t೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಯವು ದೊರೆತಾಗ ಬ್ರಾಹ್ಮತತ್ವಗಳನ್ನು ಓದುತ್ತ ಆನಂದದಿಂದ ಕಾಲವನ್ನು ಕಳೆ ಯುತ್ತ ಇದ್ದಳು. ಇಷ್ಟರಲ್ಲಿ ಬ್ರಾಹ್ಮಸಮಾಜದ ದ್ವಿತೀಯವಾರ್ಷಿಕೋತ್ಸವವು ನಡೆಯಿತು. ಅಲ್ಲಿ ನಡೆದ ಉಪನ್ಯಾಸಗಳನ್ನೆಲ್ಲ ಕೇಳಿದಮೇಲೆ, ಪ್ರೇಮದೇವಿಯು ಎದ್ದು ನಿಂತು ಗದ್ದದ ಕಂಠದೊಡನೆ ಈಶ್ವರನನ್ನು ಪ್ರಾರ್ಥಿಸಿ, ತನ್ನ ಜೀವಿತವನ್ನು ಆತನಿಗೆ ಸಮರ್ಪಿಸಿದೆನು ಎಂತಲೂ, ಆತನ ಮಹಿಮೆಯನ್ನು ಹೊಗಳುವುದ ರಲ್ಲಿಯೇ ತನ್ನ ಜೀವಿತವನ್ನು ಕಳೆಯುವೆನು ಎಂತಲೂ, ಆರ್ಯಮಹಿಳೆಯರ ಉನ್ನತಿಗಾಗಿ ಪ್ರಯತ್ನಿಸುವೆನು ಎಂತಲೂ ಪ್ರತಿಜ್ಞೆಯನ್ನು ಮಾಡಿದಳು ! ಆಕೆಯ ಘನಪ್ರತಿಜ್ಞೆ ಯನ್ನು ಕೇಳಿ ಸಭೆಯಲ್ಲಿ ಇದ್ದವರು ಎಲ್ಲರೂ ಆಶ್ಚರ್ಯಪಟ್ಟರು. ಪ್ರೇಮದೇವಿಯು ಅಂದಿನಿಂದ ಕ್ರೈಸ್ತವಮಿಷನೆರಿ ಸ್ತ್ರೀಯರಂತೆ ಅವಿವಾಹಿತೆಯಾಗಿ ಇದ್ದು ಪರೋಪಕಾರವನ್ನು ಮಾಡಲು ನಿಶ್ಚಯಿಸಿದಳು, ಈ ವಿಷಯವನ್ನು ಕೇಳಿ ಆಕೆಯ ಬಂಧುಗಳು ಬ್ರಹ್ಮಚಾರಿಣಿಯಾಗಿ ಇರುವುದು ಒಳ್ಳೆಯದಲ್ಲವು ಎಂತಲೂ, ವಿವಾಹವನ್ನು ಮಾಡಿಕೊಂಡು ಸಂಸಾರ ಸೌಖ್ಯಗಳನ್ನು ಅನುಭವಿಸುವುದು ಒಳ್ಳೆ ಯದು ಎಂತಲೂ ಆಕೆಗೆ ಉಪದೇಶಿಸಿದರು, ಯಾರು ಏನು ಹೇಳಿದರೂ ಆಕೆಯು ತನ್ನ ನಿಶ್ಚಯವನ್ನು ಬಿಡಲಿಲ್ಲ. “ ಅವಿವಾಹಿತೆಯಾಗಿ ಇದ್ದು ಪರೋಪಕಾರವನ್ನು ಮಾಡುವುದು ಎಂದರೆ ಏನು.” ಎಂದು ಸ್ತ್ರೀಪಾಠಕರಲ್ಲಿ ಯಾರಾದರು ಕೇಳಬಹುದು, ಅವರಿಗೆ ತಿಳಿಯು ವುದಕ್ಕಾಗಿ ಇಲ್ಲಿ ಕೆಲವು ಮಾತುಗಳನ್ನು ಬರೆದಿರುವೆನು. ಪಶ್ಚಿಮಖಂಡದಲ್ಲಿ ಕೈಸ್ತವರಲ್ಲಿ ರೋಮನ್ ಕ್ಯಾಥೋಲಿಕ್, ಪ್ರಾಟೆಸ್ಟೆಂಟ್, ಎಂಬ ಎರಡು ಮತಗಳು ಇವೆ, ರೋಮನ್ ಕ್ಯಾಥೋಲಿಕ್ ಮತದವರಿಗೆ ಪುರುಷರಂತೆಯೇ ಸ್ತ್ರೀಯರು ಸಹ ಸನ್ಯಾಸವನ್ನು ಅವಲಂಬಿಸ ಬಹುದು, ನಮ್ಮ ದೇಶದಲ್ಲಿ ವಿಧವೆಯರು ಹೇಗೆ ಮರಣಪರ್ಯಂತವು ಬ್ರಹ್ಮಚರ್ಯವನ್ನು ಪಾಲಿಸುತ್ತಾರೆಯೋ, ಹಾಗೆಯೇ ರೋಮನ್ ಕ್ಯಾಥೋಲಿಕ್ ಜೋಗಿನಿಯರು ಬ್ರಹ್ಮಚರ್ಯವನ್ನು ಪಾಲಿ ಸುತ್ತಾರೆ. ನಮ್ಮಲ್ಲಿ ಸತಿಪರಾಯಣತ್ವವನ್ನು ಹೇಗೆ ಪಾತಿವ್ರತ್ಯವು ಎಂದು ಹೇಳು ತಾರೆಯೋ ಹಾಗೆಯೇ ಅವರು ಈ ಬ್ರಹ್ಮಚರ್ಯವನ್ನು ಪಾತಿವ್ರತ್ಯವು ಎಂದು ಹೇಳುತ್ತಾರೆ. ತಮ್ಮ ಭಜನಾಲಯಗಳಲ್ಲಿ ಭಜನೆಪ್ರಾರ್ಥನೆಗಳನ್ನು ಮಾಡು ವುದು, ಸಮಯವು ದೊರೆತಾಗ, ಅಜ್ಞಾನಿಗಳಾದ ಸ್ತ್ರೀಯರ ಮನೆಗೆ ಹೋಗಿ ಅವ ರಿಗೆ ಧರ್ಮೋಪದೇಶವನ್ನು ಮಾಡುವುದು, ಓದು ಬರದ ಸ್ತ್ರೀಯರಿಗೆ ಓದುಬರಹ ಗಳನ್ನು ಕಲಿಸುವುದು, ಕುಟುಂಬಕ್ಕೆ ಉಪಯೋಗಿಸುವ ಹೊಲಿಗೆ ಮೊದಲಾದ ವುಗಳನ್ನು ಕಲಿಸುವುದು, ರೋಗಿಗಳಿಗೆ ಔಷಧಗಳನ್ನು ಕೊಡುವುದು, ಬಂದೀ ಖಾನೆಗೆ ಹೋಗಿ ಅಲ್ಲಿ ಇರುವ ಕೈದಿಗಳಿಗೆ ಈಶ್ವರನಲ್ಲಿ ಭಕ್ತಿಯು ಉಂಟಾಗುವಂತೆ ಬೋಧಿಸುವುದು, ಕಳ್ಳತನದಿಂದ ಉಂಟಾಗುವ ನಷ್ಟಗಳನ್ನು ಅವರಿಗೆ ತಿಳಿಸಿ ಅವರು ದುಷ್ಕೃತ್ಯ ವಿಮುಖರಾಗುವಂತೆ ಮಾಡುವುದು, ಇವೇ ಮೊದಲಾದ ಪರೋಪ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೭
ಗೋಚರ