ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಖನಾಬಾಯಿ ಕೇಳೋಕರ*. ೧೦೫ ಹೋಗುತ್ತಿತ್ತು. ಆಗ ಆತನು ಬದುಕುವುದೇ ಕಷ್ಟವು ಎಂದು ವೈದ್ಯರು ನೆನೆಸಿ ದರು. ರಖಮಾಬಾಯಿಯ ಮಂಗಳಸೂತ್ರದ ಮಹಿಮೆಯಿಂದ ಪ್ರಾಣಾ ಪಾಯವು ತಪ್ಪಿತು, ಆದರೆ ಶಾಶ್ವತವಾದ ಅಂಗವೈಕಲ್ಯವು ಪ್ರಾಪ್ತವಾಯಿತು. ಆದಕಾರಣ ಕೃಷ್ಣಾಜಿಯು ನಿರಾಶನಾಗಿ ಉದ್ಯೋಗವನ್ನು ಬಿಟ್ಟು ಬಿಟ್ಟನು. ಈ ಸಂಕಟ ಸಮಯದಲ್ಲಿ ರಖಮಾಬಾಯಿಯ ಮನಸ್ಸು ಯಾವಸ್ಥಿತಿಯಲ್ಲಿ ಇತ್ತು ಎಂಬುದನ್ನು ಪಾಠಕರೇ ಊಹಿಸಬೇಕು. ಸುಖಾನಂತರದಲ್ಲಿ ದುಃಖವೂ ದುಃಖಾನಂತರ ಸುಖವೂ ಸಂಭವಿಸುವುದು ಈ ಜಗತ್ತಿನ ಧರ್ಮವು ಎಂದು ಅರಿತವರು ಹೇಳುತ್ತಾರೆ. ಕೃಷ್ಣಾಜಿಯು (ಸರೋ ಪಕಾರಿ' ಎಂದು ಕೀರ್ತಿಯನ್ನು ಪಡೆದು ಇದ್ದನು. ರಖನಾಬಾಯಿಯು ಸಹ ಸತ್ಯ, ಶೀಲ, ಶಾಂತಿ, ದಯೆ, ಮೊದಲಾದ ಸುಗುಣಗಳನ್ನುಳ್ಳವಳಾಗಿ ಪ್ರಶಂಸ ನೀಯಳಾಗಿ ಇದ್ದಳು. ವಿದ್ಯಾ ವ್ಯಸನವನ್ನು ವಿನಹ ಬೇರೊಂದು ವ್ಯಸನವನ್ನು ಅರಿಯದ ಈ ಸುಗುಣಶೀಲರಾದ ದಂಪತಿಗಳಿಗೆ ಇಂತಹ ಸಂಕಟವನ್ನು ಉಂಟು ಮಾಡಿದ ದೈವಗತಿಯು ವಿಚಿತ್ರವಾದುದು ಎಂದು ಹೇಳಬೇಕು. ವ್ಯಾಧಿಯು ಸ್ವಲ್ಪ ವಾಸಿಯಾದರೂ, ಅಂಗವೈಕಲ್ಯವು ಉಂಟಾದುದರಿಂದ ಕೃಷ್ಣಾಜಿಯು ನಾಲ್ಕು ಜನರಲ್ಲಿ ತಿರುಗಾಡುವುದಕ್ಕೂ, ಉದ್ಯೋಗಮಾಡುವು ದಕ್ಕೂ ಇಲ್ಲದೇ ಹೋಯಿತು. ಆಗ ಆ ದಂಪತಿಗಳು ಏಕಾಂತವಾಗಿ ಒಂದು ಹಳ್ಳಿಯಲ್ಲಿ ವಾಸಮಾಡಲು ನಿಶ್ಚಯಿಸಿಕೊಂಡು, ಅದಕ್ಕೆ ತಕ್ಕ ಏರ್ಪಾಟುಗಳನ್ನು ಮಾಡಿಕೊಂಡು, ಸಮಿಾಪದಲ್ಲಿ ಇದ್ದ ಒಂದು ಹಳ್ಳಿಗೆ ಹೋಗಿ ಅಲ್ಲಿ ಬಡವರಂತೆ ಒಕ್ಕಲಿದ್ದರು. ಆಗಲೂ ಕೃಷ್ಣಾಜಿಯು ಆಗಾಗ್ಗೆ ವ್ಯಾಧಿಪೀಡಿತನಾಗುತ್ತ ಇದ್ದನು. ಔಷಧಗಳಿಂದ ಪ್ರಯೋಜನವು ಉಂಟಾಗಲಿಲ್ಲ. ಸತಿಯ ವ್ಯಾಧಿ ಸಮಯದಲ್ಲಿ ರಖನಾಬಾಯಿಯು ತೋರಿದ ಧೈರ್ಯವೂ ಆಕೆಯು ಮಾಡಿದ ಪತಿ ಸೇವೆಯ ಸ್ತುತ್ಯವಾದವು, ಪತಿಗೆ ವಿಶೇಷ ದುಃಖವು ಉಂಟಾಗುವುದು ಎಂದು, ತನ್ನ ದುಃಖವನ್ನು ತಡೆದುಕೊಂಡು ಹಸನ್ಮುಖಿಯಾಗಿ ಸತಿಯ ಶುಶೂಷೆಯನ್ನು ಮಾಡುತ್ತ ಇದ್ದಳು. ಆಕೆಯು ಪತಿಗೆ ಅನೇಕ ಧೈರ್ಯವಚನಗಳನ್ನು ಹೇಳಿ, ಆತನ ದುಃಖ ಸಮಯದಲ್ಲಿ ಸಂತೋಷವನ್ನು ಉಂಟುಮಾಡುತ್ತ ಇದ್ದಳು. ತಾನು ವ್ಯಾಧಿಯಿಂದ ಪೀಡಿತನಾಗಿ ಇದ್ದ ಕಾಲದಲ್ಲಿ ರಖಮಾಬಾಯಿಯು ಸ್ವಲ್ಪವೂ ಬೇಸರಿಕೆ ಇಲ್ಲದೆ ಮನಃಪೂರ್ವಕ ವಾಗಿಮಾಡಿದ ಉಪಚಾರಗಳನ್ನು ನೆನೆಸಿಕೊಂಡು ಕೃಷ್ಣಾಜಿಯು ಆನಂದ ಬಾಷ್ಪಗಳನ್ನು ಸುರಿಸುತ್ತ ಇದ್ದನು ! ಈ ದಂಪತಿಗಳಿಗೆ ಹಳ್ಳಿಯಲ್ಲಿ ವಾಸಮಾಡುವುದು ಕಷ್ಟವಾಗಿ ತೋರಿತು. ಬಾಲ್ಯದಿಂದಲೂ ದೊಡ್ಡ ನಗರದಲ್ಲಿ ವಾಸಮಾಡಿದವರಾದಕಾರಣ ಅವರಿಗೆ