ಆ೩ ಅಬಲಾ ಸಚ್ಚರಿತ್ರ ರತ್ನ ಮಾಲೆ. ದಿಂದ ವಿಶೇಷ ಸುಂದರರಾಗಿ ಕಾಣಬರುತಲಿದ್ದ ಪುತ್ರಿಯರನ್ನು ನೋಡಿ ರಾಮಾ ಬಾಯಿಯು ಸ್ವಲ್ಪ ಹೊತ್ತು ದುಃಖಿಸಿ, ಆಮೇಲೆ ಧೈರ್ಯವನ್ನು ತಾಳಿ, “ ನಾನು ಎಷ್ಟು ಪ್ರಯತ್ನಪಟ್ಟರೂ ನಮಗೆ ಜಯವು ಉಂಟಾಗದೆ ದೌರ್ಭಾಗ್ಯವಶದಿಂದ ರಾಜ್ಯವು ತುರುಕರ ಪಾಲಾಗಬೇಕಾಯಿತು. ಆದುದರಿಂದ ನಾವು ಎಲ್ಲರೂ ಅಗ್ನಿ ದೇವನನ್ನು ಆಶ್ರಯಿಸಿ ಅಪವಿತ್ರರಾದ ಯವನರ ಕೈಗೆ ಸಿಕ್ಕದೆ ಶಾಶ್ವತ ಸುಖಪ್ರದ ವಾದ ಸ್ವರ್ಗಕ್ಕೆ ಹೋಗಬೇಕು ಎಂದು ನಾನು ನಿಶ್ಚಯಿಸಿದೆನು. ನೀವು ಈ ಲೋಕದಲ್ಲಿ ಯೇ ಇದ್ದು ಅನೇಕ ದುಃಖಗಳನ್ನು ಅನುಭವಿಸಲು ಅಪೇಕ್ಷಿಸುವಿರೋ ಅಥವಾ ಪತಿವ್ರತೆಯರು ಹೋಗುವ ಪರಮಪದಕ್ಕೆ ಹೋಗಲು ಅಪೇಕ್ಷಿಸುವಿರೋ ಬೇಗ ಹೇಳಿರಿ,” ಎಂದು ಪುತ್ರಿಯರನ್ನು ಕೇಳಿದಳು. ಅದಕ್ಕೆ ಚಂದ್ರಾವತಿಯು ಅತ್ಯುತ್ಸಾಹದೊಡನೆ, “ ಅಮಾ! ನಾವು ರಾಜಕನೈಯರಾಗಿ ಜನ್ನಿಸಿ ಪ್ರಾಣವನ್ನು ಬಚ್ಚಿಟ್ಟು ಕೊಳ್ಳುವುದಕ್ಕೆ ಯತ್ನಿಸುವೆವೇ? ಈ ಸ್ಥಿತಿಯಲ್ಲಿ ಜೀವಿಸಿ, ಮೊಗಲರ ಕೈಗೆ ಸಿಕ್ಕಿ ಮಾನಹಾನಿಯನ್ನು ಹೊಂದುವುದಕ್ಕೆ ನಾವು ಹೇಗೆ ತಾನೇ ಅಪೇಕ್ಷಿಸ ಬಲ್ಲೆವು ? ನಮ್ಮ ಪೂರ್ವಿಕರು ಇಂತಹ ಸಂಕಟಸಮಯದಲ್ಲಿ ಮಾಡಿದ ಸ್ತುತ್ಯ ಕೃತ್ಯಗಳನ್ನು ಮಾಡುವುದಕ್ಕೆ ನಾವು ಸಿದ್ಧರಾಗಿ ಇದೇವೆ,” ಎಂದಳು. ಆ ಬಾಲಿಕೆಯ ಧೀರವಚನಗಳನ್ನು ಕೇಳಿ ರಾಮಾಬಾಯಿಯು ಸಂತೋಷಿಸಿ, ಅವರನ್ನು ಆಲಂಗಿಸಿ ಕೊಂಡು, ಇಂತಹ ಸುಗುಣವತಿಯರಾದ ಈ ಬಾಲಿಕೆಯರು ಇನ್ನು ಕೆಲವು ಕಾಲದ ವರೆಗೂ ಈ ಪ್ರಪಂಚದಲ್ಲಿ ಇದ್ದರೆ ಎಷ್ಟು ಘನಕಾರ್ಯಗಳನ್ನು ನೆರವೇರಿಸುತಲಿ ದರೋ ಎಂದು ನೆನೆಸಿ, ದುಃಖವನ್ನು ತಡೆಯಲಾರದೆ ರೋದಿಸಿದಳು. ಆ ಬಾಲಿಕೆ ಯರೂ ಆರ್ತನಾದದೊಡನೆ ಶೋಕಿಸಿದರು. ಮನೋದುಃಖವು ಬಾಷ್ಪರೂಪ ವಾಗಿ ಹೊರಗೆ ಬಂದಮೇಲೆ, ರಾಮಾಬಾಯಿಯು ತನ್ನ ದುಃಖವನ್ನು ತಡೆದು, ಪುತ್ರಿಯರಿಗೆ ಧೈರ್ಯವನ್ನು ಹೇಳಿ, ಅವರನ್ನು ಕರೆದುಕೊಂಡು ಯುದ್ಧ ಸನ್ನದ್ದ ರಾದ ರಾಜ ಪುತ್ರರ ಬಳಿಗೆ ಹೋಗಿ, ಅವರೊಡನೆ, “ ನೀವು ಎಲ್ಲರೂ ನಾಳೆಯ ಪ್ರಾತಃಕಾಲಕ್ಕೆ ಯುದ್ಧರಂಗವನ್ನು ಸೇರಿ, ಪ್ರಾಣಗಳು ಹೋದವು ಎಂದೇ ಭಾವಿಸಿ ಯುದ್ದ ಮಾಡಿ ಮುಕ್ತಿಯನ್ನು ಪಡೆಯಬೇಕು,” ಎಂದು ಆಜ್ಞಾಪಿಸಿದಳು. ಆ ಮೇಲೆ ಅವರ ಪತ್ನಿಯರ ಸಮಿಾಪಕ್ಕೆ ಹೋಗಿ, “ ನಿಮ್ಮ ಪುರುಷರು ಯುದ್ದಕ್ಕೆ ಹೋದ ಕೂಡಲೆ ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದು ಚಿತೆಯನ್ನು ಸಿದ್ದ ಪಡಿಸಿಕೊಂಡು, ಅದರಲ್ಲಿ ಕುಳಿತು ಚಿತೆಗೆ ಬೆಂಕಿಯನ್ನು ಹಚ್ಚಿಕೊಳ್ಳಬೇಕು, ಅದ ರಿಂದ ನೀವು ಪತಿವ್ರತೆಯರು ಹೋಗುವ ಪರಮಪದಕ್ಕೆ ಹೋಗುವಿರಿ, ಮತ್ತು ಮೊಗಲರು ಪಟ್ಟಣವನ್ನು ಪ್ರವೇಶಿಸಿದಾಗ ಅಲ್ಲಿ ಉರಿಯೂ, ಹೊಗೆಯೂ, ಭಸ್ಮ ರಾಶಿಗಳೂ ವಿನಹ ಇನ್ನೇನೂ ಅವರಿಗೆ ಕಾಣಬಾರದು,” ಎಂದು ಅವರಿಗೆ ಹೇಳಿ, ರಾಮಾಬಾಯಿಯು ಸ್ವಮಂದಿರಕ್ಕೆ ಹೋಗಿ ಆ ರಾತ್ರಿಯನ್ನೆಲ್ಲ ಈಶ್ವರ ಪ್ರಾರ್ಥನೆ ಯಲ್ಲಿ ಕಳೆದಳು. ಪುರಸ್ತ್ರೀಯರು ತಮ್ಮತಮ್ಮ ಯತ್ನದಲ್ಲಿ ಇದ್ದರು.
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೧
ಗೋಚರ