೧೧೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಪತ್ನಿಯು ಎಂತಲೂ, ಅನುಭವಿಕ ಮಾತೆಯು ಎಂತಲೂ, ಉತ್ತಮ ಉಪಾ ಧ್ಯಾಯಿನಿಯು ಎಂತಲೂ, ಇಷ್ಟು ಬಗೆಯಿಂ ದಲೂ ಈಕೆಯಲ್ಲಿ ನನಗೆ ಪೂಜ್ಯ ಭಾವವು ಉಂಟಾಗಿ ಇದೆ. ಈಕೆಯು ಶ್ರೇಯಸ್ಸನ್ನು ಹೊಂದುತ್ತ ಇರುವಳು ಎಂದು ಕೇಳಿ, ನನಗೆ ಯಾವಾಗಲೂ ಸಂತೋಷವು ಉಂಟಾಗುತ್ತ ಇರುವುದು, ” ಎಂದು ಬರೆದಳು. ವಿದ್ಯಾವಿನಯ ಸಂಪನ್ನಳಾದ ರಖನಾಬಾಯಿಯ ಚರಿತ್ರೆಯು ಒಂದು ಉತ್ತಮವಾದ ಉಪದೇಶ ಗ್ರಂಥವು ಎಂದು ಹೇಳಬಹುದು. ಇಣನೀ ಕವ ಕರ್ಮ ದೇವಿ. ತಮ್ಮ ಸತ್ಕಾರ್ಯಗಳಿಂದಲೂ, ಸದ್ಗುಣಗಳಿಂದಲೂ ಭರತಖಂಡಕ್ಕೆ ಸತೀರ್ತಿಯನ್ನುಂಟುಮಾಡಿದ ಸಾಧೀಮಣಿಯರಲ್ಲಿ ಅನೇಕರಿಗೆ ರಾಜ ಪುತ್ರ ಸ್ಥಾನವು ಜನ್ಮಭೂಮಿಯಾಗಿ ಇದೆ. ರಾಜಪುತ್ರದೇಶದಲ್ಲಿ ಕ್ಷತ್ರಿಯವೀರರು ತಮ್ಮ ಶೌರ್ಯದಿಂದ ಜನ್ಮಭೂಮಿಗೆ ಕೀರ್ತಿಯನ್ನು ತಂದಂತೆ, ಕ್ಷತ್ರಿಯ ಸ್ತ್ರೀಯರು ತಮ್ಮ ನಿಷ್ಕಲ್ಮಷ ಪಾತಿವ್ರತ್ಯದಿಂದ ಮಾತೃಭೂಮಿಗೆ ಯಶಸ್ಸನ್ನು ತಂದರು. ಈಚೆಗೆ ನಾನೂರು ವರ್ಷಗಳಿಂದಲೂ ರಾಜಪುತ್ರದೇಶವು ವೀರಪುತ್ರ ಜನನಿ ಎಂಬ ನಾಮವನ್ನು ಮಾತ್ರ ಉಳ್ಳದ್ದಾಗಿ ಇದೆ, ತತ್ತೂರ್ವದಲ್ಲಿ, ರಾಜ ಪುತ್ರರು ಎಂದರೆ ಸಕಲ ದೇಶೀಯರಿಗೂ ಕಾಲಾಂತಕರಂತೆ ತೋರುತ್ತ ಇದ್ದರು. ಮತ್ತು ರಾಜಪುತ್ರಸ್ತ್ರೀಯರು ದೃಢನಿಶ್ಚಯವಿಭೂಷಿತರು ಎಂತಲೂ, ಪರಮ ಪತಿವ್ರತೆಯರು ಎಂತಲೂ ಎಲ್ಲರೂ ನಂಬಿದ್ದರು. ತಮ್ಮ ಅಪೂರ್ವ ಸುಗುಣ ಗಳಿಂದ ದೇಶಕ್ಕೆ ಅಲಂಕಾರಭೂತರಾದ ರಾಜಪುತ್ರ ರಮಣಿಯರಲ್ಲಿ ಕರ್ಮ ದೇವಿಯು ಒಬ್ಬಳು, ಈಕೆಯು ಐದನೆಯ ಶತಾಬ್ದದಲ್ಲಿ ಇದ್ದಳು ಎಂದು ತೋರುತ್ತದೆ. ಈಕೆಯ ತಂದೆಯ ಹೆಸರು ಮೊಹಿಲರಾಜ ಮಾಣಿಕ್ಯರಾಜ, ಈತನು ಮಾರ್ವಾಡೆಯಲ್ಲಿ ಇರುವ ಔರಿಂತ್ ಸಂಸ್ಥಾನಾಧಿಪತಿಯು, ಕರ್ಮ ದೇವಿಯು ಬಾಲ್ಯದಿಂದಲೂ ಸದ್ಗುಣಗಳುಳ್ಳವಳಾದಕಾರಣ, ಆಕೆಯ ಜನನೀ ಜನಕರು ಆಕೆಯನ್ನು ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತ ಇದ್ದರು. ಈಕೆಯು ಬೆಳೆಯುತ್ತ ಬೆಳೆಯುತ್ತ ಪ್ರಾಚೀನ ಶೂರವರರ ಚರಿತ್ರೆಗಳನ್ನು ಕೇಳು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೪೩
ಗೋಚರ