ಪುಟ:ಅನ್ನಪೂರ್ಣಾ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಷಾಮಶಿಶು

೭೧

ಬಿಟ್ಟು ಹೂರಡು. ಜಾಸ್ತಿ ಕಂದಾಯ ಕೊಡುವ, ಸರಿಯಾಗಿ ಕೊಡುವ,
ಹೊಸ ಒಕ್ಕಲನ್ನು ತಂದಿದ್ದೇನೆ"...ಹಾಗೆ ಹೂಲ ಬಿಟ್ಟು, ಬಡಕಲು ಹೋರಿ
ಗಳನ್ನು ಮಾರಿ, ಹಳ್ಳಿತಯ ಹೊರ ಅವರಣದಲ್ಲ ಹಟ್ಟಿ ಕೊಂಡೆ. ಅದರೆ
ಧನಿ, ತುಂಬಾ ಒಳ್ಳೆಯವರೆಂದು ಮೊದಲೇ ಹೇಳಲಿಲ್ಲವೇ? ಅವರು ನನಗೆ
ಕೆಲಸ ಕೊಟ್ಟರು. ಅವರದಾದ ಹೊಲದಲ್ಲಿ ದಿನ ಕೊಲಿಯಾಗಿ ದುಡಿದೆ.
ಹೊಲದಲ್ಲಿ ಕೆಲಸ ಕಡಿಮೆಯಾದಾಗ ಅವರ ಮನೆಯಲ್ಲಿ ಚಾಕರನಾದೆ
ವರ್ಷಗಳು ಕಳೆದವು. ಹಳ್ಳಿಯ ಹಿರಿಯರು ನನಗೊಂದು ಮದುವೆ
ಮಾಡಿಸಿದರು.ನಮ್ಮ ಒಳ್ಳೆಯ ಧನಿಗಳು ಗಂಡ ಹೆಂಡಿರಿಬ್ಬರೂ ಮ್ಯಯುಜ್ಜಿ
ಮಿಯಲು ಕೊಟ್ಟರು;ಸೀರೆ--ಬಟ್ಟೆ ಕೊಡಿಸಿದರು.ಮದುವೆ ಮನೆಗೆ
ಬೇಕಾದ ಹೆಂಡಕೊಳ್ಳಲು ದುಡ್ಡು ಸಾಲ ಕೊಟ್ಟರು.ನಾವು ಕೃತಜ್ಞರಾಗಿ
ಹೆಚ್ಚು ಆಸಕ್ತಿಯಿಂದ ದುಡಿವೆವು. ನಮ್ಮ ಮನೆಗೊಬ್ಬ್ ಹೊಸಬ ಬಂದ-
ಎಳೆಯ ಕಂದಮ್ಮ್,ತೊಳೆದ ಕೆಂಡದ ಹಾಗಿದ್ದ್-ನನ್ನ್ ಹಾಗೇ !
ಆಗ ನನ್ನವಳು ಹೇಳುತ್ತಿದ್ದಳು.
"ಮಗ ದೊಡ್ಡವನಾಗೋ ಜೊತೆ ನಿಮ್ಮ ತಾತನ ಹೊಲ ವಾಪಸ
ಪಡೀಬೇಕು"...ನಮ್ಮ ಹಟ್ಟೇಲೆ ನಮ್ಮ್ ಕಂದನ ಮದುವೆ."
ಏನೊ ತಿಳಿಯದ ಹುಚ್ಚಿ ಅವಳು.ಕೊಸು ಹುಟ್ಟದ ಮುಂಚೆಯೇ
ಕುಲಾವಿ ಹೋಲಿಸಿದರಂತೆ.ಹುಟ್ಟದ ಕೊಸೆಗೆ ಮದವೆ ಗೊತ್ತುಮಾಡಿದ
ರಂತೆ!ಹುಂ!
ನಾನು ಮನೆ ಬಿಟ್ಟಾಗ ಮಗುವಿಗೆ ಮೂರು ವರ್ಷ .ಹೌದು,ಮನೆ
ಬಿಟ್ಟಾಗ.
ಮನೆ ಬಿಡಬೇಕಾಗಿ ಬಂದ ಪರಿಸ್ಥತಿ ಏಮಗೆ ಗೊತ್ತೇಇದೆಯಲ್ಲವೇ?
ಈ ವರ್ಷ ಮಳೆ ಮಾಯವಾಯಿತು. ನೆಲ ಕಲ್ಲಾಯೆತು.ಹೊಲ ಬಿರುಕು
ಬಿಟ್ಟಿತು...ನೀರಾವರಿ? ಇಲ್ಲ್ ದೇವರು-ನಮ್ಮತ್ತ್ ನೀರಾವರಿ ಇಲ್ಲ್. ಬೆಳೆ
ಬಿತ್ತಲಿಲ್ಲ್ ಯಾರೊ. ಮೇವಿಲ್ಲದೆ ದನಗಳು ನರಳಿ ನರಳಿ ಜೀವ ಬಿಟ್ಟುವು.
ನಮ್ಮ ಒಳ್ಳೆಯ ಧನಿ ನನ್ನನ್ನು ಕರೆದು ಕಣ್ಣೇರಿಟ್ಟು ಹೇಳಿದರು.
"ಬಹಳ ಕಷ್ಟ್ವಪ್ಪ್ ಈ ವರ್ಷ.ಮಗಳು ಬಾಣಂತಿತನಕ್ಕೆ ಬರತ್ತಾಳೆ.
ಮಗ ವಿದೇಶಕ್ಕೆ ಹೋಗ್ತಾನೆ.ಮಗುವಿಗೆ ಮುಂಜಿಯಾಗಬೇಕು. ದುಡ್ಡಿಲ್ಲ