ಪುಟ:ಅನ್ನಪೂರ್ಣಾ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ

ಅನ್ನಪೂರ್ಣಾ

"ಢಣ್ ಢಣ್" ಎಂದು ದೇಗುಲದ ಘ್ಂಟೆಯ ಸ್ವರ ಕೇಳಿಸಿತು.
ಅರ್ಚಕರು ಗರ್ಭಗುಡಿಯ ಹೊರ ದ್ವಾರದಲ್ಲಿ ನಿಂತು ಕೂಗಿ ಹೇಳಿದರು:

"ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"-
ಪ್ರಾತಃಕಾಲದ ಶಾಂತತೆಯ ಆ ವಾತಾವರಣದಲ್ಲಿ ಅರ್ಚಕರ ಮಧುರ
ಕಂಠ ಮಾರ್ದನಿಗೊಂಡಿತು.
ನಡುಹಗಲಲ್ಲಿಯೂ ಅದೇ ಕರೆ.
ಸಂಜೆ ಪುನಃ ಅದೇ ಕರೆ.
ನಡುವಿರುಳಲ್ಲಿಯೂ ಆ ಕರೆಯೇ.
****
ಹಿಂದಿನ ಕಾಲದಲ್ಲಿ ದೇವರುಗಳಿಗೆ ದಾರಿದ್ರ್ಯವಿರಲಿಲ್ಲ.
ಅನ್ನಪೂರ್ಣಾ ಆ ನಾಡಿನ ದೇವಿ. ಆಕೆ ವಾಸ್ತವಿಕವಾಗಿಯೂ
ಅನ್ನಪೂರ್ಣಾ. ತನ್ನ ನಾಡಿನ ನಿವಾಸಿಗಳಲ್ಲಿ ಯಾರೂ ಬರಿಯ ಹೊಟ್ಟೆ
ಯಲ್ಲಿರಬಾರದೆಂದು ದೇವಿಯ ಆಶಯ. ಅದಕ್ಕಗಿಯೇ " ಉಣ್ಣಲಿಕ್ಕಿ
ದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ? ಎಂದು ಅರ್ಚಕರು ಮೂರು
ಹೊತ್ತೂ ಕರೆಕೊಡುತ್ತಿದ್ದುದು. ದೊಡ್ಡ ಘಂಟೆ ದೇಗುಲದಲ್ಲಿ ಬಾರಿಸಲ್ಪ
ಟ್ಟೊಡನೆಯೇ ಜನರಿಗೆ ಗೊತ್ತು,-ಹಸಿದವರನ್ನು ಅನ್ನಪೂರ್ಣೆ ಕರೆಯುತ್ತಿ
ದ್ದಳೆ-ಎಂದು.
"ಹಸಿದವರಿಲ್ಲ ದೇವಿ!" ಎಂದು ಉತ್ತರವೀಯುವುದು ಆಗಿನ ರೂಢಿ
ಯಾಗಿತ್ತು. ತಾವೆಲ್ಲರೂ ಉಂಡು ಸುಖವಾಗಿದ್ದರೆ ದೇವಿಗೆ ಸಂತೋಷ
ವೆಂದು ಊರಜನರು ಬಗೆದಿದ್ದರು. ಹಾಗಾಗಿ ಯಾರೂ ಒಪ್ಪೊತ್ತೂ ಊಟ
ಮಾಡದೆ ಕುಳಿತುಕೊಳ್ಳುತ್ತಿರಲಿಲ್ಲ.ದಿನವೂಕೂಳನ್ನು ಸಂಪಾದಿಸುವುದು ಸುಲ