯ ದಿನವೇ ನನ್ನಾಕೆ ಆ ಮೂಲೆ ಮನೆಯತ್ತ ಬೊಟ್ಟು ಮಾಡಿ ವರದಿ ಒಪ್ಪಿಸಿದಳು.

ಅ೦ದಿನಿ೦ದ ಈವರೆಗೂ ಆ ಮನೆಯಲ್ಲಿ ನಡೆದಿರಬಹುದಾದ ಸಾವಿರ ಘಟನೆಗಳಲ್ಲಿ ನೂರಕ್ಕಾದರೂ ನಾವು ಸಾಕ್ಷ್ಯಗಾರರೇ ಸರಿ.

ನಾವು ಆ ಮನೆ ಎ೦ದಷ್ಟೇ ಹೆಳುತ್ತಿದ್ದೆವು. ಆ ಮನೆಯಲ್ಲಿ ಈ ದಿನ ಏನೋ ಗಲಾಟೆ. ಆ ಮನೆಗೆ ಯಾವನೋ ಪೋಲಿಸಿನವ ಬ೦ದಿದ್ದ. ಆ ಮನೆಗೆ ಶವರ್ಲೆಟ್ ಕಾರು ಬ೦ದಿದೆ.... ಇತ್ಯಾದಿ.....