ರಖಮಾಬಾಯಿ ಕೇಳೋಕರ್, ೧೧೬ ಕ್ರಾಂತಳಾಗಿ ಇರುತ್ತ ಇದ್ದಳು. ವಿದ್ವಾಂಸನೂ, ಗುಣವಂತನೂ ಆದ ಪತಿಯು ಮನೆಯಲ್ಲಿ ಕುಳಿತು ಇರುವುದೂ, ತಾನು ಹೊರಗೆ ಹೋಗಿ ಕೆಲಸವನ್ನು ಮಾಡು ವುದೂ, ಎಲ್ಲರೂ ತನ್ನ ಹೆಸರನ್ನೇ ಪ್ರಚುರಮಾಡಿ ಹೊಗಳುವುದೂ ಈಕೆಗೆ ವಿಶೇಷ ಖೇದವನ್ನು ಉಂಟುಮಾಡುತ್ತ ಇದ್ದವು, ಈಕೆಯು ಒಂದೊಂದು ಸಲ, “ ಪುರುಷರು ಮನೆಯಲ್ಲಿ ಕುಳಿತುಕೊಂಡು, ಸ್ತ್ರೀಯರು ಉದ್ಯೋಗವನ್ನು ಮಾಡು ವುದು ಅತಿಖೇದಕರವಾದುದು. ಆದರೂ ಈಶ್ವರನು ಇಂತಹ ಯೋಗವನ್ನು ನಮಗೆ ಉಂಟುಮಾಡಿದುದಕ್ಕೆ ಬಹಳಚಿಂತೆಯಾಗಿದೆ. ಮಕ್ಕಳನ್ನು ಕಾಪಾಡ ಬೇಕು ಎಂದು ಈ ಕೆಲಸವನ್ನು ಮಾಡುತ್ತ ಇರುವೆನೇ ಹೊರತು ಇದರಿಂದ ನನಗೆ ಸಂತೋಷವೇನೂ ಇಲ್ಲ. ನನ್ನ ಕರ್ತವ್ಯವನ್ನು ನಾನು ಮಾಡುತ್ತ ಇದೇನೆ,” ಎಂದು ನುಡಿಯುತ್ತ ಇದ್ದಳು. ಈ ವಾಕ್ಯಗಳಿ೦ದ ಈಕೆಯ ಹೃದಯದಲ್ಲಿ ಇದ್ದ ಚಿ೦ತೆಯು ವ್ಯಕ್ತವಾಗುತ್ತದೆ. ಮಿಸ್ ಲಿಟಲ್ ದೊರೆಸಾನಿಯು ತನ್ನ ದೇಶಕ್ಕೆ ಹೋಗುವ ಸಮಯದಲ್ಲಿ, ರಖಮಾಬಾಯಿಯೊಡನೆ ಹೋಗಿ ಬರುವೆನು” ಎಂದು ಹೇಳಿ, “ಅಮಾ, ನಿಮ್ಮ ಪೋಟೊಗ್ರಾಫನ್ನು ತೆಗೆದುಕೊಳ್ಳುವೆನು ” ಎಂದು ಕೇಳಿದಳು. ಅದಕ್ಕೆ ರಖಮಾ ಬಾಯಿಯು, “ ನಾನು ದೇಶೋಪಕಾರವಾದ ಯಾವ ಘನಕಾರ್ಯವನ್ನೂ ಮಾಡ ಲಿಲ್ಲ. ಆದುದರಿಂದ ನನ್ನ ಫೋಟೊಗ್ರಾಫನ್ನು ತೆಗೆಯಿಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ,” ಎಂದು ವಿನಯದೊಡನೆ ಹೇಳಿದಳು. ಆಗ ಮಿಸ್ ಲಿಟಲ್ ದೊರೆಸಾನಿಯು ತನ್ನ ರೂಪಸಟವನ್ನು ರಖನಾಬಾಯಿಗೆ ಕೊಟ್ಟು ಆಕೆಯು ಕೇಳದೇ ಇದ್ದರೂ ಒಂದು ಯೋಗ್ಯತಾಪತ್ರಿಕೆಯನ್ನು ಬರೆದು ಕಳುಹಿಸಿದಳು. ಅದರಲ್ಲಿ “ ಉಪಾಧ್ಯಾಯಿನಿಯರಿಗೆ ವಿದ್ಯೆಯನ್ನು ಕಲಿಸುವುದಕ್ಕಾಗಿ ಸ್ಥಾಪಿತ ವಾದ ಪಾಠಶಾಲೆಯಲ್ಲಿ ರಖಮಾಬಾಯಿಯು ಕೆಲವು ದಿವಸಗಳು ಇದ್ದು ವಿದ್ಯೆ ಯನ್ನು ಕಲಿಸುವುದರಲ್ಲಿ ಪ್ರವೀಣಳಾದಳು. ಸ್ತ್ರೀಯರಿಗೆ ವಿದ್ಯೆ ಯನ್ನು ಕಲಿಸು ವುದರಲ್ಲಿ ಈಕೆಯು ಮಹೋತ್ಸುಕಳಾಗಿ ಇರುತ್ತಾಳೆ. ಈಕೆಯ ಉತ್ತಮ ಉದಾ ಹರಣೆಯಿಂದ ಸ್ತ್ರೀ ವಿದ್ಯೆಯು ವಿಶೇಷವಾಗಿ ವೃದ್ಧಿಯನ್ನು ಹೊಂದಿತು. ಇಂತಹ ಬುದ್ದಿವಂತಳೂ, ಸಹಾಯ ಮಾಡುವವಳೂ ಆದ ಅಸಿಸ್ಟಂಟು ದೊರೆತುದುದಕ್ಕೆ ನಾನು ಆಕೆಯಲ್ಲಿ ಕೃತಜ್ಞಳಾಗಿ ಇದೇನೆ. ಈಕೆಯು ವಿಶೇಷ ಸುಗುಣವತಿಯು. ಈಕೆಯು ಪರೋಪಕಾರ ವಿಷಯದಲ್ಲಿ ತತ್ಸರಳಾಗಿ ಇರುತ್ತಾಳೆ. ಈಕೆಯ ಬಳಿ ಯಲ್ಲಿ ವಿದ್ಯಾಭ್ಯಾಸಮಾಡಿದ ಉಪಾಧ್ಯಾಯಿನಿಯರು ಕೋಲಾಪುರ ಸಂಸ್ಥಾನ ದಲ್ಲೆಲ್ಲ ತುಂಬಿ ಇದಾರೆ. ಈ ಉಪಾಧ್ಯಾಯಿನಿಯರಲ್ಲಿ ಅನೇಕರು ತಾವು ಹೋದ ಸ್ಥಳಗಳಲ್ಲಿ ರಖಮಾಬಾಯಿಯಂತೆಯೇ ಆಚರಿಸಿ ಎಲ್ಲರನ್ನೂ ಸಂತೋಷಗೊಳಿ ಸುತ್ತ ಇದಾರೆ. ರಖಮಾಬಾಯಿಯು ಕುಲೀನ ಸ್ತ್ರೀ ಎಂತಲೂ, ಸುಶೀಲಳಾದ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೪೨
ಗೋಚರ