ಕುಮಾರೀ ಪ್ರೇಮದೇವಿ. ದೇವಿಯು ವಿದ್ಯೆಯಲ್ಲಿ ವಿಶೇಷ ಪ್ರೀತಿಯುಳ್ಳವಳಾಗಿ ಜ್ಞಾನವನ್ನು ಅಭಿವೃದ್ಧಿಪಡಿಸಿ ಕೊಳ್ಳುತಲಿದ್ದಳು. ಬಾಲ್ಯದಿಂದಲೂ ಈಕೆಯು ಈಶ್ವರನಲ್ಲಿ ಅಧಿಕ ಭಕ್ತಿಯುಳ್ಳವಳಾಗಿ ಇದ್ದಳು. ಈಶ್ವರನು ಸಕಲಮಾನವರ ಪ್ರಾರ್ಥನೆಯನ್ನು ಕೇಳಿ ಅವರ ಮನೋರಥಗಳನ್ನು ಪೂರ್ತಿಮಾಡುವನು ಎಂದು ಈಕೆಯು ನಂಬಿಇದ್ದಳು. ಆದಕಾರಣ ಪ್ರತಿ ದಿನವೂ ಪ್ರಾತಃಸಾಯಂಕಾಲಗಳಲ್ಲಿ ಈಕೆಯು ಈಶ್ವರನನ್ನು ಪ್ರಾರ್ತಿಸುತ್ತಿದಳು. ಬಾಲ್ಯದಲ್ಲಿಯೇ ಈಕೆಗೆ ಇರುವ ಈಶ್ವರಭಕ್ತಿಯನ್ನು ನೋಡಿ ಈಕೆಯ ತಾಯಿ ತಂದೆಗಳು ಬಹಳ ಸಂತೋಷಪಡುತಲಿದ್ದರು, ಪ್ರೇಮದೇವಿಗೆ ಹನ್ನೆರಡು ವರುಷ ಗಳು ವಯಸ್ಸು ಆಗುವ ಹೊತ್ತಿಗೆ ಆಕೆಯು ಅನೇಕ ಧರ್ಮಗ್ರಂಥಗಳನ್ನು ಪರಿಶೋಧಿಸಿದಳು. ಕೊನೆಗೆ ಜಗತ್ತಿನಲ್ಲಿ ಇರುವ ಸೌಖ್ಯಗಳು ಎಲ್ಲವೂ ತುಚ್ಛ ಗಳು ಎಂತಲೂ, ಈಶ್ವರಭಜನೆಯಿಂದಲೂ, ಪರೋಪಕಾರದಿಂದಲೂ ಉಂಟಾ ಗುವ ಸೌಖ್ಯವೇ ನಿಜವಾದ ಸೌಖ್ಯವು ಎಂತಲೂ ಆಕೆಯು ನಿಶ್ಚಯಿಸಿದಳು. ೧೮೮೨ ನೆಯ ಇಸವಿಯಲ್ಲಿ ಎಸ್. ರ್ಎ, ಅಗ್ನಿಹೋತ್ರಿ ಎಂಬ ಧರ್ಮಶೀಲನು ಒಬ್ಬನು 'ದೇವಧರ್ಮ' ಎಂಬ ಒಂದು ನವೀನ ಧರ್ಮವನ್ನು ಸ್ಥಾಪಿಸಿ ಅದನ್ನು ಪ್ರಜೆಗಳಿಗೆ ಉಪದೇಶವನ್ನು ಮಾಡುತಲಿದ್ದನು. ಪ್ರೇಮದೇವಿಯು ಈ ಸಮಾ ಚಾರವನ್ನು ಕೇಳಿ ಆ ಮಹಾತ್ಮನನ್ನು ನೋಡಬೇಕು ಎಂದು ಅಪೇಕ್ಷಿಸಿದಳು. ಕೆಲವು ದಿವಸಗಳಿಗೆ ಅಗ್ನಿಹೋತ್ರಿಯು ವಾಸಮಾಡುತಲಿದ್ದ ಗುಜರಾವಲೀ ಗ್ರಾಮಕ್ಕೆ ದೇವೀಪ್ರಸಾದನನ್ನು ಗವರ ಮೆಂಟಿನವರು ವರ್ಗಮಾಡಿದರು. ಅಗ್ನಿ ಹೋತ್ರಿಯ ಉಪದೇಶದಿಂದ ಪ್ರೇಮದೇವಿಯ ಮನಸ್ಸು ಪರಿಶುಭ್ರವಾಯಿತು. ಆದುದರಿಂದ ಆಕೆಯು ತನ್ನ ಜನ್ಮವನ್ನು ಪರೋಪಕಾರದಲ್ಲಿಯೇ ಕಳೆಯಲು ನಿಶ್ನ ಯಿಸಿದಳು. ಆಗೋ ಆಕೆಯ ವಯಸ್ಸು ಹದಿನಾಲ್ಕು ವರುಷಗಳು ! ಆಮೇಲೆ ಕೆಲವು ದಿವಸಗಳಿಗೆ ಬ್ರಹ್ಮಸಮಾಜವಾರ್ಷಿಕೋತ್ಸವವನ್ನು ನೋಡುವುದಕ್ಕಾಗಿ ಆಕೆಯು ತಂದೆಯೊಡನೆ ಲಾಹೋರು ಪಟ್ಟಣಕ್ಕೆ ಹೋದಳು. ಅಲ್ಲಿ ನಡೆದ ಉಪನ್ಯಾಸಗಳನ್ನೂ, ಧರ್ಮಚರ್ಚೆಗಳನ್ನೂ, ಪ್ರಾರ್ಥನೆಗಳನ್ನೂ ಕೇಳಿ ಆಕೆಯ ಹೃದಯವು ದ್ರವೀಭೂತವಾಗಿ, ಅಲ್ಲಿಯೇ ಯೋಗಿನಿಯಾಗಿ ಸತ್ಸಂಗದಲ್ಲಿ ಇರಬೇಕು ಎಂದು ಆಕೆಗೆ ಇಷ್ಟವು ಉಂಟಾಯಿತು, ಆದರೆ ತಂದೆಯ ನಿರ್ಬಂಧ ದಿಂದ ಪ್ರೇಮದೇವಿಯು ಅಮೃತಸರ್ ಪಟ್ಟಣಕ್ಕೆ ಹೋದಳು, ಈಕೆಯು ಅಲ್ಲಿಗೆ ಹೋದ ಕೆಲವು ದಿವಸಗಳಿಗೆ, ಲಾಹೋರಿನಲ್ಲಿ ಸ್ತ್ರೀಯರಿಗೆ ವೈದ್ಯಶಾಸ್ತ್ರವನ್ನು ಕಲಿಸುವುದಕ್ಕಾಗಿ ಒಂದು ಪಾಠಶಾಲೆಯು ಸ್ಥಾಪಿತವಾಯಿತು. ಆಮೇಲೆ ದೇವೀ ಪ್ರಸಾದನು ವೈದ್ಯಶಾಸ್ತ್ರವನ್ನು ಕಲಿಯುವುದಕ್ಕಾಗಿ ಪ್ರೇಮದೇವಿಯನ್ನು ಲಾಹೋ ಆಗೆ ಕಳುಹಿಸಿದನು. ಅಲ್ಲಿ ಈಕೆಯು ವೈದ್ಯಶಾಸ್ತ್ರವನ್ನು ಅಭ್ಯಸಿಸುತ್ತ, ಸಮ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೬
ಗೋಚರ