೯೪ ೬e ಅಬಲಾ ಸಚ್ಚರಿತ್ರ ರತ್ನ ಮಾಲೆ. ಸ್ಥಾಪಿಸಿ ಇರುವಂತೆ ನಿತಂತುಪಾಠಶಾಲೆಗಳನ್ನು ದೇಶದಲ್ಲಿ ಅಲ್ಲಲ್ಲಿ ಸ್ಥಾಪಿಸಿ, ವಿತಂತುಗಳಿಗೆ ಉಪಯುಕ್ತವಾದ ವಿದ್ಯೆಯನ್ನು ಕಲಿಸಬೇಕು, ಅವರನ್ನು ಸ್ತ್ರೀ ವೈದ್ಯಶಾಲೆಗಳಿಗೆ ಕಳುಹಿಸಿ ಚಿಕಿತ್ಸಶಾಸ್ತ್ರವನ್ನು ಕಲಿಸಬಹುದು. ಶುದ್ಧ ಪ್ರೋತ್ರಿಯರಾದ ಬ್ರಾಹ್ಮಣರು ತಮ್ಮ ಗೃಹಗಳಲ್ಲಿ ಇರುವ ವಿತಂತುಗಳಿಗೆ ಸ್ವಲ್ಪ ಸಂಸ್ಕೃತವನ್ನು ಕಲಿಸಿ, ಕಿ೦ಚಿದನ್ವಯಜ್ಞಾನವು ಉಂಟಾಗುವಂತೆ ಮಾಡಿ, ಅವರಿಂದ ಇತರ ಸ್ತ್ರೀಯರಿಗೆ ಪುರಾಣಾದಿಗಳನ್ನು ಹೇಳಿಸಿ, ಧರ್ಮಪಾತಿವ್ರತ್ಯ ಮಹಾತ್ಮ ಗೃಹನಿರ್ವಾಹಕತ್ವ, ಮೊದಲಾದವುಗಳನ್ನು ಬೋಧಿಸುವಂತೆ ಮಾಡಬಹುದು, ಇದನ್ನು ಕುರಿತು ವಿದ್ವಾಂಸರು ವಿಚಾರಿಸಲಿ ಎಂದು ಮೂಲ. ಚರಿತ್ರೆಗೆ ಬರುವೆನು. ಹಿಂದೆ ಬರೆದಂತೆ ಪ್ರೇಮದೇವಿಯು ಲಾಹೋರು ವೈದ್ಯ ಕಳಾಶಾಲೆಯಲ್ಲಿ ನಾಲ್ಕು ವರ್ಷಗಳು ಅಧ್ಯಯನವನ್ನು ಮಾಡಿ, ತನ್ನ ಸಹಪಾಠಿಗಳಲ್ಲಿ ಎಲ್ಲರಿಗಿಂ ತಲೂ ಉತ್ತಮ ತರಗತಿಯಲ್ಲಿ ಕೃತಾರ್ಥಳಾದಳು. ತಾನು ಮಾಡಲು ಎಣಿಸಿದ ಪರೋಪಕಾರಗಳನ್ನು ಮಾಡುತಲಿದ್ದರೂ, ಅದ್ವಿತೀಯ ಬುದ್ದಿ ವೈಭವವುಳ್ಳವ ಳಾದುದರಿಂದ ಕೃತಾರ್ಥರಾದವರಲ್ಲಿ ಈಕೆಯು ಮೊದಲನೆಯವಳಾದಳು. ಆಗ ಪ್ರೇಮದೇವಿಗೆ ಅನೇಕ ಬಹುಮಾನಗಳು ದೊರೆತವು, ಈಕೆಯು ಲಾಹೋರಿನಲ್ಲಿ ಇದ್ದ ಕಾಲದಲ್ಲಿ ಯೇ ಈಕೆಯ ತಂದೆಗೆ ಅಲ್ಲಿ ಕೆಲಸವಾಯಿತು. ಅಂದಿನಿಂದ ಪ್ರೇಮದೇವಿಯು ತಂದೆಯ ಬಳಿಯಲ್ಲಿಯೇ ಇದ್ದಳು. ಆಗ ದೇವೀಪ್ರಸಾದನು ಮಗಳನ್ನು ವಿವಾಹಮಾಡಿಕೊಳ್ಳುವಂತೆ ನಿರ್ಬಂಧ ಮಾಡಲಾರಂಭಿಸಿದನು. ವಿಶೇಷಧನವಂತನನಾದ ಒಬ್ಬ ವರನನ್ನು ನೋಡಿ ಮಗಳನ್ನು ಆತನಿಗೆ ಕೊಟ್ಟು ವಿವಾಹ ಮಾಡಲು ಪ್ರಸಾದನು ನಿಶ್ಚಯಿಸಿದನು. ಆದರೆ ದೃಢನಿಶ್ಚಯವುಳ್ಳ ಪ್ರೇಮದೇವಿಯು ತಂದೆಯೊಡನೆ ತನಗೆ ವಿವಾಹವು ಅನವಶ್ಯಕವು ಎಂದು ಸ್ಪಷ್ಟ ವಾಗಿ ತಿಳಿಸಿದಳು. ಪ್ರಸಾದನು ಆಕೆಯನ್ನು ನಿರ್ಬಂಧಿಸುವುದರಿಂದ ಲಾಭವಿಲ್ಲ ಎಂದು ತಿಳಿದು ಸುಮ್ಮನಾದನು. ಪ್ರೇಮದೇವಿಯು ತನ್ನ ಮನೆಯಲ್ಲಿ ಒಂದು ಸೀ ಸಮಾಜವನ್ನು ಸ್ಥಾಪಿಸಿದಳು, ಅನಂತರ ನಡೆದ ಒಂದು ಬ್ರಾಹ್ಮಸಮಾಜ ವಾರ್ಷಿಕೋತ್ಸವದಲ್ಲಿ ಈಕೆಯನ್ನು “ ದೇವಧರ್ಮ ಪರಿಚಾರಿಕದೀಕ್ಷಿತಳು” ಎಂದು ನಿಯಮಿಸಿದರು, ಪ್ರೇಮದೇವಿಯು ಆ ಗ್ರಾಮದಲ್ಲಿ ಸ್ತ್ರೀಯರಿಗಾಗಿ ಒಂದು ಔಷಧಾಲಯವನ್ನು ಸ್ಥಾಪಿಸಿ, ಅಲ್ಲಿ ಹೆಂಗಸರಿಗೂ, ಮಕ್ಕಳಿಗೂ, ಔಷಧಗಳನ್ನು ಕೊಡುತಲಿದ್ದಳು. ಮತ್ತು ಆಕೆಯು ಪ್ರತಿದಿವಸವೂ ಗೋಷಾಸ್ತ್ರೀಯರ ಮನೆ ಗಳಿಗೆ ಹೋಗಿ ಅವರಿಗೆ ದೈವಭಕ್ತಿಯನ್ನು ಉಪದೇಶಿಸಿ, ಓದುಬರಹ, ಹೋಲಿ ಗೆಯ ಕೆಲಸ ಮೊದಲಾದವುಗಳನ್ನು ಕಲಿಸಿ ಉಪಕಾರವನ್ನು ಮಾಡುತ್ತಿದ್ದಳು. ಅನೇಕ ಸ್ಥಳಗಳಲ್ಲಿ ಸ್ತ್ರೀವಿದ್ಯೆ, ಸ್ತ್ರೀ ಸ್ವಾತಂತ್ರಗಳನ್ನು ಕುರಿತು ಉಪನ್ಯಾಸಗಳನ್ನು ಹೇಳುತಲಿದ್ದಳು. ಬಡವರಿಗೆ ತನ್ನ ಕೈಯಲ್ಲಾದಷ್ಟು ಸಹಾಯವನ್ನು ಮಾಡಿ,
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೧೯
ಗೋಚರ