೧೨೬ ಅಬಲಾ ಸಚ್ಚರಿತ್ರ ರತ್ನ ಮಾಲೆ. ವಿಷಯವು,” ಎಂದು ಬರೆದಳು, ಈ ವಾಕ್ಯಗಳಿಂದ ತೋರೂದತ್ತಿಗೆ ತನ್ನ ಜನ್ಮ ಭೂಮಿಯಾದ ಹಿಂದೂದೇಶದ ಮೇಲೆ ಎಷ್ಟು ಪ್ರೀತಿಯು ಇತ್ತೋ ಅಷ್ಟು ಪ್ರೀತಿಯು ಫ್ರಾನ್ಸ್ ದೇಶದ ಮೇಲೆ ಇತ್ತು ಎಂದು ತಿಳಿಯಬಹುದು, ಈಕೆಯು ಆ ದೇಶದ ಮೇಲೆ ತನಗೆ ಇರುವ ಗೌರವವನ್ನು ಒಂದು ಪದ್ಯ ಕಾವ್ಯವನ್ನು ರಚಿಸಿ ಅದರ ಮೂಲಕ ಪ್ರಕಾಶಪಡಿಸಿದಳು. ೧೮೭೩ ನೆಯ ಇಸವಿಯಲ್ಲಿ ಗೋವಿಂದಚಂದ್ರದತ್ತನು ಮಕ್ಕಳನ್ನು ಕರೆದು ಕೊಂಡು ಕಲಕತ್ತೆಯನ್ನು ಪ್ರವೇಶಿಸಿದನು, ಮನೆಗೆ ಬಂದಮೇಲೆ ತೋರೂದತ್ತು ತಂದೆಯ ಹತ್ತಿರ ಸಂಸ್ಕೃತವನ್ನು ಕಲಿಯಲು ಪ್ರಾರಂಭಮಾಡಿದಳು. ಆಮೇಲೆ ದತ್ತನು ಮಗಳಿಗೆ ಕವಿತ್ವ ಸ್ಫೂರ್ತಿಯು ಉಂಟಾಗುವುದಕ್ಕೆ ಸದಾ ಪ್ರೋತ್ಸಾಹ ಮಾಡುತ್ತಿದ್ದನು. ತಂದೆಯ ಪ್ರೋತ್ಸಾಹದಿಂದಲೇ ತನಗೆ ಕವಿತ್ವ ಶಕ್ತಿಯು ಉಂಟಾಯಿತು ಎಂದು ತೋರೂದತ್ತು ತಂದೆಯಲ್ಲಿ ಕೃತಜ್ಞಳಾಗಿ ಇದ್ದಳು. ಆ ಕಾಲದಲ್ಲಿ ಬಂಗಾಳ್ವಾಸ್ತ್ರೀಯು ವಿದೇಶ ಭಾಷೆಯಲ್ಲಿ ಉತ್ತಮ ಕವಿತ್ವ ವನ್ನು ಹೇಳುವಳು ಎಂದು ಯಾರೂ ಸ್ವಪ್ನದಲ್ಲಿ ಯೂ ನೆನಸಿ ಇರಲಿಲ್ಲ. ಹಾಗೆ ಯಾವ ಹೆಂಗಸಾದರೂ ಕವಿತ್ವವನ್ನು ರಚಿಸಿದಳು ಎಂದು ಹೇಳಿದರೆ, ಕೇಳಿದವರು ಆ ಕವಿತ್ವವನ್ನು ಯಾರೋ ಪುರುಷನು ರಚಿಸಿ ಸ್ತ್ರೀಯಹೆಸರಿನ ಮೇಲೆ ಪ್ರಸಿದ್ದ ಪಡಿಸಿದನು ಎಂದು ಹೇಳುತ್ತ ಇದ್ದರು. ಆದುದರಿಂದ ತೋರೂದತ್ತು ಪ್ರಥಮದಲ್ಲಿ ರಚಿಸಿ ಅಚ್ಚು ಹಾಕಿಸಿದ ಪದ್ಯಗಳನ್ನು ಓದಿದವರು, ಯಾರೋ ಒಬ್ಬ ಆ೦ಗ್ಲೆಯ ಪುರುಷನೋ ಸ್ತ್ರೀಯೋ ಈ ಪದ್ಯಗಳನ್ನು ರಚಿಸಿ ತಮ್ಮ ಹೆಸರನ್ನು ಬರೆಯದೆ ತೋರೂದತ್ತು ಎಂದು ರುಜುಮಾಡಿ ಇರುವರು ಎಂದು ಎಣಿಸಿದರು. ಈಕೆಯು ಪ್ರಥಮದಲ್ಲಿ ಒಂದುಮಾಸ ಪತ್ರಿಕೆಗೆ ಒಬ್ಬ ಫ್ರೆಂಚ್ ಕವಿಯನ್ನು ಕುರಿತು ವ್ಯಾಸವನ್ನು ಬರೆದು ಪ್ರಕಟಿಸಿದಳು. ಆಮೇಲೆ ಅನೇಕ ಪದ್ಯಗಳನ್ನು ಫ್ರೆಂಚ್ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಪರಿವರ್ತಿಸಿ, ಆ ಮಾಸಪತ್ರಿಕೆಯಲ್ಲಿಯೇ ಪ್ರಕಟಿಸಿದಳು. ಆ ಕಾಲದಲ್ಲಿ ಈ ಪದ್ಯಗಳನ್ನು ಓದಿದವರು ಪದ್ಯಗಳು ಬಹುಚನ್ನಾಗಿವೆ' ಎಂದು ಮೆಚ್ಚಿಕೊಳ್ಳುತ್ತ ಇದ್ದರಂತೆ. ೧೮೭೪ ನೆಯ ಇಸವಿಯಲ್ಲಿ ಈಕೆಯ ಅಕ್ಕನಾದ ಆರೂಬಾಯಿಯು ಕ್ಷಯ ರೋಗದಿಂದ ಮೃತಳಾದಳು. ಆರೂಬಾಯಿಯು ಕವಿತ್ವ ಕಲ್ಪನೆಯಲ್ಲಿ ತಂಗಿ ಯಷ್ಟು ಸಾಮರ್ಥ್ಯವುಳ್ಳವಳಲ್ಲ. ಆದರೆ ಬಂಗಾಳೀ, ಫ್ರೆಂಚ್, ಇಂಗ್ಲೀಷ್ ಭಾಷಾ ಪಾಂಡಿತ್ಯದಲ್ಲಿ ತೋರುವಿನೊಡನೆ ಸಮಾನಳಾಗಿ ಇದ್ದಳು. ಆರೂಬಾಯಿಗೆ ತನ್ನ ಹೆಸರನ್ನು ಪ್ರಸಿದ್ಧ ಪಡಿಸುವುದಕ್ಕೆ ಇಷ್ಟವು ಇರಲಿಲ್ಲ. ಈಕೆಗೆ ಏಕಾಂತ ವಾಗಿ ಇರುವುದೇ ಸೌಖ್ಯವು ಎಂದು ತೋರುತ್ತ ಇತ್ತು. ಆದರೆ ಈಕೆಯು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೫೧
ಗೋಚರ