೮೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆಕೆಯ ಅತಿ ಮಧುರವಾದ ಕಂಠಧ್ವನಿಯನ್ನು ಕೇಳಿ ಅಕ್ಷರನು ಪರವಶನಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಹಾಡಿಗೆ ಸರಿಯಾಗಿ ತಾಳವನ್ನು ಹಾಕುತಲಿದ್ದನು. ರಾಮಾಬಾಯಿಯು ಆಗ ಕತ್ತಿಯನ್ನು ತೆಗೆದುಕೊಂಡು ಬಾದಷಹನ ಕತ್ತನ್ನು ಕತ್ತರಿಸಲು ಯತ್ನಿಸಿದಳು. ಗಾನವು ನಿಂತುಹೋದದರಿಂದ ಅಕ್ಟರನು ಕಣ್ಣು ತೆರೆದು ನೋಡಲು ಖಡ್ಡ ಹಸ್ತಳಾದ ಯೋಗಿನಿಯು ಕಾಣಬಂದಳು. ಆತನು ಆಕೆಯು ಮಾಡಲು ಎಣಿಸಿದ ಕಾರ್ಯವನ್ನು ತಿಳಿದುಕೊಂಡು ಉಪಾಯದಿಂದ ಕತ್ತಿಯನ್ನು ಎಳೆದುಕೊಂಡನು. ತನ್ನ ಮನೋರಥವು ನಿಷ್ಪಲವಾದುದರಿಂದ ರಾಮಾಬಾಯಿಗೆ ದಿಗ್ಲ ಮೆಯು ಉಂಟಾಯಿತು. ಆಗ ಅಕ್ಟರನು, “ ನಿನ್ನ ಗಾನಕ್ಕೆ ಮೆಚ್ಚಿದೆನು. ನಿನಗೆ ಬೇಕಾ ದುದನ್ನು ಕೇಳು ಕೊಡುವೆನು. ನಿನ್ನ ಅಪರಾಧವನ್ನು ಕ್ಷಮಿಸಿದೆನು,” ಎಂದನು. ಆತನ ಮಾತುಗಳನ್ನು ಕೇಳಿ ರಾಮಾಬಾಯಿಯು ತನ್ನ ವೃತ್ತಾಂತವನ್ನು ಆತನಿಗೆ ತಿಳಿಸಿ, “ ಪ್ರಾಣದ ಮೇಲಿನ ಆಶೆಯನ್ನು ಬಿಟ್ಟು ನಾನು ಇಲ್ಲಿಗೆ ಬಂದೆನು. ನನ್ನ ಉದ್ದೇಶವು ನೆರವೇರಲಿಲ್ಲ. ಆದಕಾರಣ ನಾನು ಪುನಃ ನನ್ನ ಸೈನ್ಯದೊಳಕ್ಕೆ ಪ್ರವೇಶಿಸಲಾರೆನು, ನಿನ್ನ ಭಟರಲ್ಲಿ 'ಒಬ್ಬನನ್ನು ಕರೆದು ನನ್ನ ಶಿರಸ್ಸನ್ನು ಕತ್ತ ರಿಸುವಂತೆ ಅಪ್ಪಣೆ ಮಾಡು,” ಎಂದು ಹೇಳಿದಳು, ಅಕ್ಟರನು ಆಕೆಯ ಪ್ರಗಲ್ಲ ವಚನಗಳಿಗೆ ಆಶ್ಚರ್ಯಪಟ್ಟು, “ ನೀನು ಮಾಡುವುದಕ್ಕೆ ಪ್ರಯತ್ನಿಸಿದ ಕಾರ್ಯವು ಎಂತಹುದು. ಆದರೂ ನನ್ನ ಭಟರು ಒಬ್ಬ ಅಬಲೆಯ ಮೇಲೆ ತಮ್ಮ ಶಸ್ತ್ರ ನೈಪುಣ್ಯವನ್ನು ತೋರಿಸಲಾರರು. ನಾನು ಸ್ತ್ರೀಯರೊಡನೆ ಯುದ್ಧ ಮಾಡುವುದಕ್ಕೆ ಬರಲಿಲ್ಲ,” ಎಂದು ಹೇಳಿ, ಉದಾರಹೃದಯನಾದ ಡಿಲೀಶ್ವರನು ತನ್ನ ಮುಖ್ಯ ಭಟರನ್ನು ಕರೆದು, ಅವರ ಸಂಗಡ ರಾಮಾಬಾಯಿಯನ್ನು ಜಗಮುಲ್ಲನ ಬಗೆ ಕಳುಹಿಸಿದನು. ಅನಂತರ ರಾಮಾಬಾಯಿಯು ಅಧೈರ್ಯಯುತನಾಗಿದ್ದ ಪತಿಯನ್ನು ಕುರಿತು, “ ಪ್ರಾಣೇಶ್ವರನೇ ! ಚಿಂತಿಸಬೇಡ. ಈ ಮೇಚ್ಚರ ಕೈಯ್ದ ಳಿಂದ ನಾವು ಗಳು ಎಲ್ಲರೂ ಮೃತರಾಗುವ ಸಮಯವು ಸಂಭವಿಸಿ ಇರುವುದು ನಿಜ. ಆದರೆ ನಾವು ನಮ್ಮ ಪ್ರಾಣಗಳು ಹೋಗುವವರೆಗೂ ದೈನ್ಯವನ್ನು ಹೊಂದದೆ ಹೋರಾಡಿ ಸ್ವರ್ಗಸುಖವನ್ನು ಪಡೆಯೋಣ,” ಎಂದು ಬಹು ಬಗೆಯಲ್ಲಿ ಪತಿಗೆ ಧೈರ್ಯವನ್ನು ಉಂಟುಮಾಡುತ್ತ ಯುದ್ಧವನ್ನು ನಡೆಸುತಲಿದ್ದಳು. ಒಂದು ದಿವಸ ಅಕ್ಟರನ ಸೈನಿಕರು ಏಣಿಗಳನ್ನು ಹಾಕಿಕೊಂಡು ಬುರುಜು ಗಳ ಮೇಲಕ್ಕೆ ಹತ್ತಲು ಪ್ರಯತ್ನಿಸುತ್ತಿರಲು, ಅವರನ್ನು ತಡೆದು ಕೆಳಕ್ಕೆ ಬೀಳಿಸಿ, ತಮ್ಮ ಸೈನಿಕರಿಗೆ ಪ್ರೋತ್ಸಾಹವನ್ನು ಉಂಟುಮಾಡುತ್ತ ಜಗಮಲ್ಲ ನೂ, ರಾಮಾ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೦೭
ಗೋಚರ