ಪುಟ:ಅನ್ನಪೂರ್ಣಾ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ

೭೫

ಉತ್ತರ ಬರಲಿಲ್ಲ ಆ ಪ್ರಶ್ನೆಗೆ.

* * * * * *

ಮರುದಿನ ಮುಂಜಾನೆಯ ಪೂಜೆಯ ಹೊತ್ತಿಗೂ ಆ ಭಿಕ್ಷುಕರು ಅಲ್ಲೇ

ಇದ್ದರು.

ಮುಂಜಾನೆಯ ಕರೆ ಬಂದಾಗ ಅವರಲ್ಲೊಬ್ಬ ಹಿರಿಯ ಮುಂದೆ

ಹೋಗಿ ನಿಂತ.

ಅರ್ಚಕ ಸಿಟ್ಟುಗೊಂಡು "ಏನು?" ಎಂದ.

"ಕರೆದಿರಿ. ಬಂದಿದ್ದೇವೆ."

"ಹುಂ,ಈಗ ಆ ಪದ್ಧತಿ ಇಲ್ಲ-ಗೊತ್ತಿಲ್ಲವೆ?"

"ಏನು? ಅನ್ನಪೂರ್ಣೆ ಈಗ ಅನ್ನದಾನ ಮಾಡುವುದಿಲ್ಲವೇ?"

ಅರ್ಚಕನು ಔಡುಗಚ್ಚಿದ,ಅಷ್ಟೆ!

ಆ ಬಡಪಾಯಿ ಸ್ವರವೇರಿಸಿ ನುಡಿದ:"ಯಾಕೆ ಮತ್ತೆ ಈ ಸೋಗು?"

ಅನ್ನಪೂರ್ಣೆ ಒಳಗಣ್ಣಿನಿಂದ ತನ್ನ ಆ ಮಕ್ಕಳನ್ನೂ ನೋಡಿ ನಗುತ್ತಿ

ದ್ದಂತೆ ತೋರಿತು.

ಅರ್ಚಕ ಅರಚಿಕೊಂಡ.

"ಷಂಡ! ನಾಸ್ತಿಕ! ದೇವಿಯನ್ನು ಅವಮಾನಿಸಿ ನರಕಕ್ಕೆ ಹೋಗು

ತ್ತಿದ್ದೀಯೇ"

* * * * * *

"ಢಣ್ ಢಣ್" ಎಂದು ದೇಗುಲದ ಘಂಟೆಯ ಸ್ವರ ಕೇಳಿಸಿತು.

ಅರ್ಚಕ ಮಹಾಶಯ ಗರ್ಭಗುಡಿಯ ಹೊರದ್ವಾರದಲ್ಲಿ ನಿಂತು ಕೂಗಿ

ಹೇಳಿದ:"ಉಣ್ಣಲಿಕ್ಕಿದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"

ಪ್ರಾತಃಕಾಲದ ಅಶಾಂತತೆಯ ಆ ವಾತಾವರಣದಲ್ಲೂ ಅರ್ಚಕನ

ಕರ್ಣ ಕಠೋರ ಕರೆ ಕೇಳಿಸಿತು.

ನಡು ಹಗಲಲ್ಲಿಯೂ ಅದೇ ಕರೆ.

ಸಂಜೆ ಪುನಃ ಅದೇ ಕರ್ಕಶ ಕರೆ.

ನಡುವಿರುಳಲ್ಲಿಯೂ ಆ ಕರೆಯೇ.


___________________