ರಾಣಿ ರಾಮಾ ಬಾಯಿ. ೮೬ ಪ್ರಾತಃಕಾಲವಾದ ಕೂಡಲೆ ರಾಜ ಪುತ್ರರು ಯುದ್ಧ ಸನ್ನದ್ದರಾಗಿ, ಒಬ್ಬೊಬ್ಬ ರಾಗಿ ಹೊರಟು ಕೋಟೆಯ ದ್ವಾರದಬಳಿಯಲ್ಲಿ ಸೇರಿದರು, ಅವರ ಮನೋ ವಿಕಾರಗಳು ಎಲ್ಲವೂ ಏಕವಾಗಿ ಶತ್ರುಸಂಹಾರೇಚ್ಛೆಯಾಗಿ ಪರಿಣಮಿಸಿ ಇದ್ದುದ ರಿಂದ, ಆ ಸಮಯದಲ್ಲಿ ಅವರು ಪ್ರತ್ಯಕ್ಷರಾದ ಕಾಲಾಂತಕರಂತೆ ಕಂಡುಬಂದರು. ಅವರ ಪತ್ನಿಯರು ತಮ್ಮ ಪ್ರಿಯ ಪತಿಗಳ ಕಡೆಯ ಸಂದರ್ಶನಕ್ಕಾಗಿ ಅಲ್ಲಿಗೆ ಬಂದು, ' ಈ ಗಳಿಗೆಯು ಕಳೆದರೆ ಪುನಃ ಅವರನ್ನು ನೋಡಲಾರೆವು, ” ಎಂದು ಎಣಿಸಿ ತಮ್ಮ ಪ್ರಿಯಪತಿಗಳನ್ನೂ, ಸುತರನ್ನೂ, ಸೋದರರನ್ನೂ ಆಲಂಗಿಸಿ ಕೊಳ್ಳುತ್ತಲೂ, ನಮಸ್ಕರಿಸುತ್ತಲೂ, ತೃಪ್ತರಾಗದೆ ನೋಡುತ್ತಲೂ ಇದ್ದ ರು. ಅವರ ನಡುವೆ ಪೂಜ್ಯಳಾದ ರಾಮಾಬಾಯಿಯು ಪುತ್ರಿಯರೊಡನೆ ನಿಂತುಕೊಂಡು, ಆ ನರವೀರರನ್ನೂ, ವೀರಪತ್ನಿಯರನ್ನೂ ಅತ್ಯಂತ ಖೇದದೊಡನೆ ನೋಡುತಲಿದ್ದಳು. ಆ ಸ್ತ್ರೀ ಪುರುಷರೆಲ್ಲರೂ ಒಂದು ಮುಹೂರ್ತ ಕಾಲದವರೆಗೆ ಗಟ್ಟಿಯಾಗಿ ರೋದಿಸಿ ದರು. ಆಮೇಲೆ ರಾಮಾಬಾಯಿಯು ಧೈರ್ಯವನ್ನು ತಳೆದು ದೀರ್ಘಸ್ವರ ದೊಡನೆ, “ ರಾಜಪುತ್ರರೇ ! ನೀವು ನಿಮ್ಮ ಶರೀರಗಳೊಡನೆ ನಿಮ್ಮ ಸ್ತ್ರೀಯರ ಮಾನ ಧನವನ್ನು ಸಹ ಮೇಚ್ಚರಿಗೆ ಒಪ್ಪಿಸಲು ನಿಶ್ಚಯಿಸಿರುವಿರೇನು ?” ಎಂದಳು, ಈ ಮಾತುಗಳು ಅವರ ಕರ್ಣಗಳಿಗೆ ಶೂಲಗಳಂತೆ ತೋರಲು, ಅವರು ಎಲ್ಲರೂ “ ಇಲ್ಲ, ಇಲ್ಲ, ” ಎಂದು ಹೇಳಿದರು. ಆಗ ಆಕೆಯು, “ ಹಾಗಾದರೆ ಪುರುಷರು ಯುದ್ದ ಕಾರ್ಯಕ್ಕೂ, ಸ್ತ್ರೀಯರು ಅಗ್ನಿ ಪ್ರವೇಶಕಾರ್ಯಕ್ಕೂ ಹೊರಡಿ. ಸಾವ ಕಾಶ ಮಾಡಬೇಡಿ,” ಎಂದು ಆಜ್ಞಾಪಿಸಿದಳು. ಕೂಡಲೆ ಅವರು ತಂತಮ್ಮ ಕಾರ್ಯಗಳಿಗೆ ಹೊರಟುಹೋದರು. ಆ ದಿವಸ ಮೊಗಲರು ಕೋಟೆಯ ದ್ವಾರವನ್ನು ಹೇಗಾದರೂ ಒಡೆದು ಒಳಕ್ಕೆ ಹೋಗಬೇಕು ಎಂದು ಯತ್ನಿಸುತಲಿದ್ದರು. ಅಷ್ಟರಲ್ಲಿ ಕೋಟೆಯ ಪೂರ್ವ ದ್ವಾರವನ್ನು ತೆರೆದುಕೊಂಡು, ಅನೇಕಜನ ರಾಜಪುತ್ರರು, “ ಹರಹರ ಮಹಾ ದೇವ,” ಎಂಬ ರಣನಾದವನ್ನು ಮಾಡುತ್ತ ಹೊರಟು ಬಂದರು. ಅವರ ಭಯಂಕರವಾದ ಉಗ್ರತೆಯನ್ನು ನೋಡಿ ತುರುಕರು ಸ್ವಲ್ಪ ಹಿಂದಕ್ಕೆ ಸರಿದರು. ಆಮೇಲೆ ಎರಡು ಕಡೆಯವರೂ ಘೋರವಾಗಿ ಯುದ್ಧ ಮಾಡತೊಡಗಿದರು. ಒಂದು ಕಡೆ ಹತಾಶರಾದರೂ ಶೌರ್ಯದೊಡನೆ ಹೋರಾಡುವ ರಾಜಪುತ್ರರನ್ನೂ, ಇನ್ನೊಂದು ಕಡೆ ಇವರನ್ನು ಗೆದ್ದರೆ ರಾಜ್ಯವು ನಮ್ಮದೇ ಎಂಬ ಉತ್ಸಾಹದೊಡನೆ ಹೋರಾಡುವ ಯವನರನ್ನೂ ಉ೦ಟಾಗಿ ಇದ್ದ ಆ ಯುದ್ದವು, ಹದಿನೆಂಟನೆಯ ದಿನದ ಪ್ರಾತಃಕಾಲದ ಭಾರತಯದ್ದಕ್ಕೆ ಸಮನಾಗಿ ತೋರಿತು. ರಾಜಪುತ್ರರನ್ನು ಶೀಘ್ರವಾಗಿ ಕೊಂದು, ಕೋಟೆಯನ್ನು ಪ್ರವೇಶಿಸಬೇಕು ಎಂದು ಮೊಗಲರು ತಮ್ಮ ಶೌರ್ಯವನ್ನೆಲ್ಲ ಉಪಯೋಗಿಸಿ ಯುದ್ದ ಮಾಡುತಲಿದ್ದರು. “ ಆರಿ ಹೋಗುವ ದೀಪಕ್ಕೆ ಕಾಂತಿಯು ಹೆಚ್ಚುವುದು,” ಎಂಬ ಗಾದೆಯಂತೆ ರಾಜಪುತ್ರರು ವೀರಾವೇಶ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೨
ಗೋಚರ