ಪುಟ:ಅನ್ನಪೂರ್ಣಾ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಅನ್ನಪೂರ್ಣಾ

...ಬೇಸರವಾಯಿತೆ ಕತಿಕೇಳಿ? ದುಃಖವೇ ಇಲ್ಲಿ ನೋಡು, ಬಿಡು
ಗಡೆಯಾದ ಮೇಲೆ ನಮ್ಮ್ ಹಳ್ಳಿಗೆ ಹೋಗಿ ಹೆಂಡತಿ ಮಗುವನ್ನು ನೋಡು
ವುದು ನನ್ನ್ ಕರ್ತವ್ಯವಾಗಿತ್ತು ಎನ್ನುವಿರಲ್ಲವೆ?
ಇಲ್ಲ ಸ್ವಾಮಿ, ನಾವು ಹಿರಿಯ ಜೀವಿಗಳು ನಮಗೆ ರಾಗದ್ವೇಷಗಳಿಲ್ಲ;
ಮಮತೆ ಮಾಯೆಗಳಿಲ್ಲ್...
****
ಕೋಲಾರದಿಂದ ಬೆಂಗಳೂರಿಗೆ ಹೋಗಿ ಕೆಲಸ ಹುಡುಕಬೇಕೆಂದಿದ್ದೆ
ಹಿಂದೆ. ಸರಿ,ಆ ಪ್ರಯಾಣವೇ ಸಾಗಲೆಂದು ಇಲ್ಲಿಗೆ ಬಂದಿದ್ದೇನೆ!
ನೀವೆಲ್ಲರೂ ಆರೋಗ್ಯವಾಗಿದ್ದೀರಾ?
ಪ್ರೇತಾತ್ಮ!ಆಪ್ತರು ಯಾರಾದರೂ ಆಗಬಹುದೇನೋ ಎಂದು
ಇಲ್ಲಿಯೂ ನೋಡಿದ್ದೇನೆ.....ಇನ್ನೂ ಇಲ್ಲ ಸ್ವಾಮಿ....ಅದರೆ ಜೀವಂತ
ಪ್ರೇತಗಳು ಮಾತ್ರ್ ಬೇಕಷ್ಟಿವೆ. ಎಲ್ಲಿಂದ ಬಂದಿವೆಯೋ ಈ ಹಸಿದ
ಭೂತಗಳು?
ಇಲ್ಲಿ ಭೋಜನ ಸಮಾರಂಭಗಳು ವಿದಾಯ ಸತ್ಕಾಗಳು,ಸಂತೋಷ
ಕೂಟಗಳು, ದಿನಕ್ಕೆ ಹತ್ತರಂತೆ ಆಗುತ್ತಿವೆ. ನೂನ್ನೆ ಮೊನ್ನೆ ಬ್ಂದು
ನಾಲ್ಕಾರು ಔತಣಗಳಲ್ಲಿ ಹಾಜರಿದ್ದು ಬಂದೆ. ಇಲ್ಲ!ಆವರನ್ನು ಹೆದರಿಸಿ
ಲಿಲ್ಲ...ಸುಮ್ಮನೆ ಕುಳಿತು ಮಜಾ ನೋಡಿ ಬಂದೆ.ಒಂದುನ್ನು ಮಾತ್ರ್ ಸಹಿಸು
ವುದಾಗಲಿಲ್ಲ-ದೊಡ್ಡ ದೊಡ್ಡ ಗುಲಾಬ್ ಜಾಮೂನುಗಳು! ನನ್ನ್ ಮಗುವಿನ
ಕಣ್ಣುಗುಡ್ಡೆಗಳ ನೆನಪಾಗುತ್ತಿತ್ತು ಆಗ.
ಹೊರಟರಾ? ಇನ್ನು ಈ ಕತೆ ಕೇಳುವುದು ಸಾಧ್ಯವಿಲ್ಲವೆ? ಹಹ್ಹ!
ಆದರೆ ಇದು ಸೋಜಿಗ.ಬದುಕಿದ್ದಾಗ ಮಾನವನನ್ನು ಕಾಲಕಸ
ವೆಂದು ತುಳಿದ ನೀವು, ಸತ್ತಾಗ ಯಾಕೆ ಭಯಪಡುತ್ತೀರಿ?