ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಮತಿ, ೭೫ ನೋಡೋಣ ಎಂದು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಗವಾಕ್ಷದ ಹತ್ತಿರ ನಿಂತುಕೊಂಡಳು. ಅನಂತರ ರಾತ್ರಿಯ ಕಾಲದಲ್ಲಿ ಗಸ್ತಿಗೆ ಬರುವ ಕೆಲ ರಕ್ಷಕ ಭಟರು, ಆ ಗಂಟನ್ನು ನೋಡಿ, ಬಿಚ್ಚಿ ಅದು ದಂಡನಾಯಕನ ಮಗನ ಶವವು ಎಂದು ತಿಳಿದು, ಒಡನೆಯೇ ಈ ಸಮಾಚಾರವನ್ನು ದಂಡನಾಯಕನಿಗೆ ತಿಳಿಯ ಪಡಿಸಿದರು. ಅವನು ಪುತ್ರನ ಶವವನ್ನು ನೋಡಿ ಶೋಕಾಕುಲಚಿತ್ತನಾಗಿ, “ ಈ ಶವವು ಎಲ್ಲಿ ದೊರೆಯಿತು? ” ಎಂದು ಆ ಭಟರನ್ನು ಕೇಳಿದನು. ಅವರು “ ಈ ಶವವು ಜಾಮೊತಿಯ ಗುಪ್ತಗೃಹ ಸಮಿಾಪದಲ್ಲಿ ದೊರೆಯಿತು,” ಎಂದು ಹೇಳಿ ದರು. ಆಮೇಲೆ ಅವನು ಜಾಮೋತಿಯ ಮನೆಗೆ ಹೋಗಿ, “ ಲಾಲುದಾಸನು ಎಲ್ಲಿ,” ಎಂದು ಕೇಳಿದನು. ಜಾಮೋತಿಯು ನಗುತ್ತ, “ ಆತನು ಇಂದು ಹೊಸ ರಂಭೆಯೊಡನೆ ಆಮೋದದಿಂದ ಇದಾನೆ ; ಹೆದರಬೇಡಿ; ಕರೆದುಕೊಂಡು ಬರು ವೆನು, ” ಎಂದು ಹೇಳಿ ಮಹಡಿಯ ಬಳಿಗೆ ಹೋದಳು. ಆದರೆ ಮೇಲಕ್ಕೆ ಹೋ ಗುವ ದಾರಿಯೇ ಮುಚ್ಚಿದ್ದುದರಿಂದ ಗಟ್ಟಿಯಾಗಿ ಕೂಗಿದಳು. ಯಾರೂ ಪ್ರತ್ಯು ತರವನ್ನು ಕೊಡಲಿಲ್ಲ. ಆಗ ಅವಳು ಹಿಂತಿರುಗಿ ಬಂದು ಕೊತ್ವಾಲನೊಡನೆ ಈ ವಿಷಯವನ್ನು ಹೇಳಿದಳು, ಅವನು ಭಟರನ್ನು ಕರೆದು ಆ ಕದವನ್ನು ಒಡೆಯು ವಂತೆ ಹೇಳಿದನು. ಜಾಮೋತಿಯ ಮನೆಯಲ್ಲಿ ನಡೆಯುತಲಿದ್ದ ಘೋರ ಕೃತ್ಯ ಗಳು ಎಲ್ಲವೂ ಆ ಮಹಡಿಯಲ್ಲಿಯೇ ನಡೆಯುತ್ತ ಇದ್ದುದರಿಂದ ಆ ವೇಶ್ಯಯು ಒಡೆಯಲು ಅಸಾಧ್ಯವಾದ ಘನತರವಾದ ಕದಗಳನ್ನು ಇಡಿಸಿದ್ದಳು. ಆದ್ದರಿಂದ ಕೊತ್ವಾಲನು ಎಷ್ಟು ಪ್ರಯತ್ನಿಸಿದರೂ ಕದವನ್ನು ಒಡೆಯುವುದಕ್ಕೆ ಆಗಲಿಲ್ಲ. ಆಗ ಬೀದಿಯ ಗೋಡೆಗೆ ಏಣಿಯನ್ನು ಹಾಕಿ ಮೇಲಕ್ಕೆ ಹತ್ತಿ ಗವಾಕ್ಷದ ಮೂಲಕ ಒಳಕ್ಕೆ ಹೋಗುವಂತೆ ಕೊತ್ವಾಲನು ಒಬ್ಬ ಭಟನಿಗೆ ಹೇಳಿದನು. ಅವನು ಮೇಲೆ ಹತ್ತಿ ಗವಾಕ್ಷದೊಳಗೆ ತಲೆಯನ್ನು ಇಟ್ಟ ಕೂಡಲೆ ಅಲ್ಲಿ ನಿಂತಿದ್ದ ವೀರಮತಿಯು ತನ್ನ ಖಡ್ಡದಿಂದ ಅವನ ತಲೆಯನ್ನು ಕತ್ತರಿಸಿದಳು. ಅವನ ತಲೆಯು ಮನೆ ಯೊಳಗೂ, ಅವನ ಶರೀರವು ಬೀದಿಯಲ್ಲಿಯೂ ಬಿತ್ತು ! ಅದಕ್ಕೆ ಹೆದರದೆ ಮತ್ತೊ ಬ್ರನು ಹತ್ತಿದನು. ಅವನೂ ನೀರಮತಿಯ ಖಡ್ಡದಿಂದ ಹತನಾದನು : ಈ ವಿಧ ವಾಗಿ ಆ ಅಬಲೆಯ ಕೈಯಿಂದ ಹನ್ನೊಂದು ಜನ ಪುರುಷರು ಪರಲೋಕವನ್ನು ಸೇರಿದರು !! ಆಮೇಲೆ ಯಾವ ಶೂರನೂ ಮೇಲಕ್ಕೆ ಹತ್ತಲಾರದೆ ಹೋದನು. ಇಷ್ಟರಲ್ಲಿ ಪ್ರಾತಃಕಾಲವು ಆದುದರಿಂದ ಈ ವೃತ್ತಾಂತವು ಗ್ರಾಮದಲ್ಲೆಲ್ಲ ಹರಡಿ ಕೊಂಡಿತು. ಜಾಮೋತಿಯ ಮನೆಗೆ ಜನರು ಗುಂಪುಗುಂಪಾಗಿ ಬರಲಾರಂಭಿಸಿ ದರು. “ ಒಬ್ಬ ಹೆಂಗಸು ಹನ್ನೆರಡು ಜನ ಭಟರನ್ನು ಕೊಂದಳು, ” ಎಂದು ಪ್ರಜೆ ಗಳು ಹೇಳಿಕೊಳ್ಳುತ್ತ ಇದ್ದು ದನ್ನು ಆ ಪಟ್ಟಣದ ದೊರೆಯು ಕೇಳಿ, ಇಂತಹ ವಿಚಿತ್ರವನ್ನು ನೋಡುವುದಕ್ಕೆ ತಾನೇ ಆಸ್ಥಳಕ್ಕೆ ಹೋದನು. ಅಲ್ಲಿ ಆಕೆಯು ಕೊಂದವರ ಶರೀರಗಳನ್ನು ನೋಡಿ, ರಾಜನು ಏಣಿಯನ್ನು ಹತ್ತಿ ಗವಾಕ್ಷದ