ರಾಣಿ ರಾಮಾಬಾಯಿ. ಪತಿಯಚಿಂತೆಗೆ ಕಾರಣವನ್ನು ತಿಳಿದು, ಸ್ವಲ್ಪ ಯೋಚಿಸಿ, ಪತಿಯೊಡನೆ, “ನಾನು ಯಾವುದಾದರೂ ಒಂದು ವೇಷವನ್ನು ಧರಿಸಿಕೊಂಡು ಶತ್ರುಗಳ ಶಿಬಿರ ವನ್ನು ಪ್ರವೇಶಿಸಿ ಅಕ್ಷರನನ್ನು ಕೊಂದುಬರುವೆನು, ನಮ್ಮ ರಾಜ್ಯವನ್ನು ಕಾಪಾಡಿ ಕೊಳ್ಳಲು ಇದಕ್ಕಿಂತಲೂ ಒಳ್ಳೆಯ ಉಪಾಯವು ಇಲ್ಲ” ಎಂದು ಹೇಳಿದಳು. ರಾಜನು ಪತ್ನಿಯ ಮಾತುಗಳನ್ನು ಕೇಳಿ ಆಶ್ಚರ್ಯವನ್ನು ಹೊಂದಿ, “ ಇಷ್ಟು ದೊಡ್ಡ ಕೆಲಸವನ್ನು ನೀನು ಮಾಡಲಾರೆ,” ಎಂದನು. ಅದಕ್ಕೆ ರಾಮಾಬಾಯಿಯು “ಅದನ್ನು ಕುರಿತು ನೀವು ಸಂಶಯವನ್ನು ಹೊಂದಬೇಡಿ, ಆ ಭಾರವನ್ನು ಈಶ್ವರ ನಿಗೂ, ನನಗೂ ವಹಿಸಿ ನೀವು ನನಗೆ ಅನುಜ್ಞೆಯನ್ನು ಕೊಡಬೇಕು,” ಎಂದು ಕೇಳಿದಳು. ಪತ್ನಿಯು ಧೈರ್ಯದೊಡನೆ ನುಡಿದ ಮಾತುಗಳನ್ನು ಕೇಳಿ ಜಗ ಮಲ್ ಮಹಾರಾಜನು ಸ್ವಲ್ಪ ಆಲೋಚಿಸಿ, “ನಿನ್ನ ಸುಕುಮಾರ ಹಸ್ತಗಳಿಂದ, ಕಠಿನ ಹೃದಯನಾದ ಶತ್ರುವಿನ ಹೃದಯವನ್ನು ಬೇಧಿಸುವಷ್ಟು ಧೈರ್ಯವು ನಿನಗೆ ಇದ್ದರೆ, ನಿನ್ನ ಇಷ್ಟ ಪ್ರಕಾರವಾಗಿ ಮಾಡಬಹುದು. ಆದರೆ ನಿನ್ನ ಬಳಿಯಲ್ಲಿ ಒಂದು ಚಿಕ್ಕ ಕತ್ತಿಯನ್ನು ಗುಪ್ತವಾಗಿ ಇಟ್ಟು ಕೊಂಡು ಇರು, ಯಾವಾಗಲಾದರೂ ಮಾನಹಾನಿಯು ಸಂಭವಿಸುವಂತೆ ತೋರಿದರೆ, ರಾಜಪುತ್ರಸ್ತ್ರೀಯರಿಗೆ ಯೋಗ್ಯ ನಾದೆ ಆತ್ಮಹತ್ಯೆ ಯನ್ನು ಮಾಡಿಕೊಂಡು ಮಾನವನ್ನು ಕಾಪಾಡಿಕೊ,” ಎಂದು ಹೇಳಿದನು, ಪತಿಯ ಅನುಜ್ಞೆಯು ದೊರತ ಕೂಡಲೆ ರಾಮಾಬಾಯಿಯು ತನ್ನ ವೇಷವನ್ನು ಬಿಟ್ಟು, ಕಾವಿಬಟ್ಟೆಗಳನ್ನು ಉಟ್ಟುಕೊಂಡು, ದೊಡ್ಡ ಮಣಿಗಳ ಹಾರ ವನ್ನು ಧರಿಸಿ, ಮುಕ್ತಕೇಶಿನಿಯಾಗಿ ಫಕೀರಳಂತೆ ಆದಳು. ಆಮೇಲೆ ಒಂದು ಖಡ್ಗವನ್ನು ಬಚ್ಚಿಟ್ಟು ಕೊಂಡು, ಕೈಯಲ್ಲಿ ಫಿಟೀಲನ್ನು ಹಿಡಿದು ಯಾರಿಗೂ ತಿಳಿಯ ದಂತೆ ಹೊರಟು, ಶತ್ರು ಸೈನ್ಯವನ್ನು ಪ್ರವೇಶಿಸಿದಳು. ಅಲ್ಲಿ ಇದ್ದ ರಕ್ಷಕಭಟ ರೊಡನೆ ರಾಮಾಬಾಯಿಯು, “ನಾನು ಬಾದಷಹನನ್ನು ನೋಡಿ ಆಶೀರ್ವಾದ ಮಾಡುವುದಕ್ಕೆ ಬಂದೆನು. ನನ್ನನ್ನು ಆತನ ಬಳಿಗೆ ಕರೆದುಕೊಂಡು ಹೋಗಿ, ” ಎಂದು ಹೇಳಿದಳು. ಆಕೆಯ ಮೃದುಮಧುರ ವಚನಗಳಿಂದ, ಆಕೆಯು ದೊಡ್ಡ ಫಕೀರಳು ಎಂದು ಎಣಿಸಿ ಭಟರು ಆಕೆಯನ್ನು ಬಾದಷಹನ ಬಳಿಗೆ ಕರೆದುಕೊಂಡು ಹೋದರು. ರಾಮಾಬಾಯಿಯು ಅಲ್ಲಿಗೆ ಹೋದಮೇಲೆ ಯವನರ ಆಚಾರ ವನ್ನು ಅನುಸರಿಸಿ ಬಾದಷಹನಿಗೆ ಜೋಹಾರುಗಳನ್ನು ಮಾಡಿ ಆಶೀರ್ವಾದವನ್ನು ಮಾಡಿದಳು. ಅಕ್ಸರನು ಆಕೆಯ ಮುಖಲಕ್ಷಣವನ್ನು ಚೆನ್ನಾಗಿ ನೋಡಿ, “ ನೀನು ಯಾವ ಇಚ್ಛೆಯಿಂದ ಇಲ್ಲಿಗೆ ಬಂದೆ, ” ಎಂದನು. “ ಹಿಂದೂದೇಶದ ಚಕ್ರವರ್ತಿಗಳಾದ ನಿಮ್ಮನ್ನು ಆಶೀರ್ವಾದಮಾಡಿ, ಈಶ್ವರ ಭಜನೆಯಿಂದ ನಿಮ್ಮನ್ನು ಮೆಚ್ಚಿಸಿ ಬಹುಮಾನವನ್ನು ಪಡೆಯುವದಕ್ಕಾಗಿ ಬಂದೆನು, ” ಎಂದು ಆವೇಷಧಾರಿಣಿಯಾದ ಬೈರಾಗಿನಿಯು ಉತ್ತರವನ್ನು ಕೊಟ್ಟು, ಫಿಟೀಲನ್ನು ನುಡಿಸುತ್ತ ಒಂದು ಹಿಂದುಸ್ಥಾನಿ ಕೀರ್ತನೆಯನ್ನು ಹಾಡಲು ಪ್ರಾರಂಭಿಸಿದಳು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೦೬
ಗೋಚರ