ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಅದ ಸುಜನರು ಸಹ ಕೆಲವರು ಇರುತ್ತಾರೆ. ತೋರೂದತ್ತಿನ ಭಾಗ್ಯವಶದಿಂದ ಇಂತಹ ಗುಣಗ್ರಹಣಪಾರೀಣನು ಒಬ್ಬನು ಇಂಗ್ಲಾಂಡುದೇಶದಲ್ಲಿ ಇದ್ದನು. ಈತನ ಹೆಸರು ಪ್ರೊಫೆಸರ್ ಎಡ್ಕಂಡ್ ಗ್ಯಾಸ್‌, ದೈವವಶಾತ್ತಾಗಿ ಈ ಗ್ರಂಥವು ಆತನ ಕೈಯಲ್ಲಿ ಬೀಳುವಂತೆ ಸಂಭವಿಸಿತು. ಆತನು ಈ ಪುಸ್ತು ಕವನ್ನು ಓದಿ ಇಂಗ್ಲೀಷುದೇಶದ 'ಎಕ್ಸಾಮಿನರ್' ಎಂಬ ಪತ್ರಿಕೆಯಲ್ಲಿ ಅದನ್ನು ಕುರಿತು ಕೆಳಗೆ ಬರೆದಂತೆ ಪ್ರಶಂಸೆಮಾಡಿದನು. “ ಪ್ರೊ. ಮಿಂಟೋದೊರೆಯು ' ಎಕ್ಷಾಮಿನರ್ ' ಎಂಬ ಪತ್ರಿಕೆಗೆ ಅಧಿ ಪತಿಯಾಗಿ ಇದ್ದ ಕಾಲದಲ್ಲಿ ಒಂದು ದಿವಸ ನಾನು ಅವರ ಕಾರ್ಯಸ್ಥಾನಕ್ಕೆ ಹೋದೆನು. ತನ್ನ ಹತ್ತಿರಕ್ಕೆ ವಿಮರ್ಶೆಗಾಗಿ ಬಂದ ಒಂದು ಹಿಂದೂಸ್ಥಾನದ ಪುಸ್ತಕವನ್ನು ಆತನು ನನ್ನ ಕೈಗೆ ಕೊಟ್ಟನು. ಆ ಪುಸ್ತಕವನ್ನು ನೋಡಿದರೆ ಅಸಹ್ಯವಾಗಿ ಕಾಣುತ್ತ ಇತ್ತು. ಇದು ಭವಾನೀಪುರದ ಸಪ್ತಾಹಿಕ ಸಂವಾದ ಮುದ್ರಾಕ್ಷರಶಾಲೆಯಲ್ಲಿ ಮುದ್ರಿತವಾಗಿ ಇತ್ತು. ಈ ಪುಸ್ತು ಕದಲ್ಲಿ ಉಪೋದ್ಘಾ ತವು ಇರಲಿಲ್ಲ. ಇದು ಇನ್ನೂರು ಪುಟಗಳುಳ್ಳದ್ದಾಗಿತ್ತು. ಇದನ್ನು ನೋಡಿದ ಕೂಡಲೆ ಚಿತ್ತು ಕಾಗದಗಳ ಬುಟ್ಟಿಯಲ್ಲಿ ಬಿಸಾಡಬೇಕು ಎಂದು ತೋರಿತು. ಪುಸ್ತಕವನ್ನು ಬಿಚ್ಚಿದರೆ ಅದರಲ್ಲಿ ಅರ್ಧಸರಿಯಾಗಿ ಅಚ್ಚು ಬೀಳದ ಅಕ್ಷರಗಳು ಕಂಡುಬಂದುವು. ಇಂತಹ ಪುಸ್ತುಕದಲ್ಲಿ ಉತ್ತಮವಾದ ಕವಿತ್ವವು ಇರುವುದು ಎಂದು ಯಾರೂ ಎಣಿಸಲಾರರು. ನಾನು ಅದರಲ್ಲಿ ಇದ್ದ ಒಂದೆರಡು ಪದ್ಯ ಗಳನ್ನು ಓದಿದೊಡನೆಯೇ ನನಗೆ ಉಂಟಾದ ಆಶ್ಚರ್ಯವನ್ನು ವರ್ಣಿಸಲಾರೆನು.” ತೋರೂದತ್ತು ಪ್ರಥಮದಲ್ಲಿ ರಚಿಸಿದ ಗ್ರಂಥವನ್ನೇ ಪಾಶ್ಚಾತ್ಯ ಪಂಡಿತರು ಹೊಗಳಿದಾಗ ಆಕೆಯು ಅನಂತರ ರಚಿಸಿದ ಗ್ರಂಥಗಳು ಎಷ್ಟು ರಸವಂತವಾಗಿ ಇರಬಹುದು ಎಂಬುದನ್ನು ಪಾಠಕರು ಉಹಿಸಬಲ್ಲರು. ಇಂಗ್ಲೀಷ್, ಫ್ರೆಂಚ್ ಭಾಷೆಗಳು ತೋರುದತ್ತಿಗೆ ಪರಭಾಷೆಗಳೇ ಆದರೂ ಆಕೆಯು ಆ ಭಾಷೆಗಳಲ್ಲಿ ಸ್ವಭಾಷೆಯಲ್ಲಿ ಮಾಡುವಂತೆಯೇ ಕವಿತ್ವವನ್ನು ಮಾಡುವುದನ್ನು ನೋಡಿ ಅನೇಕರು ಆಶ್ಚರ್ಯಪಡುತ್ತ ಇದ್ದರು. ಈಕೆಯು ಬರೆದ ಕವಿತ್ವದಲ್ಲಿ ವಿಶೇಷ ಭಾಗವು ಭಾಷಾಂತರವಾದರೂ, ಅದರಲ್ಲಿ ಕವಿತ್ವಕ್ಕೆ ಬೇಕಾದ ಶಬ್ದ ಸಾಷ್ಟವ, ಅರ್ಥ ಗಾಂಭೀರ್ಯ, ರಸ ಪುಷ್ಟಿ, ಮೊದಲಾದ ಲಕ್ಷಣ ಗಳು ಇದ್ದುದರಿಂದ ಪಾಠಕರಿಗೆ ಆಕೆಯ ಕಾವ್ಯಗಳು ಭಾಷಾಂತರದಂತೆ ತೋರದೆ ಸ್ವತಂತ್ರ ರಚನೆಯಾಗಿಯೇ ತೋರುತ್ತ ಇತ್ತು. ಆಮೇಲೆ ಈಕೆಯು * ಪ್ರಾಚೀನ ಹಿಂದೂಸ್ಥಾನದ ಹಾಡುಗಳು' ಎಂಬ ಒಂದು ಕಾವ್ಯವನ್ನು ಬರೆದಳು. ಪ್ರೊ, ಗ್ಯಾಸ್ ದೊರೆಯು ಆ ಕಾವ್ಯಕ್ಕೆ ಪೀಠಿಕೆಯನ್ನು ಬರೆದನು. ಅದರಲ್ಲಿ ಆತನು “ ಹತ್ತೊಂಬತ್ತನೆಯ ಶತಾಬ್ದದ ಕವಿಗಳ ಚರಿತ್ರೆಯನ್ನು