ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೋರೂದತ್ತು. ೧೨೫ ಖಂಡಕ್ಕೆ ಕರೆದುಕೊಂಡು ಹೋದನು. ಆತನು ಅವರಿಗೆ ಉನ್ನತ ವಿದ್ಯೆಯನ್ನು ಕಲಿಸಲು ಎಣಿಸಿ ಪ್ರಥಮದಲ್ಲಿ ಫ್ರಾನ್ನು ದೇಶಕ್ಕೆ ಹೋಗಿ ನೀಸುನಗರದಲ್ಲಿ ನಿಂತನು. ಅಲ್ಲಿ ಆ ಸೋದರಿಯರು ತಮ್ಮ ಬುದ್ದಿಬಲದಿಂದ ವಿದ್ಯಾರ್ಥಿವೇತನಗಳನ್ನು ಪಡೆದು, ಅಲ್ಲಿನ ಫ್ರೆಂಚ್ ವಿದ್ವಾಂಸರನ್ನು ಆಶ್ರಯಿಸಿ ಫ್ರೆಂಚ್ ಭಾಷೆಯನ್ನು ಕಲಿತುಕೊಂಡರು. ಆಮೇಲೆ ಅವರು ಪ್ಯಾರಿಸ್ ನಗರದಲ್ಲಿ ಕೆಲವುದಿವಸ ವಾಸ ಮಾಡಿ, ಅಲ್ಲಿಂದ ಹೊರಟು ಇಟಲೀದೇಶವನ್ನು ನೋಡಿಕೊಂಡು, ಇಂಗ್ಲಾಂಡಿಗೆ ಹೋದರು. ೧೮೭೩ ನೆಯ ವರ್ಷದವರೆಗೂ ಇವರು ಅಲ್ಲಿಯೇ ಇದ್ದರು. ಅವರು ಅಲ್ಲಿ ಇದ್ದಕಾಲದಲ್ಲಿ ಆರೂತೋರುಗಳು ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಅಸಾಧಾರಣ ಪ್ರವೀಣತೆಯನ್ನು ಪಡೆದರು. ಈ ಸೋದರಿಯರು ಕೇಂಬ್ರಿಡ್ ಪಟ್ಟಣದಲ್ಲಿ ಇದ್ದು, ಟ್ರೆಕ್ಕಿಲ್ ದೊರೆಸಾನಿಯು ಫ್ರೆಂಚ್ ಭಾಷೆಯಲ್ಲಿ ಹೇಳುತ್ತ ಇದ್ದ ಪ್ರತಿಯೊಂದು ಉಪನ್ಯಾಸವನ್ನೂ ಹೋಗಿ ಕೇಳುತ್ತ ಇದ್ದರು. ಅನಂತರ ಅವರು ಇಬ್ಬರು ಸೆಂಟುಲಿಯೋವಾರ್ ಪಟ್ಟಣಕ್ಕೆ ಹೋಗಿ ತಮ್ಮ ಫ್ರೆಂಚ್ ವಿದ್ಯೆಯನ್ನು ವೃದ್ಧಿಮಾಡಿಕೊಂಡರು. ಯೂತಪು ಖಂಡಕ್ಕೆ ಹೋದಮೇಲೆ ತೋರೂದತ್ತು ತನ್ನ ದಿನಚರಿಯನ್ನು ಪುಸ್ತಕದಲ್ಲಿ ಪ್ರತಿದಿವಸವೂ ಬರೆಯುತ್ತ ಇದ್ದಳು. ಈ ಚಿಕ್ಕ ಕುಟುಂಬವು ಫ್ರಾನ್ಸ್ ದೇಶದಲ್ಲಿ ವಾಸಮಾಡಿದ ಕಾಲಕ್ಕಿಂತಲೂ ಹೆಚ್ಚಾದ ಕಾಲವನ್ನು ಇಂಗ್ಲಾಂಡಿನಲ್ಲಿ ಕಳೆದರೂ, ತೋರುದತ್ತಿಗೆ ಫ್ರಾನ್ನು ದೇಶದ ಮೇಲೆಯೇ ವಿಶೇಷ ಗೌರವವು ಉಂಟಾಗಿ ಇತ್ತು. ೧೮೬೯ ನೆಯ ಇಸವಿಯಲ್ಲಿ ಫ್ರಾನ್ಸಿಗೂ, ಜಮ್ಮನಿಗೂ ನಡೆದ ಘೋರಯುದ್ದದಲ್ಲಿ ಫ್ರಾನ್ಸಿಗೆ ಪರಾಭವವು ಸಂಭ ವಿಸಲು, ಮನಹಿಡಿಯಲಾರದೆ ತೋರೂದತ್ತು ತನ್ನ ದಿನಚರಿಯ ಪುಸ್ತಕದಲ್ಲಿ, “ ನಾನು ಹಿಂದೆ ದಿನಚರ್ಯೆಯನ್ನು ಬರೆದು ಎಷ್ಟೋ ದಿವಸಗಳು ಆದವು. ಅಯ್ಯೋ ! ಈ ಅವಕಾಶದಲ್ಲಿ ಫ್ರಾನ್ಸ್ ದೇಶದಲ್ಲಿ ಎಷ್ಟು ಮಾರ್ಪುಂಟಾಯಿತು. ಪ್ಯಾರಿಸ್‌ನಗರದಲ್ಲಿ ನಾವು ಇದ್ದಾಗ ಆ ನಗರವು ಎಷ್ಟೋ ರಮಣೀಯವಾಗಿ ಇತ್ತು, ಅಲ್ಲಿನ ರಾಜಮಾರ್ಗಗಳು ರಮ್ಯವಾಗಿ ಇದ್ದವು. ಅಲ್ಲಿನ ಸೈನ್ಯಗಳನ್ನು ಸುವ್ಯವಸ್ಥೆಯಲ್ಲಿ ಇಟ್ಟಿದ್ದರು. ವೈಭವಸಂಪನ್ನವಾದ ಆ ಪಟ್ಟಣವು ಈ ದಿವಸ ಇಷ್ಟು ದೀನ ದೆಶೆಗೆ ಬಂದುದನ್ನು ಕೇಳಿ ನನಗೆ ಬಹಳ ದುಃಖವಾಗಿದೆ. ಸೃಷ್ಟಿಯಲ್ಲಿ ಇರುವ ಸಕಲ ನಗರಗಳಲ್ಲಿ ಯೂ ಸುಂದರವಾದ ನಗರವು ಎಂದು ಪ್ರಸಿದ್ದಿ ಯನ್ನು ಪಡೆದ ಪ್ಯಾರಿಸ್ ಪಟ್ಟಣಕ್ಕೆ ಇಂತಹ ದೀನಾವಸ್ಥೆಯು ಉಂಟಾಯಿತು ಎಂದು ಕೇಳಿದರೆ ಯಾರ ಹೃದಯವು ತಾನೇ ದ್ರವೀಭೂತವಾಗದೆ ಇರಬಲ್ಲದು ? ಪ್ರಾನ್ಸ್ ದೇಶೀಯರಿಗೂ, ಜನ್ಮನಿ ದೇಶೀಯರಿಗೂ ಯುದ್ಧವು ಪ್ರಾರಂಭವಾದ ದಿನದಿಂದಲೂ ನನ್ನ ಮನಸ್ಸು ಫ್ರಾನ್ಸ್ ದೇಶದ ಜಯವನ್ನೇ ಅಪೇಕ್ಷಿಸುತ್ತ ಇತ್ತು. ಆದರೆ ಕೊನೆಗೆ ಫ್ರಾನ್ಸ್ ದೇಶಕ್ಕೇ ಪರಾಜಯವು ಉಂಟಾದುದು ಬಹು ವ್ಯಸನಕರವಾದ