ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಖನಾಬಾಯಿ ಕೇ ಛೋಕರ್. ೧೦೩ ಬಾಯಿಯು ಅದನ್ನು ಹಿಂದಕ್ಕೆ ಕಳುಹಿಸಿದಳು. ಆ ಚೀಟಿಯನ್ನು ಜಾನ್‌ಸ್ಪನ್ನನು ಓದಿಕೊಂಡು ಹಿಂದಕ್ಕೆ ಹೋದನು, ಕಾಗದದ ಮೇಲೆ ಕೈ ಬರಹವು ಇಲ್ಲದೇ ಇದ್ದುದರಿಂದ ಜವಾಬನ್ನು ಯಾರುಬರೆದರೋ ಎಂದು ಜಾನ್ ಸನ್ನನಿಗೆ ಸಂಶಯವು ಉಂಟಾಯಿತು. ಆಮೇಲೆ ಕೃಷ್ಣಾಜಿಯು ಮನೆಗೆ ಬಂದ ಕೂಡಲೆ ಡಾಕ್ಟರ್ ಜಾನ್‌ಸ್ಪನ್ನನ ಮನೆಗೆ ಹೋದನು. ಅವರು ಇಬ್ಬರೂ ಅನೇಕವಿಷಯಗಳನ್ನು ಕುರಿತು ಮಾತ ನಾಡಿದಮೇಲೆ ಆ ಆ೦ಗ್ಲೀಯನು, “ ನನ್ನ ಕಾಗದಕ್ಕೆ ಇಂಗ್ಲಿಷಿನಲ್ಲಿ ಜವಾಬನ್ನು ಬರೆದವರು ಯಾರು?” ಎಂದು ಕೇಳಲು, ಕೃಷ್ಣಾಜಿಯು, “ ಜವಾಬನ್ನು ಬರೆ ದವಳು ನನ್ನ ಪತ್ನಿಯು,” ಎಂದು ನುಡಿದನು. ಆಗ ದೊರೆಯು ವಿಸ್ಮಿತನಾಗಿ, “ ಆಕೆಯು ಇಷ್ಟು ವಿದ್ಯೆಯನ್ನು ಎಲ್ಲಿ ಕಲಿತಳು ? ಎಂದು ಕೇಳಿದನು. ಅದಕ್ಕೆ ಕೃಷ್ಣಾಜಿಯು, “ ಇದನ್ನೆಲ್ಲ ನಾನು ಮನೆಯಲ್ಲಿ ಯೇ ಕಲಿಸಿದೆನು,” ಎಂದನು. ಈ ಮಾತುಗಳನ್ನು ಕೇಳಿ ದೊರೆಯು, “ ನಿಮ್ಮ ಪತ್ನಿಯನ್ನು ನಾನು ನೋಡುವುದಕ್ಕೆ ಏನಾದರೂ ಅಭ್ಯಂತರವು ಉಂಟೇ ? " ಎಂದು ಪ್ರಶ್ನಿಸಿದನು. ಅದಕ್ಕೆ ಕೃಷ್ಣಾ ಜಿಯು ಒಪ್ಪಿಕೊಂಡು ಮನೆಗೆ ಹೋದನು. ಮಾರನೆಯದಿವಸ ಬೆಳಿಗ್ಗೆ ದೊರೆಯು ಬಂದು ವೈದ್ಯಶಾಲೆಯನ್ನು ಸಂಶೋಧಿಸಿದ ಅನಂತರ ಕೃಷ್ಣಾಜಿಯು ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ದೊರೆಯು ರಖನಾಬಾಯಿಯನ್ನು ನೋಡಿ ನನ್ನ ಕಾಗದಕ್ಕೆ ಜವಾಬುಬರೆದ ಹೆಂಗಸು ಈಕೆಯೇ ಆಗಿ ಇರಬಹುದೇ ಎಂದು ಸಂಶಯಿಸಿದನು. ಆದರೆ ಆಕೆಯೊಡನೆ ಸ್ವಲ್ಪ ಹೊತ್ತು ಸಂಭಾಷಿಸಿದ ಅನಂತರ ಆಕೆಯ ವಿದ್ಯಾತಿಶಯಕ್ಕೆ ದೊರೆಯು ಆಶ್ಚರ್ಯಪಟ್ಟು, ರಖಮಾಬಾಯಿ ಯನ್ನೂ, ಕೃಷ್ಣಾಜಿಯನ್ನೂ ಕೊಂಡಾಡಿದನು. ಈ ದೇಶದಲ್ಲಿ ಅನೇಕ ಪಾಠಶಾಲೆಗಳು ಇದ್ದರೂ, ಆ ಶಾಲೆಗಳಿಗೆ ಚಿಕ್ಕ ಚಿಕ್ಕ ಬಾಲಿಕೆಯರು ಮಾತ್ರ ಹೋಗುತ್ತಾರೆ, ಸ್ವಲ್ಪ ದೊಡ್ಡವರಾದ ಮೇಲೆ ಹೆಣ್ಣು ಮಕ್ಕಳು ಪಾಠಶಾಲೆಗೆ ಹೋಗಲು ಸಾಧಾರಣವಾಗಿ ಲಜ್ಜಿಸುತ್ತಾರೆ. ಆದ ಕಾರಣ ಹಿಂದೂ ಸ್ತ್ರೀಯರಿಗೆ ಸಂಪೂರ್ಣವಾದ ವಿದ್ಯೆಯನ್ನು ಕಲಿಯುವುದಕ್ಕೆ ಪಾಠ ಶಾಲೆಗಳು ವಿಶೇಷ ಉಪಯೋಗಕರಗಳಲ್ಲ. ಆದುದರಿಂದ ವಿದ್ಯಾಭಿಮಾನಿಗಳಾದ ಪುರುಷರು ತಮ್ಮ ಪತ್ನಿಯರಿಗೂ, ಸೋದರಿಯರಿಗೂ ಮನೆಯಲ್ಲಿ ಯೇ ತಮ್ಮ ಕೈಯಲ್ಲಾದ ವಿದ್ಯೆಗಳನ್ನು ಕೃಷ್ಣಾಜಿಯಂತೆ ಕಲಿಸಿದರೆ ಭರತಖಂಡದಲ್ಲಿ ಸ್ತ್ರೀ ವಿದ್ಯೆಯು ಅನತಿಕಾಲದಲ್ಲಿ ಯೇ ಅಭಿವೃದ್ಧಿಯನ್ನು ಹೊಂದುವುದು. ಪತ್ನಿಗೆ ಓದುಬರಹವನ್ನು ಕಲಿಸುವ ಸಮಯದಲ್ಲಿ ಕೃಷ್ಣಾಜಿಯಾಗಲಿ, ಕಲಿಯುವ ಸಮಯದಲ್ಲಿ ರಖನಾಬಾಯಿಯಾಗಲಿ 'ಈ ವಿದ್ಯೆಯಿಂದ ಧನವನ್ನು