ಪುಟ:ಅನ್ನಪೂರ್ಣಾ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ ೭೫

೭೫

ಅನ್ನಪೂರ್ಣ

ಒಂದು ತೆರನಾದ ಭಯಭೀತಿ ಜನರಲ್ಲಿ ಸಂಚಾರ ಮಾಡುವುದಕ್ಕೆ

ಮೊದಲಾಯಿತು. ಹೀಗೆ ಸುದ್ದಿಗಳನ್ನು ಯಾರು ಹಬ್ಬಿಸಿದರೆಂದು ವಿಚಾರಿಸುವ ಗೋಜಿಗೆ ಒಬ್ಬನೂ ಹೋಗಲಿಲ್ಲ.

ದಿನೇ ದಿನೇ ಅರ್ಚಕರ ಕರೆಗೆ ಮರು ನುಡಿ ಕೊಡುತ್ತಿದ್ದ ಪಾಪಿಗಳ

ಸಂಖ್ಯೆ ಕಡಿಮೆಯಾಗುತ್ತಾ ಬಂತು. ಕ್ರಮಶಃ ಹಾಗೆ ಜನರು ಬರುವುದು ನಿಂತೇ ಹೋಯಿತು.....

ಆದರೂ ಅನ್ನಪೂರ್ಣಾ ಕರೆಯುತ್ತಿದ್ದಳು-"ಉಣ್ಣಲಿಕ್ಕಿದ್ದಾರೆಯೇ?

ಇನ್ನೂ ಉಣ್ಣಲಿಕ್ಕಿದ್ದಾರೆಯೇ?" ಎಂದು.

* * * * * *

ಎಷ್ಟೋ ವರ್ಷಗಳು ಸಂದುವು. ಒಂದು ದಿನ ಬರಗಾಲದ ಪರವೂರಿನ

ಕೆಲವು ಬಡಕಲು ಜೀವಿಗಳು ಅನ್ನಪೂರ್ಣಮ್ಮನ ನಾಡಿಗೆ ಬಂದರು.

ರಾತ್ರಿಯ ಮಹಾಪೂಜೆಯಾಗಿ ಆರತಿ ಬೆಳಗಿದ್ದ ಹೊತ್ತು. ಅಧಿಕಾರಿ

ಗಳು ದೇಗುಲದ ಬಳಿಗೆ ಬರುತ್ತಿದ್ದರು. ಅನ್ನಪೂರ್ಣೆಯ ಮಹತ್ವವನ್ನು ಅವರು ಕೇಳಿಯರಿಯದ ಜನರಾಗಿರಲಿಲ್ಲ.

ಅರ್ಚಕರು ಘಂಟೆ ಬಾರಿಸಿ,"ಉಣ್ಣಲಿಕ್ಕಿದಾರೆಯೇ? ಇನ್ನೂ

ಉಣ್ಣಲಿಕ್ಕಿದ್ದಾರೆಯೇ ?" ಎಂದರು.

ಆ ದರಿದ್ರರು ತಮ್ಮ ಆಗಮನ ಸೂಚಕದ ಧ್ವನಿಯಿಂದ "ಇದ್ದೇವೆ!"

ಎಂದರು.

ಆರ್ಚಕ ಹುಬ್ಬು ಗಂಟಿಕ್ಕಿದ.ಊರವರೇನೂ ಕಾಟಕೊಡುತ್ತಿರಲಿಲ್ಲ.

ಎಂದಾದರೂ ಬರುತ್ತಿದ್ದವರು ಪರದೇಶಿಗಳು,ಭಿಕಾರಿಗಳು. ಎಷ್ಟೋ ಬಾರಿ ಆ ಹೋಸ ಅರ್ಚಕ ಅವರನ್ನು ಗದರಿಸಿ ಕಳುಹಿಸಿದ್ದ.

"ಪಾಪಿಗಳು" ಎಂದು ಆತ ಗೋಣಗುಟ್ಟಿದ. ತನ್ನ ಮನೆಯವರಿಗೆ

ಬೇಕಾಗುವಷ್ಟೇ ನೈವೇದ್ಯ ದೇವಿಗೆ ಸಮರ್ಪಿತವಾಗಿತ್ತು. ಅರ್ಚಕ ಅತ್ತಿತ್ತ ನೋಡದೆ ನೈವೇದ್ಯದ ಪಾತ್ರೆಯನ್ನೆತ್ತಿ ಗರ್ಭಗುಡಿಗೆ ಬೀಗವನ್ನೊತ್ತಿ ಹೊರ ನಡೆದು ಹೆಬ್ಬಾಗಿಲ್ಲನ್ನು ಎಳೆದುಕೊಂಡ. ಎದುರುಗಡೆಯ ಗೋಪುರದಲ್ಲಿ ಸಾಲಾಗಿ ನಿಂತಿದ್ದ ಬಡಜೀವಿಗಳಲ್ಲೊಬ್ಬ ಅರ್ಚಕ ಹೊರಡುತ್ತಿದ್ದುದನ್ನು ಕಂಡು, "ಪ್ರಸಾದವಿಲ್ಲವೇ? ಭಕ್ತರಿದ್ದಾರೆ!" ಎಂದ.