ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ.

  • ಅಬಲಾ ಸಚ್ಚರಿತ್ರರತ್ನಮಾಲೆ ” ಎಂಬ ಈ ಗ್ರ೦ಥವು ರಿಟೈರ್ ಡಿಸ್ಟಿ ಕಮಿಷ ನರ್ ಮ| ರಾ ಮಾ ಚಂಗಯ್ಯ ಶೆಟ್ಟರವರ ಆತ್ಮಜೆಯರಾದ ಶ್ರೀಮತೀ ಕಮ ಲಾಂಬ ಎಂಬವರಿಂದ ರಚಿಸಲ್ಪಟ್ಟದ್ದಾಗಿದೆ. ಇವರು ವೈಶ್ಯ ಪಂಗಡದ ಸ್ತ್ರೀ ಶಿರೋಮಣಿಗಳು ಮತ್ತು ಕನ್ನಡಗ್ರಂಥ ಪ್ರಣೇತ್ರಗಳಲ್ಲಿ ಬಹಳ ಕುಶಲತೆಯುಳ್ಳ `ವರಾಗಿದಾರೆ. ಈ ಗ್ರಂಥದಲ್ಲಿ ನಮ್ಮ ಭರತಖಂಡದಲ್ಲಿ ಪುರಾಣಗಳಲ್ಲಿಯೂ, ಚರಿತ್ರೆಯಲ್ಲಿಯೂ ಬಹು ಮಾರ್ಗಗಳಿಂದ ಪ್ರಸಿದ್ಧಿಯನ್ನು ಪಡೆದ ಅನೇಕ 'ಸ್ತ್ರೀಯರ ಜೀವನಚರಿತ್ರೆಗಳು ಬರೆಯಲ್ಪಟ್ಟಿವೆ. ಈ ದೇಶದಲ್ಲಿ ಪ್ರಚಾರದಲ್ಲಿರುವ ಸಾಮಾಜಿಕ ವಿಧಿಗಳಿಂದ ನಮ್ಮ ಸ್ತ್ರೀಯರಿಗೆ' ಗೃಹ ಕೃತ್ಯಕ್ಕೆ ಸಂಬಂಧಪಟ್ಟ ಗುಣ ಗಳು ಪ್ರಕಾಶಕ್ಕೆ ಬರುವಂತೆ ಇತರ ಗುಣಗಳು ಆಮಟ್ಟಿಗೆ ಪ್ರಕಾಶಕ್ಕೆ ಬರಲು ಅನುಕೂಲವಿಲ್ಲವೆಂಬುದು ವಿದಿತ ವಿಷಯವಾಗಿದೆ. ಆದರೂ ಈ ಗ್ರಂಥದಲ್ಲಿ ವರ್ಣಿಸಿರುವ ಸ್ತ್ರೀಯರ ಚರಿತ್ರೆಗಳನ್ನು ನೋಡಲಾಗಿ, ಅವಕಾಶ ದೊರೆತರೆ ಭಾರತ ಮಹಿಳೆಯರು ಎಲ್ಲಾ ಭಾಗಗಳಲ್ಲಿಯೂ ಪ್ರಕಾಶಕ್ಕೆ ಬರಲು ತಕ್ಕ ಶಕ್ತಿಯುಳ್ಳವರೆಂದು ವ್ಯಕ್ತವಾಗುತ್ತಿದೆ. ಇದಕ್ಕೆ ದೃಷ್ಟಾಂತ-ಅವ್ಯವಸ್ಥೆಯ ಕಾಲದಲ್ಲಿ ರಾಜ್ಯ ಕುಶಲತೆ ಯನ್ನು ತೋರಿಸಿದ ಮೈಸೂರು ಮಹಾರಾಣಿ ಲಕ್ಷ್ಮಮ್ಮಣ್ಣಿಯವರು ಮತ್ತು ಇಂದೂರು ಅಹಲ್ಯಾಬಾಯಿಯವರು, ವೀರಾಗ್ರಣೆಗಳೆನಿಸಿಕೊಂಡ ವೀರಮತಿ, ರಾಣಿದುರ್ಗಾವತಿ ಮತ್ತು ರ್ಝಾಸಿ ರಾಣಿ ಲಕ್ಷ್ಮೀಬಾಯಿಯವರು, ಭಗವದ್ಭಕ್ತ ರೆನಿಸಿಕೊಂಡ ಮೀರಾಬಾಯಿಯವರು, ತತ್ವವಿಚಾರಪರರಾದ ಗಾರ್ಗಿಯವರು.

ಗ್ರಂಥಶೈಲಿಯು ಸುಲಭವಾಗಿಯೂ, ಆಹ್ಲಾದಕರವಾಗಿಯೂ ಇದೆ. ಕನ್ನಡ ದೇಶದಜನರು ಈ ಸದ್ಧಂಥಕ್ಕೆ ಆಶ್ರಯವನ್ನು ಕೊಟ್ಟು ಗ್ರಂಥಕತ್ರ್ರುಗಳಿಗೆ ಪ್ರೋತ್ಸಾಹವನ್ನುಂಟುಮಾಡುವರೆಂದು ನಂಬಿರುತ್ತೇನೆ. ಎಂ. ಶ್ಯಾಮರಾವ್, ಮೈಸೂರು ವಿದ್ಯಾಭ್ಯಾಸದ ಇಲಾಖೆಯ ಮಾಜಿ ಇನ್ ಸ್ಪೆ ಕ್ಟರ್ ಜನರಲ್,