ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಹಳ್ಳಿಯು ರಮ್ಯವಾಗಿ ಇರಲಿಲ್ಲ. ಅಲ್ಲಿ ಕಾಲವನ್ನು ಕಳೆಯುವುದು ದುಸ್ತರ ವಾಯಿತು, ಅವರ ಮಕ್ಕಳಿಗೆ ಬೇಕಾದ ಔಷಧಗಳು ಅಲ್ಲಿ ದೊರೆಯಲಿಲ್ಲ. ಈ ಅವಸ್ಥೆಯಲ್ಲಿ ಅವರ ಮಗಳೊಬ್ಬಳು ಔಷಧಾಭಾವದಿಂದ ಮೃತಳಾದಳು. ಅವ ರಿಗೆ ಅಲ್ಲಿ ಹೃದಯಶೋಕವು ಪ್ರಾಪ್ತವಾದುದರಿಂದ, ಅವರು ಆ ಹಳ್ಳಿಯಮೇಲೆ ಅಸೂಯೆಯುಳ್ಳವರಾಗಿ ಅಲೀಬಾಗ್ ಎಂಬ ಸಮುದ್ರತೀರ ಪಟ್ಟಣಕ್ಕೆ ಹೋದರು. ಇವರ ಅದೃಷ್ಟವಶದಿಂದ ಆಗ ರ್ಜಾರ್ಷ್ಟ ದೊರೆಯು ಕೆಲಸದ ಮೇಲೆ ಆ ಊರಿ ನಲ್ಲಿಯೇ ಇದ್ದನು. ಆ ದೊರೆಗೆ ಕೃಷ್ಣಾಜಿಯಲ್ಲಿ ವಿಶೇಷ ಪ್ರೇಮವು ಇತ್ತು ಎಂದು ಹಿಂದೆಯೇ ತಿಳಿಸಿದೇನೆ. ದೊರೆಯು ಬೊಂಬಾಯಿನಲ್ಲಿ ಇದ್ದ ಸಮಯದಲ್ಲಿ, ಕೃಷ್ಣಾಜಿಯು ಎಲ್ಲಿಗೋ ಹೊರಟು ಹೋದನು ಎಂಬ ವೃತಾಂತವನ್ನು ಕೇಳಿ, ಆತನು ಹೋದ ಸ್ಥಳವನ್ನು ತಿಳಿಯಲು ಅನೇಕರನ್ನು ವಿಚಾರಿಸಿದನು. ಅಲೀ ಬಾಗಿಗೆ ಬಂದಅನಂತರವೂ ದೊರೆಯು ಕೃಷ್ಣಾಜಿಯ ವಿಷಯವಾಗಿ ಪ್ರಜೆ ಗಳನ್ನು ಕೇಳುತ್ತ ಇದ್ದನು. ಆದರೆ ಕೃಷ್ಣಾಜಿಯು ಇರುವ ಸ್ಥಳವು ಆ ದೊರೆಗೆ ತಿಳಿಯಲಿಲ್ಲ. ಒಂದುದಿವಸ ಕೃಷ್ಣಾಜಿಯು ದಾರಿಯಲ್ಲಿ ಹೋಗುತ್ತಿರಲು ದೊರೆಯ ಸೇವಕನುಒಬ್ಬನು ಆತನನ್ನು ಗುರುತಿಸಿ, ಆತನ ಬಳಿಗೆ ಹೋಗಿ, “ ಅಯಾ! ದೊರೆಯವರು ನಿಮ್ಮನ್ನು ಹುಡುಕುತ್ತ ಇದಾರೆ,” ಎಂದು ಹೇಳಿದನು. ಆಗ ಕೃಷ್ಣಾಜಿಯು ಸಂತೋಷದೊಡನೆ ಹೋಗಿ ದೊರೆಯನ್ನು ನೋಡಿದನು. ದೊರೆಯು ಕೃಷ್ಣಾಜಿಗೆ ಸಂಭವಿಸಿದ ದುರವಸ್ಥೆಗೆ ಬಹಳ ವ್ಯಸನಪಟ್ಟು, ಪೂರ್ವ ದಲ್ಲಿ ಕೃಷ್ಣಾಜಿಯು ಕೆಲಸವನ್ನು ಬಿಟ್ಟ ಸಮಯದಲ್ಲಿ, ತಾನು ಮೇಲಿನ ಅಧಿಕಾರಿ ಗಳಿಗೆ ಕೃಷ್ಣಾಜಿಯ ವಿಷಯವನ್ನು ತಿಳಿಸಿ ತರಿಸಿದ ಬಹುಮಾನದ್ರವ್ಯವನ್ನು ಆತನಿಗೆ ಕೊಟ್ಟನು. ಸದಯಾಂತಃಕರಣನಾದ ಆ ಜಾನ್ ರ್ಸ್ಟ ದೊರೆಯು ಈ ವಿಧವಾಗಿ ಧನಸಹಾಯವನ್ನು ಮಾಡಿ, ಮುಂದೆ ಜೀವನವು ನಡೆಯುವುದಕ್ಕಾಗಿ ಕೃಷ್ಣಾಜಿಗೆ ಒಂದು ಉಪಾಯವನ್ನು ಸಹ ಸೂಚಿಸಿದನು. ದೊರೆಯು ಕೃಷ್ಣಾಜಿ ಯೊಡನೆ, “ ನೀನು ಈ ಪ್ರಕಾರ ವಿಕಲಾಂಗನಾಗಿ ಯಾವಕಾರ್ಯವನ್ನು ಮಾಡು ದಕ್ಕೂ ಶಕ್ತಿ ಇಲ್ಲದವನಾದೆ. ಆದಕಾರಣ ನೀನು ಕುಟುಂಬವನ್ನು ಪೋಷಿಸಿ ಕೊಳ್ಳುವುದು ಕಷ್ಟ, ನಿನ್ನ ಭಾರ್ಯೆಯು ವಿದ್ಯಾ ವತಿಯೂ, ಸೂಕ್ಷಬುದ್ಧಿ ಯುಳ್ಳವಳೂ ಆಗಿ ಇರುವಾಗ ನೀವು ಸುಮ್ಮನೆ ಇರುವುದು ನನಗೆ ಸರಿಯಾಗಿ ತೋರುವುದಿಲ್ಲ. ಪ್ರಯತ್ನಿಸಿದರೆ ಆಕೆಗೆ ಎಲ್ಲಿ ಆದರೂ ಒಂದು ಉದ್ಯೋಗವು ದೊರೆಯಬಹುದು. ಈಗ ನಾಟಿಂರ್ಗ ದೊರೆಯು ವಿದ್ಯಾಶಾಖಾಧಿಕಾರಿಯಾಗಿ ಇದಾನೆ, ಆತನನ್ನು ಹೋಗಿ ನೋಡಿದರೆ ಅವಶ್ಯಕವಾಗಿ ಲಾಭವು ಉಂಟಾಗು ವುದು,” ಎಂದು ಹೇಳಿ, ಆತನು ವಿದ್ಯಾಶಾಖಾಧಿಕಾರಿಗೆ ಒಂದು ಉತ್ತರವನ್ನು ಬರೆದು ಕೊಟ್ಟನು. ಇಂತಹ ಮಹೋಪಕಾರವನ್ನು ಮಾಡಿದುದಕ್ಕೆ ಕೃಷ್ಣಾ ಜಿಯು ದೊರೆಗೆ ಕೃತಜ್ಞತಾಪೂರ್ವಕವಾಗಿ ಸಲಾಮನ್ನು ಮಾಡಿ ಮನೆಗೆ ಹೋದನು.