ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ಅಬಲಾ ಸಚ್ಚರಿತ್ರ ರತ್ನ ಮಾಲೆ. ಸವಿಾಪದಲ್ಲಿ ನಿಂತು, “ ಎಲ್‌ ಅಸಮಾನ ಶೌರ್ಯಯುತಳಾದ ರಮಣಿಯೇ ! ನೀನು ಯಾರು ? ನೀನು ನನ್ನ ಪ್ರಜೆಗಳನ್ನು ಕೊಲ್ಲಲು ಕಾರಣವು ಏನು ? ನಾನು ಈ ಪಟ್ಟಣದ ಅರಸನು. ಯಾರಾದರೂ ನಿನಗೆ ಅನ್ಯಾಯವನ್ನು ಮಾಡಿದ್ದರೆ ಹೇಳು, ನಾನು ಅವರನ್ನು ದಂಡಿಸುವೆನು,” ಎಂದು ಹೇಳಿದನು. ಅದಕ್ಕೆ ವೀರ ಮತಿಯು, “ ಮಹಾರಾಜನೇ ! ನಾನು ಚಾವಡಾಕುಲೋತ್ಪನ್ನನಾದ ಬಿರಜ ಮಹಾರಾಜನ ತಂಗಿಯು ; ಧಾರಾನಗರಕ್ಕೆ ಅಧಿಪತಿಯಾದ ಉದಯಾದಿತ್ಯ ಮಹಾರಾಜನ ಸೊಸೆಯು; ನನ್ನ ಹೆಸರು ವೀರಮತಿ,” ಎಂದು ಹೇಳಿ, ತನ್ನ ವೃತ್ತಾಂತವನ್ನೂ, ತನ್ನನ್ನು ವೇಶ್ಯಾಂಗನೆಯು ಅಲ್ಲಿಗೆ ಕರೆತಂದ ವಿಧವನ್ನೂ, ಲಾಲುದಾಸನ ಅನುಚಿತ ಕೃತ್ಯಗಳನ್ನೂ ತಿಳಿಸಿ, “ ನನ್ನ ಪಾತಿವ್ರತ್ಯವನ್ನು ಕಾಪಾಡಿ ಕೊಳ್ಳುವುದಕ್ಕಾಗಿ ಅವನನ್ನು ಕೊಂದೆನು. ಅದಕ್ಕಾಗಿಯೇ ಈ ಹನ್ನೊಂದು ಜನ ರನ್ನೂ ಕೊಂದೆನು. ನಾನು ಕ್ಷತ್ರಿಯ ಕನೈಯು. ನನ್ನ ದೇಹದಲ್ಲಿ ಪ್ರಾಣವು ಇರುವವರೆಗೂ ಅನ್ಯ ಪುರುಷನು ನನ್ನನ್ನು ಸ್ಪರ್ಶಮಾಡಲಾರನು, ” ಎಂದಳು. ಆ ಮಾತುಗಳನ್ನು ಕೇಳಿ ದೊರೆಯು ಸಂತೋಷಿಸಿ, “ ರಾಜಪುತ್ರ ಸ್ತ್ರೀಯರಿಗೆ ಉಚಿತ ವಾದ ಕೆಲಸವನ್ನು ಮಾಡಿದೆ; ಹೊರಗೆ ಬಾ; ನಾನು ನಿನ್ನನ್ನು ಪುತ್ರಿಯಂತೆ ಪೋಷಿಸುವೆನು; ನಿನ್ನ ಪತಿಯನ್ನೂ ಹುಡುಕಿಸುವೆನು,” ಎಂದನು. ಆದರೆ ವೀರ ಮತಿಯು, “ ನನ್ನ ಪತಿಯು ಬಂದ ಹೊರತು ಈ ಮಹಡಿಯ ಕದವನ್ನು ತೆಗೆಯು ವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡಿರುವೆನು. ಆದುದರಿಂದ ಮೊದಲು ನನ್ನ ಪತಿಯನ್ನು ಕರೆತಂದರೆ ತಮ್ಮ ಆಜ್ಞೆಯನ್ನು ಶಿರಸಾವಹಿಸುವೆನು. ಇಲ್ಲದಿದ್ದರೆ ಇಲ್ಲಿಯೇ ನನ್ನ ಪ್ರಾಣವನ್ನು ಬಿಡುವೆನು,” ಎಂದು ಉತ್ತರವನ್ನು ಕೊಟ್ಟಳು. ಆಗ ಅರಸನು ಜಗದೇವನನ್ನು ಹುಡುಕುವುದಕ್ಕೆ ಭಟರನ್ನು ಕಳುಹಿಸಿದನು. ಅವರು ಹುಡುಕಿ ಕಾರಾಗೃಹದಲ್ಲಿದ್ದ ಜಗದೇವನನ್ನು ಕರೆದುಕೊಂಡು ಬಂದರು. ವೀರಮತಿಯು ಪತಿಯನ್ನು ನೋಡಿ ಆನಂದದೊಡನೆ ಮಹಡಿಯ ಬಾಗಿಲನ್ನು ತೆರೆ ದಳು. ರಾಜನು ಜಾಮೋತಿಯ ಮನೆಯನ್ನು ಜಪ್ತಿ ಮಾಡಿಸಿ, ಅವಳನ್ನು ಸೆರೆ ಯಲ್ಲಿ ಇಟ್ಟನು. ಆಮೇಲೆ ಜಗದೇವ ವೀರಮತಿಯರನ್ನು ತನ್ನ ರಥದ ಮೇಲೆ ಕುಳ್ಳಿರಿಸಿಕೊಂಡು ಅರಮನೆಗೆ ಹೊರಟನು. ಮಾರ್ಗದಲ್ಲಿ ಅನೇಕ ಜನ ಸ್ತ್ರೀಯರು ವೀರಮತಿಗೆ ವಂದಿಸಿ, “ ಕುಲಾಂಗನೆಯರ ಪಾಲಿಗೆ ರಾಕ್ಷಸರಾದ ಲಾಲುದಾಸ, ಜಾಮೋತಿಯರನ್ನು ಶಿಕ್ಷಿಸಿ ಪಟ್ಟಣದ ಪಾತಿವ್ರತ್ಯವನ್ನು ಕಾಪಾಡಿದ ಮಹಾಪತಿ ವ್ರತೆಯು ಈಕೆಯೇ,” ಎಂದು ಹೊಗಳಿದರು. ರಾಜನು ದಂಡನಾಯಕನ ದುಸ್ಸೇಷ್ಟೆಗಳನ್ನೆಲ್ಲ ವಿಚಾರಿಸಿ ಅವನನ್ನು ಕೆಲಸ ದಿಂದ ತೆಗೆದುಹಾಕಿದನು. ಜಗದೇವನು ಧೀಮಂತನು ಎಂದು ತಿಳಿದುಕೊಂಡು ಆತನಿಗೆ ದಂಡನಾಯಕನ ಕೆಲಸವನ್ನು ಕೊಟ್ಟನು. ಆಮೇಲೆ ಜಗದೇವನು