ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾರಾಬಾಯಿ. -0- ಈಕೆಯು ಕ್ಷತ್ರಿಯವಂಶದಲ್ಲಿ ಜನಿಸಿ, ಶೂರಳೆಂತಲೂ ಗುಣವತಿ ಯೆಂತಲೂ ಬಹು ಪ್ರಸಿದ್ಧಿಯನ್ನು ಪಡೆದಳು, ಈಕೆಯ ಕಾಲವನ್ನು ತಿಳಿಯಲು ಪ್ರಸ್ತುತದಲ್ಲಿ ಯಾವ ಆಧಾರವೂ ದೊರೆಯದ ಕಾರಣ ಆ ಪ್ರಯತ್ನವನ್ನು ಬಿಟ್ಟು ಆಕೆಯ ಚರಿತ್ರೆಯನ್ನು ಮಾತ್ರ ಇಲ್ಲಿ ಬರೆದಿರುವೆನು. ಮೇಚ್ಚರ ಕಾಲದಲ್ಲಿ ನಮ್ಮ ದೇಶದ ಸಂಸ್ಥಾನೀಕರೂ, ರಾಜರೂ ಬಹು ಕಷ್ಟ ದೆಶೆಯಲ್ಲಿ ಇದ್ದರು, ಪ್ರಜೆಗಳು ತುರುಕರ ಬಾಧೆಯಿಂದ ಬಹು ಹೀನಸ್ಥಿತಿ ಯಲ್ಲಿ ಇದ್ದರು. ಆ ಸಮಯದಲ್ಲಿ ರಾಜಪುಠಾನಾದೇಶದಲ್ಲಿ ವೇದನಗರವೆಂಬ ಒಂದು ಚಿಕ್ಕ ಸಂಸ್ಥಾನವು ಇತ್ತು. ಸೂರನಾರ್ಥರಾವ್ ಎಂಬಾತನು ಅದನ್ನು ಪಾಲಿಸುತಲಿದ್ದನು. ಈತನು ವಿಶೇಷ ಬಲಪರಾಕ್ರಮಗಳುಳ್ಳವನಾದುದರಿಂದ ತುರುಸ್ಕರಿಂದ ತನ್ನ ರಾಜ್ಯಕ್ಕೆ ಯಾವ ಅಪಾಯವೂ ಉಂಟಾಗದಂತೆ ಕಾಪಾಡಿಕೊಂಡು ಇದ್ದನು, ಆದರೆ ಆತನು ಬಹು ವೃದ್ಧನಾದ ಮೇಲೆ ಒ೦ದುಸಲ ದಿಲ್ಲಾ ಯೆಂಬ ಒಬ್ಬ ಯವನನು ವೇದನಗರದ ಮೇಲೆ ದಂಡೆತ್ತಿ ಬಂದನು. ಆ ರಾಜನು ಅವನೊಡನೆ ಯುದ್ಧಮಾಡಲು ತನಗೆ ಶಕ್ತಿಯಿಲ್ಲದುದ ರಿಂದ, ರಾಜ್ಯವನ್ನು ಆ ತುರಷ್ಟನಿಗೆ ಬಿಟ್ಟು, ತನ್ನ ಮುದ್ದಿನ ಮಗಳಾದ ತಾರಾ ಬಾಯಿಯನ್ನು ಕರೆದುಕೊಂಡು ತಕ್ಷಶಿಲಾ ಅಥವಾ ತಕಪೂರ್‌ ಎಂಬ ಸ್ಥಳಕ್ಕೆ ಹೋಗಿ ಅಲ್ಲಿ ವಾಸಮಾಡುತಲಿದ್ದನು. ಆತನಿಗೆ ಈ ಕನೆಯು ಹೊರತು ಬೇರೆ ಮಕ್ಕಳಾಗಲಿ, ಬಂಧುಗಳಾಗಲಿ, ಆಪ್ತರಾಗಲಿ ಇರಲಿಲ್ಲ. ಈ ಕನೈಗೆ ಬಾಲ್ಯ ದಲ್ಲಿಯೇ ಮಾತೃ ವಿಯೋಗವು ಉಂಟಾದುದರಿಂದ ಈಕೆಯನ್ನು ತಂದೆಯು ಬಹು ಪ್ರೀತಿಯಿಂದ ಸಾಕುತಲಿದ್ದನು. ಅಲ್ಲಿ ಸೂರನಾರ್ಥರಾಯನು ಕನ್ಯಾ ಸಹಿತನಾಗಿ ವಾಸಮಾಡುತಲಿರುವನು ಎಂದು ಕೇಳಿ ದಿಲ್ದಾಯವನನು ಆತನನ್ನು ಅಲ್ಲಿಯೂ ಇರಗೊಡದೆ ಓಡಿಸಿದನು. ಆದುದರಿಂದ ಆತನು ಪ್ರಿಯವಾದ ಆ ಪಟ್ಟಣವನ್ನು ಬಿಟ್ಟು ಅಬೂಬೆಟ್ಟದ ಮೇಲೆ ವಾಸಮಾಡುತಲಿದ್ದನು. ಆ ಕಾಲ ದಲ್ಲಿ ಪ್ರತಿಯೊಬ್ಬ ರಾಜನೂ ತನ್ನ ರಾಜ್ಯವನ್ನು ಕಾಪಾಡಿಕೊಳ್ಳಬೇಕಾದುದು ಅತ್ಯವಶ್ಯಕವಾಗಿದ್ದುದರಿಂದ ಸೂರನಾರ್ಥರಾಯನು ಎಷ್ಟು ಕೇಳಿದರೂ ಆತನಿಗೆ ಯಾವ ರಾಜನೂ ಸಹಾಯಮಾಡಲಿಲ್ಲ. ಸೂರನಾರ್ಥರಾಯನಿಗೆ ಪುತ್ರರು ಇಲ್ಲದುದರಿಂದ ಈ ಕನೈಯಿಂದಲೇ ತನ್ನ ಹಗೆಯನ್ನು ತೀರಿಸಿಕೊಳ್ಳ ಬೇಕು ಎಂದು ಎಣಿಸಿ, ಆ ಬಾಲಿಕೆಗೆ, ಪುತ್ರನಿಗೆ