ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧) ಅಬಲಾ ಸಚ್ಚರಿತ್ರ ರತ್ನ ಮಾಲೆ. ಕೆಲವು ದಿವಸಗಳು ಕಳೆದಮೇಲೆ ಮಿಚಲ್ ದೊರೆಸಾನಿಯು ವಿವಾಹ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮ ದೇಶಕ್ಕೆ ಹೋಗಲು ಎಣಿಸಿ, ತನ್ನ ಉದ್ಯೋಗವನ್ನು ಬಿಟ್ಟು ಬಿಟ್ಟಳು. ೧೮೯೫ ನೆ ಇಸವಿ ಆಗಷ್ಟ ತಿಂಗಳಿನಲ್ಲಿ ಆಕೆಯು ಇಂಗ್ಲೆಂಡಿಗೆ ಹೊರಟುಹೋದಳು. ಕೋಲಾಪುರ ಸಂಸ್ಥಾನದಲ್ಲಿ ಇರುವ ಎಲ್ಲ ಪಾಠಶಾಲೆಗಳಿಗೂ ಲಿಟಲ್ ದೊರೆಸಾನಿಯೇ ಅಧಿಕಾರಿಣಿಯಾಗಿ ಇದ್ದಳು. ಆದಕಾರಣ ಆಕೆಯು ನೋಡುತ್ತಿದ್ದ ಆ ದೊಡ್ಡ ಅಧಿಕಾರವನ್ನು ಯಾರಿಗೆ ಕೊಡಬೇಕು ಎಂದು ಸಂಸ್ಥಾನಾಧೀಶ್ವರನು ಆಲೋಚಿಸುತ್ತ ಇದ್ದನು. ಮಹಾರಾಜನೂ, ಸಂಸ್ಥಾನದಲ್ಲಿ ಇದ್ದ ಅನೇಕ ದೊಡ್ಡ ಮನುಷ್ಯರೂ ಆಂಗ್ಲೆಯ ಸ್ತ್ರೀಯರು ಮಾತ್ರವೇ ಈ ಕೆಲಸವನ್ನು ನಿರ್ವಹಿಸಬಲ್ಲರೇ ಹೊರತು ಇತರರು ಈ ಕೆಲಸವನ್ನು ಮಾಡಲಾರರು ಎಂದು ತಿಳಿದುಇದ್ದರು. ಆದರೆ ಈ ಕೆಲಸವನ್ನೂ , ಇದಕ್ಕಿಂತಲೂ ಘನವಾದ ಕೆಲಸಗಳನ್ನೂ ಮಾಡುವ `ಸಾಮರ್ಥ್ಯವು ರಖಮಾಬಾಯಿಯಲ್ಲಿ ಇದೆ ಎಂಬುದನ್ನು ಕೋಲಾಪುರದ ಅನೇಕ ವಿದ್ವಾಂಸರು ತಿಳಿದು ಇದ್ದರು. ಆದಕಾರಣ ಆ ಪಟ್ಟಣದ ವಿದ್ಯಾ ವಿಲಾಸ, ಜ್ಞಾನಸಾಗರ, ಮೊದಲಾದ ವೃತ್ತಾಂತಪತ್ರಿಕೆಗಳು, “ ರಖಮಾಬಾಯಿಗೆ ಹೊರತು ಇನ್ಯಾರಿಗೂ ಸೂಪರಿಂಟೆಂಡೆಂಟ್ ಕೆಲಸವನ್ನು ಕೊಡಕೂಡದು,” ಎಂದು ಅಧಿಕಾರಿಗಳಿಗೂ, ಮಹಾರಾಜನಿಗೂ ತಿಳಿಸಿದವು, ಆಗ ಮಹಾರಾಜನೂ, ಮಂತ್ರಿಯೂ, ಸಭಿಕರೂ ಆಮೋದಿಸಿ ಆ ಉದ್ಯೋಗವನ್ನು ರಖಮಾಬಾಯಿಗೆ ಕೊಟ್ಟರು. ಈ ಉದ್ಯೋಗವು ಈ ಪತಿವ್ರತಾತಿಲಕಕ್ಕೆ ಒಂದು ಅಮೂಲ್ಯ ಭೂಷಣವು ಎಂದು ಹೇಳಬಹುದು, ಮಿಸ್‌ ಲಿಟಲ್ ದೊರೆಸಾನಿಗೆ ನಾಲ್ಕು ನೂರು ರೂಪಾಯಿಗಳ ವೇತನವನ್ನೂ, ದೊಡ್ಡ ಬಂಗಲೆಯನ್ನೂ, ಎರಡು ಕುದುರೆಗಳ ಗಾಡಿಯನ್ನೂ, ಬೇಕಾದ ಚಾಕರರನ್ನೂ ಸಂಸ್ಥಾನದವರು ಕೊಡು ತಿದ್ದರು. ರಖನಾಬಾಯಿಯು ಭಾರತಮಹಿಳೆಯಾದ ಕಾರಣ ಆಕೆಗೆ ನೂರು ರೂಪಾಯಿಗಳ ವೇತನವನ್ನು ಏರ್ಪಾಟುಮಾಡಿದರು. ರಖಮಾಬಾಯಿಗೆ ದೊರೆತ ಉದ್ಯೋಗವು ಘನವಾದುದೂ, ಗೌರ ನಾಸ್ಪದವಾದುದೂ ಆದರೂ ಆಕೆಯು ಈ ಅಧಿಕಾರ ಪ್ರಾಪ್ತಿಯಿಂದ ಗರ್ವಿತ ಳಾಗಲಿಲ್ಲ. ತಾನು ಶ್ರೇಷ್ಠಳಾದಕಾರಣ ಇತರರು ತನ್ನನ್ನು ಸನ್ಮಾನಿಸ ಬೇಕು ಎಂಬ ಅಭಿಮಾನವು ಈಕೆಗೆ ಇರಲಿಲ್ಲ. ಇಂಗ್ಲೀಷ್ ವೇಷವನ್ನೂ, ಬೂಟ್ಸ್, ಸಾಕ್ಸ್‌ಗಳನ್ನೂ ಈಕೆಯು ಧರಿಸದೆ, ಯಾವಾಗಲೂ ಭಾರತಗೃಹಿಣಿಗೆ ತಕ್ಕ ಬಟ್ಟೆಗಳನ್ನೇ ಉಡುತ್ತಿದ್ದಳು. ಪಾಠಶಾಲೆಯನ್ನು ನೋಡಲು ಯಾರಾದರೂ ಪುರುಷರು ಬಂದರೆ, ರಖಮಾಬಾಯಿಯು ತನ್ನ ಕುರ್ಚಿಯಿಂದ ಎದ್ದು ನಿಲ್ಲುವಳು. ಶ್ರೀ ಸ್ವಾಭಾವಿಕವಾದ ಮರ್ಯಾದೆಯನ್ನು ತ್ಯಜಿಸಿ ಈಕೆಯು ಪುರುಷರೊಡನೆ ಮಾತನಾಡುತ್ತ ಇರಲಿಲ್ಲ.