ಪುಟ:ಅನ್ನಪೂರ್ಣಾ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬದುಕುವ ಬಯಕೆ


ಒ೦ದು ಭಾನುವಾರ ಜಯಾ ಎಲ್ಲೂ ಕಾಣಿಸಲಿಲ್ಲ; ನಾನು ಒ೦ದೆರಡು ಸಾರೆ ಹೆಸರು ಹಿಡಿದು ಕರೆದೆ. ನನ್ನಾಕೆಯೂ ಕಂಠಶೋಷಣೆ ಮಾಡಿ ಕೊಂಡಳು

ತಡವಾಗಿ ಬಂದಳು ಹುಡುಗಿ.

'ಎಲ್ಗೋಗಿದ್ದೆ ಜಯಾ ?'

'ಆ ಮನೆಗೆ'

ನನ್ನಾಕೆ ನನ್ನ ಮುಖ ನೋಡಿದಳು. ನಾನು ಆಕೆಯ ಮುಖ ನೋಡಿದೆ

"ಅಮ್ಮ ಅಣ್ಣಾ...ಕಮಲಾ ನ೦ಗೆ ಬಿಸ್ಕತ್ತು ಕೊಟ್ಟಳು. ಬಿಸ್ಕತ್ತಿನ ಮೇಲೆ ಬಣ್ಣದ ಹೂವು... ಊ ಊ... ”

ನಾನೇನೂ ಮಗುವಿನ ಮೇಲೆ ರೇಗಲಿಲ್ಲ. ವೇಶ್ಯೆಯರ ಬಗ್ಗೆ ನನ್ನಾಕೆಗೂ ನನಗೂ ನಮ್ಮದೇ ಆದ ಏಕ ಅಭಿಪ್ರಾಯವಿದೆ. ಕನಿಕರವೆನ್ನಿಸಬೇಕಾದರೆ, ನಾವು ದ್ವೇಷಿಸುವುದು, ಆವೃತ್ತಿಯನ್ನು ಅನಿವಾರ್ಯಗೊಳಿಸಿದ ಸಾಧ್ಯಗೊಳಿಸಿದ ಸಮಾಜ ಪದ್ಧತಿಯನ್ನು , ಆದರೂ ನಮ್ಮ ಜಯಾ....

"ಒಳ್ಳೆಯ ಸಹವಾಸ” ಎಂದು ಉದ್ಗಾರ ತೆಗೆದಳು ನನ್ನಾಕೆ ನಾವಿಬ್ಬರೇ ಇದ್ದಾಗ. ನಾನು ಅವಳ ಮುಂಗುರುಳು ನೇವರಿಸಿದೆ. ಅದೆಂಥ ಮೂಕ ಸಂತೈಸುವಿಕೆಯೋ.

....ಹದಿನೇಳು ವರ್ಷ ವಯಸ್ಸಾಗಿರಬಹುದು ಕಮಲೆಗೆ. ದೇಹ ಮಾತ್ರ ಇಪ್ಪತ್ತನ್ನು ದಾಟಿದ ಹಾಗೆ ಬೆಳೆದಿತ್ತು. ಗೌರವರ್ಣ, ತು೦ಬು ಮುಖ, ಸು೦ದರಿ. ಆಕೆ ಗ೦ಭೀರವಾಗಿದ್ದಾಗ ವಿದ್ಯಾವಂತೆಯಾದ ಸದ್ಗೃಹಸ್ಥೆಯ ಹಾಗೆ ಕಾಣುತ್ತಿದ್ದಳು. ಆಕೆ ನಕ್ಕಾಗ ಮಾತ್ರ ಆ ಮಾಟಗಾರಿಕೆ ಮನವರಿಕೆಯಾಗುವುದು.

ಆ ತಾಯಿಯ ಒಬ್ಬಳೇ ಮಗನ೦ತೆ ಆಕೆ. ಜೀವನದ ಕಸಬನ್ನು ಮು೦ದಕ್ಕೆ ಒಯ್ಯಲು ಉಳಿದಿದ್ದ ನಿಶಾನೆ. ಆ ಮನೆತನದ ಗೌರವಕ್ಕೆಲ್ಲ ವಾರಸುದಾರಳು. ಹಾಲಿನವಳೊಮ್ಮೆ ನನ್ನಾಕೆ ಹೇಳಿದಳಂತೆ ಹುಷಾರಾಗಿರು ಅಮ್ಮಣ್ಣಿ, ಮೋಹಿನಿ ಆಕೆ. ತಾಯಿ.'

ನನ್ನನ್ನು ಜೋಪಾನವಾಗಿಡಬೇಕೆಂದು ಕೊಟ್ಟ ಸಲಹೆ ಅದು !