ರಾಣಿ ರಾಮಾ ಬಾಯಿ. ೮೫ ಮಾಡಿದಿರಿ, ನಿಮ್ಮ ಬಂಧುಗಳಲ್ಲಿ ಅನೇಕರು ಈ ಯುದ್ದದಲ್ಲಿ ಮೃತರಾದರು. ನಾವು ಇಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಕೊನೆಗೆ ಜಯಲಕ್ಷ್ಮಿಯು ಶತ್ತು ಗಳನ್ನೇ ಸೇರುವಳು ಎಂಬುದು ನಿಶ್ಚಯ, ಕೆಲವು ದಿವಸಗಳಲ್ಲಿ ಯೇ ಮೇಚೂರು ಕೋಟೆಯ ಒಳಗೆ ಪ್ರವೇಶಿಸುವರು. ಆದಕಾರಣ ನೀವು ಪ್ರಾಣಗಳ ಮೇಲೆ ಆಶ ಯನ್ನು ಬಿಟ್ಟು ರಣರಂಗದಲ್ಲಿ ನಿಮ್ಮ ಶೌರ್ಯವನ್ನೆಲ್ಲ ತೋರಿಸಿ ವೀರಶಯನವನ್ನು ಅಲಂಕರಿಸಿರಿ, ಇದೇ ಕ್ಷಾತ್ರಧರ್ಮವು, ” ಎಂದು ಅವರೊಡನೆ ಸಂಭಾಷಿಸಿದಳು. ಆಗ ಅವರಲ್ಲಿ ಒಬ್ಬ ಸರದಾರನು, “ ತಾಯಿಯೇ ! ನಾವು ಈ ವಿಧದಿಂದ ವ್ಯರ್ಥ ವಾಗಿ ಪ್ರಾಣವನ್ನು ಕಳೆದುಕೊಳ್ಳುವುದಕ್ಕಿಂತಲೂ ಬಾದಷಹನೊಡನೆ ಸಂಧಿಯನ್ನು ಮಾಡಿಕೊಳ್ಳುವುದು ಒಳ್ಳೆಯದಲ್ಲ ವೇ ?” ಎಂದನು. ಆ ಮಾತುಗಳನ್ನು ಕೇಳಿ ರಾಮಾಬಾಯಿಯು ಸಹಿಸಲಾರದ ಆಗ್ರಹದೊಡನೆ, “ ನನ್ನ ಪತಿಯನ್ನು ಕೊಂದ ದುರ್ಮಾರ್ಗನೊಡನೆ ಸಂಧಿಯನ್ನು ಮಾಡಿಕೊಳ್ಳುವಂತೆ ಹೇಳಲು ನಿನಗೆ ಬಾಯಿಯು ಹೇಗೆ ಬಂದಿತು? ನಿನ್ನ ಮುಖವನ್ನು ನೋಡಲಾರೆನು. ಈಕ್ಷಣವೇ ನನ್ನ ಸಮುಖದಿಂದ ಎದ್ದು ಹೋಗು, ” ಎಂದಳು. ರಾಮಾಬಾಯಿಯು ಹೀಗೆ ಹೇಳಿದ ಕೂಡಲೆ, ಅಲ್ಲಿ ಇದ್ದವರು ಎಲ್ಲರೂ ಆತನನ್ನು ತಿರಸ್ಕಾರವಾಗಿ ನೋಡಲು, ಆತನು ಅತ್ಯಂತಲಜ್ಜೆಯಿಂದ ತಲೆಯನ್ನು ಬಗ್ಗಿಸಿಕೊಂಡು ಹೊರಟುಹೋದನು. ಅನಂತರ ರಾಮಾಬಾಯಿಯು ಅವರನ್ನು ನೋಡಿ ಅವರ ಸ್ವಾಮಿಭಕ್ತಿಗೆ ಸಂತೋಷಿಸಿ, “ ನೀವುಗಳು ಕ್ಷತ್ರಿಯ ಧರ್ಮವನ್ನು ಬಲ್ಲವರು. ಶತ್ರುವು ಎಷ್ಟು ಒಳ್ಳೆಯವನಾದರೂ, ಅವನು ನಮ್ಮ ಸ್ವಾತಂತ್ರವನ್ನು ನಷ್ಟ ಮಾಡುವುದಕ್ಕೆ ಬಂದು ಇರುವುದರಿಂದ, ನಾವು ಅವನೊಡನೆ ಯುದ್ಧವನ್ನು ಮಾಡಬೇಕೇ ಹೊರತು ಸಂಧಿಯನ್ನು ಮಾಡಕೂಡದು. ಯುದ್ಧದಲ್ಲಿ ಸಾಯುವುದು ಕ್ಷತ್ರಿಯ ನಿಗೆ ವಿವಾಹಕ್ಕೆ ಸಮಾನವಾದುದು ; ಸಂಧಿಯನ್ನು ಮಾಡಿಕೊಂಡು ಜೀವಿಸಿ ಇರು ವುದು ಮೃತ್ಯುವಿಗೆ ಸಮಾನವಾದುದು; ಉತ್ತಮ ಕ್ಷತ್ರಿಯರಾದ ನೀವು ಎಂತಹ ಮರಣವನ್ನು ಅಪೇಕ್ಷಿಸುವಿರೋ ಎಂಬುದನ್ನು ನಾನು ಹೇಳತಕ್ಕ ಅವಶ್ಯಕವು ಇಲ್ಲ.” ಎಂದು ಹೇಳಿದಳು. ಆಗ ಅವರು ಎಲ್ಲ ರೂ ಐಕ್ಯ ಕಂಠದೊಡನೆ, “ ನಾವು ಎಲ್ಲರೂ ನಮ್ಮ ರಾಣಿಗೋಸ್ಕರವೂ, ರಾಜ್ಯಕ್ಕೋಸ್ಕರವೂ ಪ್ರಾಣದ ಮೇಲೆ ಇರುವ ಆಶೆಯನ್ನು ತ್ಯಜಿಸಿ, ವೈರಿಗಳೊಡನೆ ಹೋರಾಡಿ ಭೂದೇವಿಗೆ ರಕ್ತದಿಂದ ಸ್ನಾನವನ್ನು ಮಾಡಿಸಿ, ನಮ್ಮ ಶಿರಗಳನ್ನು ಆಕೆಗೆ ಅರ್ಪಿಸುವೆವು, ” ಎಂದು ಗರ್ಜಿಸಿದರು. ಅನಂ ತರ ರಾಮಾಬಾಯಿಯು ಅವರಿಗೆ ಅಪ್ಪಣೆಯನ್ನು ಕೊಟ್ಟು ರಣಭೂಮಿಗೆ ಕಳುಹಿಸಿ ದಳು, ಅವರು ಹೊರಟುಹೋದ ಮೇಲೆ ಆಕೆಯು ತನ್ನ ಪುತ್ರಿಯರಾದ ಚಂದ್ರಾ ವತಿ, ಲೀಲಾವತಿಯರನ್ನು ಸಮಿಾಪಕ್ಕೆ ಕರೆದು, ಅವರನ್ನು ತನ್ನೊಡನೆ ಸರ ಲೋಕಕ್ಕೆ ಬರುವಂತೆ ಹೇಳಲಾರದೆ ಚಿಂತಿಸುತಲಿದ್ದಳು. ಆಗೈ ಚಂದ್ರಾವತಿಗೆ ಹದಿ ನೇಳು ವರುಷಗಳು, ಲೀಲಾವತಿಗೆ ಹದಿನೈದು ವರುಷಗಳು, ಯೌವನಾವಿರ್ಭಾವ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೦
ಗೋಚರ