ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಖಮಾಬಾಯಿ ಕೇಳೊಕರ್, ೧೧ ಕೋಲಾಪುರಕ್ಕೆ ಹೋದಮೇಲೆ ರಖಮಾಬಾಯಿಯನ್ನು ಮಾತ್ರ ಶ್ರೀ ಆನಂದೀಬಾಯಿರಾಣಿಯವರಿಗೆ ವಿದ್ಯೆಯನ್ನು ಕಲಿಸುವುದಕ್ಕೆ ನಿಯಮಿಸಿದರು. ಆದರೆ ಕೆಲವು ದಿವಸಗಳಲ್ಲಿಯೇ ಮಾತೃ ಶ್ರೀಯವರ ಪತಿಯಾದ ನಾಲ್ಕ ನೆಯ ಶಿವಾಜಿಮಹಾರಾಜರು ಸ್ವರ್ಗಸ್ಥರಾದುದರಿಂದ, ಆಕೆಗೆ ವಿಶೇಷ ದುಃಖವೂ ಔದಾಸೀನ್ಯವೂ ಉಂಟಾಗಿ ಆಕೆಯು ವಿದ್ಯಾಧ್ಯಯನವನ್ನು ಬಿಟ್ಟಳು. ಆಗ ರಖಮಾಬಾಯಿಯನ್ನು ಫೀಮೆಲ್ ಟ್ರೈನಿಂಗ್ ಪಾಠಶಾಲೆಗೆ ಅಧಿಕಾರಿಣಿ ಯಾದ ನಿಸ್‌ ಲಿಟಲ್‌ ಸೂಪರಿಂಟೆಂಡೆಂಟನ ಕೈಕೆಳಗೆ, ಅದೇ ಪಾಠಶಾಲೆ ಯಲ್ಲಿ ಪ್ರಧಾನೋಪಾಧ್ಯಾಯಿನಿಯಾಗಿ ನಿಯಮಿಸಿದರು ಅಲ್ಲಿ ಈಕೆಯ ಕೈ ಕೆಳಗೆ ಕೆಲಸಮಾಡುವವರು ಯಾರೂ ಇಲ್ಲದಿದ್ದರೂ ಈಕೆಯು ಒಬ್ಬಳೇ ಕೆಲಸವನ್ನೆಲ್ಲ ನಿರ್ವಹಿಸುತ್ತಿದ್ದಳು. ೧೮೮೩ ವರ್ಷದಲ್ಲಿ ರಖಮಾಬಾಯಿಯು ಕೋಲಾಪುರಕ್ಕೆ ಬಂದಸಮಯ ದಲ್ಲಿ ಇವರ ಕುಟುಂಬಕ್ಕೆ ಅನೇಕ ಕಷ್ಟಗಳು ಸಂಭವಿಸಿದುವ, ವಾಸ ಮಾಡಲನುಕೂಲವಾದ ಮನೆಯು ಸಹ ದೊರೆಯಲಿಲ್ಲ. ಆದರೆ ಆಗ ಪೊಲಟಿಕಲ್ ಏಜಂಟನಾಗಿದ್ದ ಕರ್ನಲ್ ರೀವಸ್ ದೊರೆಯು, ಇವರ ಕಷ್ಟ ಗಳನ್ನು ನೋಡಿ ಕರುಣಿಸಿ ಪಾಠಶಾಲೆಗೆ ಸಮಿಾಪದಲ್ಲಿದ್ದ ಒಂದು ಸರ್ಕಾರೀ ಬಂಗಲೆಯನ್ನು ರಖನಾಬಾಯಿಗೆ ಕೊಡಿಸಿದನು. ಆಗ ಅಲ್ಲಿದ್ದ ಬಲ್ವೇದಿವಾ ನರು ಸಹ ಇವರಿಗೆ ವಿಶೇಷ ಸಹಾಯವನ್ನು ಮಾಡಿದರು. ರಖನಾಬಾಯಿಯ ಸಚೀಲವನ್ನು ನೋಡಿ ಎಲ್ಲರೂ ಆಕೆಯನ್ನು ಬಹೂಕರಿಸಿ, ಸತ್ಕರಿಸುತ್ತಿದ್ದರು. - ರಖನಾಬಾಯಿಯ ಪ್ರವರ್ತನೆಯು ಅತ್ಯಂತ ಸರಳವಾದುದು, ಮಾತಿ ನಲ್ಲಿಯೂ, ನಡತೆಯಲ್ಲಿಯೂ ಈಕೆಯು ಕಪಟವೆಂಬುದನ್ನು ಅರಿಯಳು. ಈಕೆಯು ಅಧಿಕಪ್ರಸಂಗಕ್ಕೆ ಹೋಗದೆ ಸದಾ ತನ್ನ ಕರ್ತವ್ಯದಲ್ಲಿಯೇ ಚಿತ್ರ ವುಳ್ಳವಳಾಗಿ ಇರುವಳು. ಈಕೆಯನ್ನು ಪ್ರಥಮದಲ್ಲಿ ನೋಡಿದವರು ಈಕೆಯ ಸರಳತೆಯನ್ನು ನೋಡಿ, ಈಕೆಯು ಯಾರೋ ಸಾಧಾರಣ ಸ್ತ್ರೀ ಎಂದು ಭಾವಿ ಸುವರೇ ಹೊರತು ಇಷ್ಟು ವಿದ್ಯಾವತಿಯು ಎಂದು ತಿಳಿಯಲಾರರು. ಪ್ರಥಮ ದಲ್ಲಿ ಲಿಟಲ್ ದೊರೆಸಾನಿಗೆ ಸಹ ಈಕೆಯ ಗುಣಗಳು ತಿಳಿಯಲಿಲ್ಲ. ಕ್ರಮ ಕ್ರಮವಾಗಿ ಆ ಲಿಟಿಲ್ ದೊರೆಸಾನಿಯು ರಖನಾಬಾಯಿಯ ಸುಗುಣಗಳನ್ನು ತಿಳಿದುಕೊಂಡು ಆಕೆಯಲ್ಲಿ ವಿಶೇಷ ಪ್ರೀತಿಯುಳ್ಳವಳಾಗಿ ಇದ್ದಳು, ಈ ದೊರೆ ಸಾನಿಯು ಇಂಗ್ಲೆಂಡಿಗೆ ಹೋಗುವಾಗ ರಖಮಾಬಾಯಿಯು ಅಪೇಕ್ಷಿಸದೇ ಇದ್ದರೂ ಒಂದು ಯೋಗ್ಯತಾ ಪತ್ರಿಕೆಯನ್ನು ಬರೆದು ಕೊಟ್ಟಳು. ಆ ಪತ್ರಿಕೆ ಯನ್ನು ಈ ಚರಿತ್ರೆಯ ಕಡೆಯ ಭಾಗದಲ್ಲಿ ಬರೆದು ಇದೇನೆ. ಈ ಪತ್ರಿಕೆ ಯನ್ನು ಓದಿದರೆ ಲಿಟಲ್ ದೊರೆಸಾನಿಗೆ ರಖಮಾಬಾಯಿಯಲ್ಲಿ ಇದ್ದ ಗೌರವವು ತಿಳಿಯುತ್ತದೆ.