ಪುಟ:ಅನ್ನಪೂರ್ಣಾ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಷಾಮಶಿಶು

೭೩

ಕ್ಷಾಮ ಎಂದರು ಯಾರೋ,- ಪರಿಹಾರ ಎಂಬ ಮಾತು ಕೇಳಿಸಿತು.
ಕೋಲಾರ ಸೇರಿದ ದಿನ,ಕೆಲಸ ಹುಡುಕಿಕೊಂಡು ಆಲೆದೆ. ಏನೊ ಸಿಗಲಿಲ್ಲ್.
"ಕಾಲರಾದಿಂದ ಜನ ಸಾಯ್ತಿದ್ದಾರೆ-ವಡತನದಿಂದ ಬಂದ ಕಾಲರಾ
ಹೆಣ ಹೋರೋಕೆ ನೀನು ಲಾಯಕ್ಕು" ಎಂದರು ಯಾರೋ.ತಿರುಗಿ ನೋಡಿ
'ಥೊ' ಎಂದು ಉಗುಳೋಣನೆಂದಿದ್ದೆ.ಅದರೆ ಶಕ್ತಿ ಇರಲಿಲ್ಲ್. ಬೆನ್ನ್ ಹಿಂದೆ
ಯಾರೋ ನಕ್ಕ್ ಹಾಗಾಯಿತು.
ಆ ದಿನ ಒಂದು ಮೆರವಣಿಗೆ ಇತ್ತು.ಹತ್ತಿರದ ಹತ್ತಾರು ಹಳ್ಳಿಯವರು
ಬಂದಿದ್ದ್ರು. ಬಾವುಟ,ಫೋಷಣೆ-ಕೊಗಾಟ. ಬಹಳ ವರ್ಷದ ಹಿಂದೆ
ಜವಾಹರಲಾಲರು ಬಂದಿದ್ದಾಗ ನಾನೋಂದು ಮೆರವಣಿಗೆ ನೋಡಿದ್ದೆ-ಈಗ
ಈ ಮೆರವಣಿಗೆ. ಇವರು 'ಆನ್ನಕೊಡಿ-ಉದ್ಯೋಗಕೊಡಿ-ಪರಿಹಾರ
ಕೊಡಿ'ಎಂದು ಕೂಗುತ್ತಿದ್ದರು.ನಾನೂ ಅವರ ಜತೆ ಸೇರಿದೆ.
ನನಗೆ ಆನ್ನ್ ಸಿಗಲಿಲ್ಲ, ಉದ್ಯೋಗ ಸಿಗಲಿಲ್ಲ,ಪರಿಹಾರವು ಇಲ್ಲ.
ತುತ್ತು ಕೂಳಿಗಾಗಿ ಬೇಡಿದೆ. ಒಂದೆರಡು ದಿನ ಯಾರೋ ಕೊಟ್ಟರು.
ಆದರೆ ಅದನ್ನು ಬಾಯಿಗಿಡುತ್ತಿದ್ದಾಗ ಹೆಂಡತಿ ಮಗುವಿಗೆ ನೆನಪಾಗಿ ಕರುಳು
ಕಿವಿಚಿಕೊಂಡು ಬರುತ್ತಿತ್ತು...
ಮತ್ತೆ ಭಿಕ್ಷೆಯೂ ಸಿಗಲಿಲ್ಲ್.ಎಂಥ ಭೀಮಕಾಯ, ಎಂಥ ಕಡ್ಡಿ
ಪೈಲ್ವಾನನಾದೆ! ಎಲ್ಲಿಂದ-ಎಲ್ಲಿಗೆ!
....ಜ್ವರ ಬಂತು...ಮೃಯಿಂದಲೇ ಗಬ್ಬು ವಾಸನೆ ಹೊರಟಿತು...ಬಸ್
ಸ್ಟ್ಯಾಂಡಿನ ಹಿಂದೊಂದು ಷೆಡ್ಡಿಗೊರಗಿ ಕುಳಿತೆ...ಎದುರಿನಲ್ಲೇ ಹಾದಿ ಇತ್ತು-
ನ್ಯಾಯೂಸ್ಥಾನಕ್ಕೆ ಹೋಗುವ ಹದಿ...ನ್ಯಾಯ!
ಯಾವಾಗ ಮಲಗಿದೆನೋ-ಅದೇನಾಯಿತೋ-ನನಗೆ ತಿಳಿಯದ
ಹಾಗೇ ತೀರ್ಪು ಬಂತು, ಬಿಡುಗಡೆಯ ಆಜ್ಞೆ!
ಹಹ್ಹ!ಅಂತು ಕೊನೆಗೂಮ್ಮೆ ನನಗೆ ಬಿಡುಗಡೆಯಾಯಿತು!
ಬದುಕಿದ್ದಾಗ ಯಾರೂ ಕೇಳಲಿಲ್ಲ್.ಸತ್ತಾಗ, ಯಾರೋ ಪತ್ರಿಕೆ
ಯಲ್ಲಿ ನನ್ನ್ ವಿಷಯ ಬರೆದರು.
ಯಾರೋ ಸಚಿವರು,"ಆತ ಸತ್ತುದು ಕ್ಷಾಮದಿಂದಲ್ಲ-ಕಾಲರಾದಿಂದ"
ಎಂದರು !ನಕ್ಕು ನನ್ನ್ ಹೊಟ್ಟೆ ಹುಣ್ಣಾಯಿತು.

೧೦