ಪುಟ:ಅನ್ನಪೂರ್ಣಾ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಅನ್ನಪೂರ್ಣಾ

ದಿನಗಳು ಕಳೆದವು. ಮಾಸಗಳು ಉರುಳಿದವು.ಎರಡು ವಾರಗಳಿ
ಗೊಮ್ಮೆ ಲಿಂಗಣ್ಣನ ಓಲೆ ವೆಂಕಪ್ಪನಿಗೆ ಬರುತತ್ತಿತ್ತು. ಒಂದು ಪತ್ರ ಬಂದ
ಮೇಲೆ,ಇನ್ನೊಂದು ಬರುವ ತನಕವೂ ವೆಂಕಪ್ಪನಿಗೆ ವಿಶ್ರಾಂತಿ ಇಲ್ಲ.
ಕಂಡ ಕಂಡವರಿಗೆಲ್ಲ, ಓದು ಬಲ್ಲವರಿಗೆಲ್ಲ ಕಾಗದವನ್ನು ತೋರಿಸಬೇಕು;
ಅವರಿಂದ ಓದಿಸಿ,ಕೇಳಿ,ಆನಂದಿಸಬೇಕು; ಸಿಕ್ಕಸಿಕ್ಕವರಿಗೆಲ್ಲ ತನ್ನ ಮಗನು
ಪಡೆಯುತ್ತಿರುವ ಶಿಕ್ಷಣದ ಕುರಿತು ವಿವರಿಸಿ ಹೇಳಬೇಕು.
ಇದು ವೆಂಕಪ್ಪನ ದಿನವಹಿ ಕಾರ್ಯಕ್ರಮ.
ಮುಂಜಾನೆ,ರಾಮಯ್ಯನ ಇಡ್ಲಿ ಸಾಂಬಾರಾ ಹೊಟೆಲಿನಿಂದ ಆರಂಭ
ವಾಗಿ, ಸಂಜೆ "ಗಡಂಗಿ" ನಲ್ಲಷ್ಟೇ (ಹೆಂಡದಂಗಡಿ) ವೆಂಕಪ್ಪನ ಈ
ಉಪನ್ಯಾಸ ಮಾಲೆ ಕೊನೆಗೊಳ್ಳುವುದು.
ಲಿಂಗನನ್ನು ರಕ್ಷಿಸೆಂದು ದೇವರಲ್ಲಿ ವೆಂಕಟಪ್ಪ ಬೇಡಿಕೊಳ್ಳುವ ದಿನವಿಲ್ಲ.
ಅವನು ಯಾವ ಯೋಚನೆಯೂ ಇಲ್ಲದೆ, ನಿಶ್ಚಿಂತನಾಗಿ ನಿದ್ರಿಸಿದ
ರತ್ರಿಯಿಲ್ಲ.
++++
ವೆಂಕಟಪ್ಪನಿಗೆ ಮನಿಯರ್ಡರ್ ಆಗಾಗ್ಗೆ ಬರುತ್ತಿತ್ತು. ಹತ್ತೋ-
ಐದೋ,ಹೀಗೆ!ವೆಂಕಡಪ್ಪನಿಗೆ ಬೇಸರ,ಡೂಖ್ಖಾ,ಸಂಕಟ. ಕಡಿಮೆ ಹಣ
ಬರುತ್ತಿದೆಯೆಂದಲ್ಲ; ಮಗ ಹನವನೆಲ್ಲ ತನಗೆ ಕಳುಹಿಸಿ ತಾನೆಲ್ಲಿ ಆರೆಹೊಟ್ಟೆ
ಯಲ್ಲಿರುವನೋ ಎಂದು!
ಎಲ್ಲಾದರೂ ಸರಿ! ನಡು ಬೀದಿಯಲಾದರೆ ನಡಹ್ ಬೀದಿಯಲ್ಲಿ; ಗಲ್ಲಿ
ಯಲ್ಲದರೆ ಅಲ್ಲಿ; ನನ್ನನ್ನು ಕಂಡರೆ, ಸಾಕು;-ಮಾತನಾಡಿಸಲೇ ಬೇಕು
ಅವನಿಗೆ.
ಯುದ್ಧದ ಸ್ಥಿತಿಗತಿಗಳನ್ನು ಅವನಿಗೆ ವಿವರಿಸಿ ಹೇಳುವವನು ನಾನು.
ಸಮೀಪ ಪ್ರಾಚ್ಯಕ್ಕೆ ಹೋಗಬೇಕಾಗಿ ಬಂದರೂ, ಲಿಂಗಣ್ಣನ ವಿಜಯಿಯಾಗಿ
ಹಿಂದಿರುಗುವವನೆಂದು ಆಗಾಗ ಆಶ್ವಾಸನೆ ಕೊಡುವವನು ನಾನು.
ವೆಂಕಪ್ಪನಿಗೆ ಲಿಂಗಣ್ಣನ ಭಾವೀ ಜೀವನದ ಕುರಿತು ಬಲವಾದ
ಆಲೋಚನೆ. ಯುದ್ದದಿಂದ ಹಿದಿರುಗಿ ಬಂದೊಡನೆಯೇ, ಕೃಷ್ಣಯ್ಯನ
ಮಗಳ್ಳು ಲಕ್ಷ್ಮಿಯೊಡನೆ ವಿವಹ ಮಾಡಿಸಬೇಕು; ಮಗನು "ಲೆಫ್ಟೀನೆಂಟೋ"