ಅಬಾ ೧೧೬ ಅಬಲಾ ಸಚ್ಚರಿತ್ರ ರತ್ನ ಮಾಲೆ. ವೃತ್ತಾಂತಪತ್ರಿಕೆಗಳನ್ನೂ, ನೂತನ ಗ್ರಂಥಗಳನ್ನೂ ಓದುತ್ತ ಇದ್ದಳು, ಈಕೆಯು ಅಡಿಗೆಯನ್ನೂ, ಇತರ ಕೆಲಸಗಳನ್ನೂ ಮಾಡುವಾಗ ಈಕೆಯ ಪತಿಯಾಗಲಿ, ಮಕ್ಕಳಾಗಲಿ ಯಾವುದಾದರೂ ಒಂದು ಸದ್ಧಂಥವನ್ನು ಓದಿ ಹೇಳುತ್ತ ಇದ್ದರು. “ ಪ್ರತಿದಿನವೂ ಯಾವುದಾದರೂ ಹೊಸ ಪುಸ್ತು ಕವನ್ನು ಓದದಿದ್ದರೆ ನನ್ನ ಮನಸ್ಸು ವಿಕಾಸವಾಗಿಯೇ ಇರುವುದಿಲ್ಲ,” ಎಂದು ಈಕೆಯು ಹೇಳುತ್ತ ಇದ್ದಳು. ವಿದ್ಯಾವತಿಯರಾದ ಸ್ತ್ರೀಯರು ಶಿಶುಪೋಷಣೆಯಲ್ಲಿ ಅಶ್ರದ್ದೆ ಯುಳ್ಳವರಾಗಿ ಇರುತ್ತಾರೆ ಎಂದು ಕೆಲವರು ಹೇಳುತ್ತಾರೆ. ಈ ವಿಧವಾದ ಅಭಿಪ್ರಾಯ ಉಳ್ಳ ವರು, ಸಂಸಾರದಲ್ಲಿ ನಡೆಯುವ ವಿಷಯಗಳು ಮಾನವನ ಅಭೀಷ್ಟ ಪ್ರಕಾರವೇ ನಡೆಯುವುದು ಎಂತಲೂ, ಇದರಲ್ಲಿ ಈಶ್ವರನಿಯಾಮಕವು ಏನೂ ಇಲ್ಲವೆಂತಲೂ ತಿಳಿದುಕೊಂಡು ಇರಬಹುದು. ಹಾಗಾದರೆ ಸ್ತ್ರೀಯರೆಲ್ಲರೂ ವಿದ್ಯಾವತಿಯ ರಾದರೆ ಅಂದಿನಿಂದ ಪ್ರಜಾವೃದ್ದಿ ಯು ನಿಂತುಹೋಗುವುದೇ ? ಇಲ್ಲ. ಏಕೆ ಅಂದರೆ ಸ್ತ್ರೀಯರು ತಮ್ಮ ಮಕ್ಕಳನ್ನು ಪ್ರೇಮಿಸುವುದಕ್ಕೂ, ಬೆಳೆಸುವುದಕ್ಕೂ ಅವರ ಅಜ್ಞಾನವು ಕಾರಣವಲ್ಲದೆ, ಈಶ್ವರನು ಅವರಲ್ಲಿ ಇಟ್ಟ ನೈಸರ್ಗಿಕವಾದ ಪುತ್ರವಾತ್ಸಲ್ಯವೇ ನಿಜವಾದಕಾರಣವು ಆಗಿದೆ. ಈ ವಾತ್ಸಲ್ಯವು ಪಶುಪಕ್ಷಿ ಗಳಲ್ಲಿಯೂ ಕ್ರಿಮಿಕೀಟಗಳಲ್ಲಿ ಯೂ, ಸ್ತ್ರೀ ಪುರುಷರಲ್ಲಿಯೂ ವಿದ್ಯಾವಂತರಲ್ಲಿಯೂ, ವಿದ್ಯಾಹೀನರಲ್ಲಿಯೂ ವ್ಯಾಪಿಸಿ ಇದೆ, ವಿದ್ಯಾವತಿಯರಾದ ಸ್ತ್ರೀಯರು - ಸ್ತ್ರೀಧರ್ಮ ನೀತಿ, ” “ ಹದಿಬದೆಯಧರ್ಮ, ' ಸಾವಿತ್ರೀ ಚರಿತ್ರೆ' ಮೊದಲಾದ ಸದ್ದಂಥ ಗಳನ್ನು ಓದಿಕೊಂಡು ತಮ್ಮ ಮನೆಯ ಕೆಲಸವನ್ನು ಶ್ರದ್ಧೆಯಿಂದ ಮಾಡುವರು. ಮತ್ತು ತಮ್ಮ ಆದಾಯವನ್ನು ತಿಳಿದು ಖರ್ಚುಮಾಡುವರು, (೨) ಅವರು ಅಪಾತ್ರದಾನ, ತಿಂಡಿ, ನೋಡುವುದಕ್ಕೆ ಚನ್ನಾಗಿದ್ದು ಒಂದುಕಾಸು ಬೆಲೆಯನ್ನು ಸಹ ಮಾಡದಅಸತ್ಯದ ಒಡವೆಗಳನ್ನು ಕೊಳ್ಳುವುದು ಇವೇ ಮೊದಲಾದ ದುಗ್ವಯಗಳನ್ನು ಮಾಡದಿರುವರು, ವಿದ್ಯಾವತಿಯರು ಸಂಸಾರ ಸುಖವನ್ನು ವೃದ್ಧಿ ಮಾಡುವರೇ ಹೊರತು ಸುಖಕ್ಕೆ ಕುಂದನ್ನು ಉಂಟುಮಾಡಲಾರರು. ರಖಮಾಬಾಯಿಯು ವಿದುಷಿಯೂ, ಅಧಿಕಾರಸಂಪನ್ನಳೂ ಆಗಿ ಇದ್ದರೂ ಮುಖ್ಯವಾದ ವ್ರತಗಳನ್ನು ಭಕ್ತಿಯಿಂದ ಮಾಡುತ್ತ ಇದ್ದಳು. ಆದರೆ ಆಕೆಯು ಎಲ್ಲಾ ಪ್ರತಗಳಿಗಿಂತಲೂ ಪತಿಭಕ್ತಿ' ಎಂಬ ವ್ರತವೇ ಶ್ರೇಷ್ಠವಾದುದು ಎಂದು ಎಣಿಸಿ ಇದ್ದಳು, ಪತಿಯು ಸದಾ ಸಂತುಷ್ಟಾಂತರಂಗನಾಗಿ ಇರುವಂತೆ ರಖನಾ ಬಾಯಿಯು ನೋಡಿಕೊಳ್ಳುತ್ತ ಇದ್ದಳು, ಸೌಭಾಗ್ಯ, ಸಂತತಿ, ಸಂಪತ್ತು, ಅಧಿ ಕಾರ, ರಾಜಸಂಸ್ಥಾನದಲ್ಲಿ ಮಾನ್ಯತೆ ಇವೆಲ್ಲವೂ ಇದ್ದುದರಿಂದ ರಖಮಾ ಬಾಯಿಯು 'ಬಹುಸುಖಿ' ಎಂದು ಜನರು ತಿಳಿದು ಇದ್ದರು. ಆದರೆ ಅಂಗವೈಕಲ್ಯ ವನ್ನು ಹೊಂದಿ ಹತಾಶನಾದ ಪತಿಯ ಸ್ಥಿತಿಯಿಂದ, ಈಕೆಯು ಸರ್ವದಾ ಚಿಂತಾ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೪೧
ಗೋಚರ