ಅಬಲಾ ಸಚ್ಚರಿತ್ರ ರತ್ನ ಮಾಲೆ. ಕ್ಷಮಿಸುವುದು ಯುಕ್ತವಲ್ಲ. ನಾನು ಮರಣಕ್ಕೆ ಅಂಜುವುದಿಲ್ಲ, ಪ್ರಾಣೇಶ್ವರನ ಸಮಿಾಪಕ್ಕೆ ಹೋಗಬೇಕು ಎಂಬ ಆಶೆಯು ನನ್ನನ್ನು ತ್ವರೆಗೂಳಿಸುತಲಿದೆ. ಆದು ದರಿಂದ ನಿನ್ನ ಸೇವಕರಲ್ಲಿ ಒಬ್ಬನಿಗೆ, ನನ್ನನ್ನು ಯಮಸದನಕ್ಕೆ ಕಳುಹಿಸುವಂತೆ ಅಪ್ಪಣೆ ಮಾಡು,” ಎಂದು ನುಡಿದಳು. ಆಕೆಯ ಧೀರೋದಾತ್ತವಚನಗಳನ್ನು ಕೇಳಿ, ಬಾದಷಹನು ಚಿಂತಾಕ್ರಾಂತನಾಗಿ, “ ಎಲೌ ಶೂರನಾರೀ ರತ್ನವೇ ! ಶೂರ ಶ್ರೇಷ್ಠಳೂ, ಪತಿಪರಾಯಣೆಯೂ ಆದ ನಿನ್ನ ಮೇಲೆ ನನ್ನ ಶಸ್ತ್ರವನ್ನು ಹೇಗೆ ಉಪ ಯೋಗಿಸಲಿ! ನಾನು ಶೂರ ಪುರುಷರೊಡನೆ ಯುದ್ಧ ಮಾಡುವೆನೇ ಹೊರತು ಸ್ತ್ರೀಯರಿಗೆ ಒಂದು ಸುಳ್ಳನ್ನು ಕೂಡ ತಗಲಿಸಲಾರೆನು, ನಿನ್ನ ಪತಿಯು ಸ್ವರ್ಗಸ್ಸನಾದುದಕ್ಕೆ ನನಗೂ ಬಹಳ ವ್ಯಸನವಾಗಿದೆ. ನಿಮ್ಮನ್ನು ನನ್ನ ಅಂಕಿತ ರಾಗಿ ಮಾಡುವುದು ನನ್ನ ಕೆಲಸವೇ ವಿನಹ ನಿಮ್ಮನ್ನು ಕೊಲ್ಲಬೇಕು ಎಂಬ ಉದ್ದೇಶವು ನನಗೆ ಇಲ್ಲ, ಆದರೆ ಗತಿಸಿದ ವಿಷಯಕ್ಕೆ ಚಿಂತಿಸಿ ಫಲವಿಲ್ಲ. ಈಗ ಲಾದರೂ ನೀವು ನನ್ನ ಸಾಮಂತರಾಗಿ ಇರಲು ಒಪ್ಪಿಕೊಂಡರೆ, ಯುದ್ದವನ್ನು ನಿಲ್ಲಿಸಿ, ನಿಮ್ಮ ದೇಶವಾಸಿಗಳಿಗೆ ಅಭಯವನ್ನು ಕೊಡುವೆನು,” ಎಂದನು. ಅದಕ್ಕೆ ರಾಮಾಬಾಯಿಯು, “ ಈ ಚಿತ್ತೂರು ಸಂಸ್ಥಾನದಲ್ಲಿ ರಾಜಪುತ್ರರು ಇರುವವರೆಗೂ, ಈ ರಾಜ್ಯವು ನಿಮಗೆ ದೊರೆಯಲಾರದು. ರಾಜಪುತ್ರರ ಶರೀರದಲ್ಲಿ ಪ್ರಾಣವು ಇರುವವರೆಗೂ ಅವರು ನಿಮ್ಮೊಡನೆ ಯುದ್ಧ ಮಾಡುವರೇ ಹೊರತು ದೀನರಂತೆ ನಿಮಗೆ ಶರಣಾಗತರಾಗಲಾರರು. ಅವರೆಲ್ಲರೂ ಹತರಾದ ಮೇಲೆ ನೀವು ನಿಮ್ಮ ಇಷ್ಟದಂತೆ ಮಾಡಬಹುದು,” ಎಂದು ಹೇಳಿದಳು. ಆಗ ಅಕ್ಟರನು, “ ನೀವು ಮೇಚ್ಛರು ದುಷ್ಟರು ಎಂದು ನಮ್ಮನ್ನು ನಿಂದಿಸುವಿರಿ, ಆದರೆ ನಿಮಗೂ ನನಗೂ ಇರುವ ಭೇದವನ್ನು ಹೇಳುವೆನು ಕೇಳು. ನೀನು ನನ್ನನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡಿದೆ. ಈಗಲೂ ನನ್ನನ್ನು ಕೊಲ್ಲಲು ಕೃತನಿಶ್ಚಯಳಾಗಿಯೇ ಇರುವೆ. ನಾನು ನಿಮ್ಮ ಹಿತಕ್ಕಾಗಿ ಹೇಳುವ ಮಾತುಗಳನ್ನು ನೀನು ಕೇಳು ವುದಿಲ್ಲ, ನೀನು ನನ್ನ ಕೈಗೆ ಇಷ್ಟು ಸಲ ಸಿಕ್ಕಿದರೂ, ನಾನು ನಿನ್ನನ್ನು ಶಿಕ್ಷಿಸದೆ ಬಿಟ್ಟೆನು. ಇದರಿಂದಲೇ ನೀವು ಕೂರರು ಎಂತಲೂ, ನಾವು ಸಾಧುಗಳು ಎಂತಲೂ ತಿಳಿಯಬಹುದು ಅಲ್ಲವೇ ?” ಎಂದು ಹೇಳಿ, ತನ್ನ ಸೇವಕರನ್ನು ಕರೆದು, “ ರಾಮಾ ಬಾಯಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕೋಟೆಯೊಳಗೆ ಬಿಟ್ಟು ಬನ್ನಿರಿ,” ಎಂದು ಆಜ್ಞಾಪಿಸಿದನು. ರಾಮಾಬಾಯಿಯು ತನ್ನ ಪ್ರಯತ್ನವು ನಿರರ್ಥಕವಾದುದಕ್ಕೆ ಚಿಂತಿಸುತ್ತ, ಸ್ವಜಾತಿ ನಿಂದೆಯನ್ನು ಕೇಳಿದುದರಿಂದ ರೋಷಾರುಣಲೋಚನಳಾಗಿ, ಪಂಜರಾಬದ್ದವಾದ ಸಿಂಹದಂತೆ ಏನೂ ಮಾಡಲಾರದೆ, ತನ್ನ ಮಕ್ಕಳ ಬಳಿಗೆ ಹೋದಳು. ಆ ಮೇಲೆ ಆಕೆಯು ಕಿಲ್ಲೆ ಯೊಳಗೆ ಇರುವ ರಾಜಪುತ್ರರನ್ನೆಲ್ಲ ಕರೆ ಯಿಸಿ, ಒಂದು ಸಭೆಯನ್ನು ಮಾಡಿ, “ ಓ ಕ್ಷತ್ರಿಯ ವೀರರೇ! ಇದುವರೆಗೂ ನೀವು ನಮ್ಮ ಸಂಸ್ಥಾನವನ್ನು ರಕ್ಷಿಸುವುದಕ್ಕಾಗಿ ಬಹು ಶೌರ್ಯದೊಡನೆ ಯುದ್ಧವನ್ನು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೦೯
ಗೋಚರ