ರಾಣೀ ದುರ್ಗಾವತಿ. f೫ ಅವರಿಗೆ ಉತ್ತಮಸ್ಥಿತಿಯನ್ನು ಉಂಟುಮಾಡುವಂತೆ ದೇವರನ್ನು ಪ್ರಾರ್ಥಿಸು ತಿದ್ದಳು, ಈಕೆಯು ಮಾಡುತ್ತಿದ್ದ ಪರಿಶ್ರಮದಿಂದ ಈಕೆಯ ಶರೀರವು ಕ್ರಮ ಕ್ರಮವಾಗಿ ದೌರ್ಬಲ್ಯವನ್ನು ಹೊಂದುತಲಿತ್ತು.. ಪ್ರೇಮದೇವಿಯು ತನ್ನ ಶರೀ ರವು ಅಶಾಶ್ವತವಾದುದು ಎಂಬುದನ್ನು ಅರಿತವಳಾದುದರಿಂದ, ತನ್ನ ವ್ಯಾಧಿ ಯನ್ನು ಲಕ್ಷ್ಮಮಾಡದೆ ಎಂದಿನಂತೆಯೇ ತನ್ನ ಕಾರ್ಯಗಳನ್ನು ಮಾಡುತ್ತಿದ್ದಳು. ಅನಂತರ ತನ್ನ ಅಂತ್ಯ ಕಾಲವು ಸಮಿಾಪಿಸಿತು ಎಂದು ತಿಳಿದು ತನ್ನ ಚರಿತ್ರೆ ಯನ್ನು ಇಂಗ್ಲೀಷ್ ಭಾಷೆಯಲ್ಲಿ ಸ್ವಯಮಾಗಿ ಬರೆದಳು. ಸ್ವೀಯಚರಿತ್ರೆ ಯನ್ನು ಬರೆದ ಕೆಲವು ದಿವಸಗಳಿಗೆ ವ್ಯಾಧಿಯು ಹೆಚ್ಚಿ ಪ್ರೇಮದೇವಿಯು ೧೮೯೫ ನೆಯ ವರ್ಷದಲ್ಲಿ ಮೃತಳಾದಳು. - ರ್ರಾ ದುರ್ಗಾ ವತಿ. ---:೦:--- ಯದೃಚ್ಛಯಾಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ ಸುಖಿನಃಕ್ಷತ್ರಿಯಾಃಪಾರ್ಥ ! ಲಭಂತೇಯುದ್ಧಮಾದೃಶಮ್. ಹದಿನಾರನೇಯ ಶತಾಬ್ಬದಲ್ಲಿ ಬುಂದೇಲ್‌ಖಂಡ ಸಂಸ್ಥಾನವನ್ನು ಚಂದ ವೇ೮' ರಾಜನು ಪರಿಪಾಲಿಸುತಲಿದ್ದನು. ಈತನಿಗೆ ಗುಣರೂಪಸಂಪನ್ನೆಯಾದ ದುರ್ಗಾವತಿಎಂಬ ಒಬ್ಬ ಮಗಳಿದ್ದಳು, ಈಕೆಯು ಯೌವನವತಿಯಾದಮೇಲೆ ಈಕೆಯ ಕೀರ್ತಿಯು ಭರತಖಂಡದಲ್ಲಿ ಸರ್ವತ್ರ ವ್ಯಾಪಿಸಿದುದರಿಂದ, ಅನೇಕ ರಾಜ ಪುತ್ರರು ದುರ್ಗಾವತಿಯನ್ನು ವಿವಾಹಮಾಡಿಕೊಳ್ಳುವುದಕ್ಕಾಗಿ ಚ೦ದವೇಲ್ ರಾಜನನ್ನು ಆಶ್ರಯಿಸುತಲಿದ್ದರು. ಆದರೆ ಆ ರಾಜಕುಮಾರರು ತನ್ನ ಪುತ್ರಿಗೆ ತಕ್ಕವರರಲ್ಲ ಎಂದು ಚ೦ದವೇಲ್ ರಾಜನು ಅವರಿಗೆ ಯಾವುದೋ ಒಂದು ಕಾರಣ ವನ್ನು ತಿಳಿಸಿ ಹಿಂದಕ್ಕೆ ಕಳುಹಿಸುತಲಿದ್ದನು. ಅನಂತರ ಕೆಲವು ದಿವಸಗಳಿಗೆ ಗಡಾಮಂಡಲೇಶ್ವರನಾದ ಗೋಂಡುರಾಜನು ದುರ್ಗಾವತಿಯನ್ನು ತನಗೆ ಕೊಡ ಬೇಕು ಎಂದು ಚಂದವೇಲ್ ರಾಜನಿಗೆ ವರ್ತಮಾನವನ್ನು ಕಳುಹಿಸಿದನು. ಈ ಗೋಂಡುರಾಜನ ಶೌರ್ಯಸಾಹಸಗಳನ್ನು ಕೇಳಿ ದುರ್ಗಾವತಿಯು ಆತನಲ್ಲಿ ಅನುರಾಗವುಳ್ಳವಳಾಗಿ ಇದ್ದಳು, ಕುಲದಲ್ಲಿಯೂ, ವಿದ್ಯೆಯಲ್ಲಿಯೂ, ನಾಗರಿಕ ದಲ್ಲಿಯೂ ರಾಜಪುತ್ರರಿಗಿಂತಲೂ ಗೋಂಡರು ಕಡಿಮೆಯಾದವರು: ಗೋಂಡರು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೨೦
ಗೋಚರ