ಕುಮಾರೀ ಪ್ರೇಮದೇವಿ. ಕಾರ ಕಾರ್ಯಗಳನ್ನು ಈ ಜೋಗಿನಿಯರು ಮಾಡುತ್ತಾರೆ, ಪ್ರಾಟೆಸ್ಟೆಂಟ್ ಮತದಲ್ಲಿ ಸ್ತ್ರೀಯರಿಗೆ ಸನ್ಯಾಸವು ಇಲ್ಲದೆ ಇದ್ದರೂ ಅನೇಕಜನ ಸ್ತ್ರೀಯರು ವಿವಾಹ ವನ್ನು ಮಾಡಿಕೊಳ್ಳದೆ ಪರೋಪಕಾರ ಕಾರ್ಯಗಳನ್ನು ಮಾಡುತ್ತ ತಮ್ಮ ಜನ್ಮ ವನ್ನು ಕಳೆಯುತ್ತಾರೆ, ಮೇಲೆ ಹೇಳಿದ ಮಹೋಪಕಾರಗಳನ್ನು ಮಾಡುವು ದಕ್ಕಾಗಿ ಪಶ್ಚಿಮದೇಶದಲ್ಲಿ ಪ್ರತಿವರ್ಷವೂ ಅನೇಕ ರಮಣಿಯರು ಕುಟುಂಬ ಸೌಖ್ಯವನ್ನು ಬಿಟ್ಟು ಹೊರಡುತ್ತಾರೆ. ಇವರ ಸಹಾಯದಿಂದ ಅನೇಕ ಜನ ದುಃಖಿತರು ಸೌಖ್ಯವನ್ನು ಹೊಂದಿದರು; ಅಧಾರ್ಮಿಕರು ಧಾರ್ಮಿಕರಾದರು. - ಈ ಕೈಸ್ತ ವಸ್ತ್ರೀಯರ ಚರಿತ್ರೆಗಳನ್ನು ಪ್ರೇಮದೇವಿಯು ಓದಿದುದರಿಂದಲೇ, ಅವರಂತೆಯೇ ತಾನು ಸಹ ಅವಿವಾಹಿತೆಯಾಗಿದ್ದು ಲೋಕೋಪಕಾರವನ್ನು ಮಾಡಬೇಕೆಂದು ಅಪೇಕ್ಷಿಸಿದಳು, ಪ್ರೇಮದೇವಿಯು ಲೋಕಸುಖಕ್ಕಾಗಿ ತನ್ನ ಸುಖವನ್ನು ತ್ಯಜಿಸಿದುದಕ್ಕೆ ನಾವು ಆಕೆಯನ್ನು ವಿಶೇಷವಾಗಿ ಕೊಂಡಾಡಬೇಕು. ಆದರೆ ನಮ್ಮ ಹಿಂದೂಸಮಾಜದ ಪ್ರಸ್ತುತಸ್ಥಿತಿಯನ್ನು ವಿಚಾರಿಸಿ ನೋಡಿದರೆ ಬಾಲಕಿಯರು ಅವಿವಾಹಿತೆಯರಾಗಿ ಇರುವುದು ಒಳ್ಳೆಯದಲ್ಲ ಎಂದು ತೋರು ತದೆ. ವೈವಾಹಿಕವಿಧಿಯು ಸಮಾಜೋನ್ನತಿಗೆ ಅತ್ಯಂತಾವಶ್ಯಕವಾದುದು. ವಿದ್ಯಾವತಿಯರಾದ ಕನ್ನೆಯರು ವಿವಾಹಮಾಡಿಕೊಳ್ಳದೇ ಇದ್ದರೆ, ಸಮಾಜದಲ್ಲಿ ಜ್ಞಾನವತಿಯರಾದ ಭಾರ್ಯೆಯರೂ, ಮಾತೆಯರೂ ಇಲ್ಲದೆ ಸಮಾಜವು ದುಃಖಸ್ಥಿತಿಯನ್ನು ಹೊಂದುವುದು. . ಆದಕಾರಣ ಪಶ್ಚಿಮದೇಶೀಯರಿಗೆ ಹಿತಪ್ರದ ವಾದ ಬ್ರಹ್ಮಚಾರಿಣಿಯರ ಪದ್ದತಿಯು ನಮಗೆ ಹಿತಪ್ರದವಲ್ಲ. ಮತ್ತು ಪರೋಪಕಾರವನ್ನು ಮಾಡುವುದಕ್ಕೆ ನಮ್ಮ ಸಾಮಾಜಿಕ ನಿರ್ಬಂಧ ದಿಂದ ಈ ದೇಶದಲ್ಲಿ ಬ್ರಹ್ಮಚಾರಿಣಿಯರು, ಸನ್ಯಾಸಿನಿಯರು ಅನೇಕ ಲಕ್ಷ ಜನ ರಿದಾರೆ; ಲೆಕ್ಕವಿಲ್ಲದಷ್ಟು ಬೆಳೆಯುತಲಿದಾರೆ. ಇವರು ಯಾರು ಎಂದು ಸಂಶಯ ಪಡತಕ್ಕ ಕೆಲಸವಿಲ್ಲ. ಇವರೇ ದೌರ್ಭಾಗ್ಯಭಾಗಿನಿಯರಾದ ಹಿಂದೂವಿತಂತು ಗಳು. ಕೇವಲ ದುಃಖಗಳನ್ನು ಅನುಭವಿಸುವುದಕ್ಕಾಗಿಯೇ ಈ ದೇಶದಲ್ಲಿ ಜನ್ನಿ. ಸಿದ ನಿತಂತುಗಳಿಗೆ ಸದ್ವಿದ್ಯೆಯನ್ನು ಕಲಿಸಿದರೆ ಅವರಿಂದ ದೇಶಕ್ಕೆ ಮಹೋಪ ಕಾರವು ಉಂಟಾಗುವುದು, ಅವರ ಆಯುಷ್ಯವು ಪರೋಪಕಾರದಲ್ಲಿ ವ್ಯಯವಾಗು ವುದರಿಂದ ಅವರ ದುಃಖವು ಸ್ವಲ್ಪ ಕಡಮೆಯಾಗುವುದು, ಹೀಗೆ ಮಾಡುವುದು ಹಿಂದೂಧರ್ಮಕ್ಕಾಗಲಿ, ಶಾಸ್ತ್ರಕ್ಕಾಗಲಿ ವಿರುದ್ದವಾದುದಲ್ಲ. ಆದುದರಿಂದ ಪೂರ್ವ ನಾಗರಿಕರು ನಿತಂತುವಿವಾಹವನ್ನು ತಿರಸ್ಕರಿಸಿದಂತೆ, ಈ ಕಾರ್ಯವನ್ನು ತಿರಸ್ಕರಿಸಲಾರರು. “ ಪರೋಪಕಾರಃ ಪುಣ್ಯಾಯ,” ಎಂದು ವಚನವು ಇರುವುದ ರಿಂದ ನವನಾಗರೀಕರಂತೆಯೇ ಪೂರ್ವನಾಗರಿಕರು ಸಹ ಇದಕ್ಕೆ ಸಹಾಯವನ್ನು ಮಾಡುವರು. ಬಂಗಾಳೆಯಲ್ಲಿಯೂ, ಮದರಾಸಿನಲ್ಲಿಯೂ, ಬೆಂಗಳೂರಿನಲ್ಲಿಯೂ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೮
ಗೋಚರ