ಪುಟ:ಅನ್ನಪೂರ್ಣಾ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಷಾಮಶಿಶು

೭೫

ಇಲ್ಲಿಯೇ ಇರಬೇಕೆಂದಿದ್ದೇನೆ ನಾನು; ಮುಖ್ಯ ಬೀದಿಗಳಲ್ಲಲ್ಲ-ಗಲ್ಲಿ
ಕೇರಿಗಳು,ಕೊಂಪೆಗಳು,ಕಾರಖಾನೆಯ ದೂರದಲ್ಲಿರುವ ಹಟ್ಟಿಗಳು-ಅಲ್ಲಿ
ನಾನು ಅಲೆದಾಡಬಹುದು. ಅಲ್ಲಿ ನನ್ನ ಆಪ್ತರಿರಬಹುದು.
ಪರಿಚಯ ಮಾಡಬೇಡಿ. ಆಗಾಗ್ಗೆ ಸಿಗುತ್ತಿರುತ್ತೇನೆ.ನಾನು ನಿಮ್ಮದೇ
ಸೃಷ್ಟಿ,ಕ್ಷಾಮಶಿಶು.... ಸತ್ತು ಹುಟ್ಟಿರುವ ಕ್ಷಾಮಶಿಶು..ನನಗಾಗಿ ಕನಿಕರದ
ಕಣ್ಣೀರು ಮಿಡಿಯಬೇಡಿ. ನಿಮ್ಮ ಕಂಬನಿ ಉದುರಿದರೆ ನನ್ನ ಆತ್ಮಕ್ಕೆ
ಎಲ್ಲಾದರೂ ಶಾಂತಿ ದೊರೆತು ನನಗೆ ಗೊಂದಲವಾದೀತು!ಕಲ್ಲಾಗಿ ಮಾನ
ವರೆ,ಕಠಿನ ಮನಸ್ಕರಾಗಿ,ಕ್ರೂರಿಗಳಾಗಿ-ಅದು ಯುಗಧರ್ಮ!


____________________