೧೩೫ ವಿದ್ಯಾ ಸಾಗ ರಜನನಿ ಭಗವತೀದೇವಿ. ನಲ್ಲಿ ಅತಿ ಮೈತ್ರಿಯನ್ನು ತೋರಿಸುತಲಿದ್ದನು. ಹೀಗೆ ಕೆಲವು ದಿವಸಗಳು ಕಳೆದ ಮೇಲೆ ಕುಟ್ಟಿತನಾದ ಆ ಪ್ರಭುರಾಯನು ಭಾವಮೈದುನನಿಗೆ ಔತನವನ್ನು ಮಾಡಿ ದನು. ಕಪಟವನ್ನು ಅರಿಯದ ಹೃಥಿವೀರಾಜನು ಬಂದು ಅಲ್ಲಿ ಬಡಿಸಿದ ವಿಷಾನ್ನ ವನ್ನು ಭೋಜನಮಾಡಿ ಪುನಃ ತನ್ನ ಅರಮನೆಗೆ ಬರುತ್ತಿರಲು ಮಾರ್ಗಮಧ್ಯದಲ್ಲಿ ವಿಷವೇರಿ ಮೂರ್ಛಿತನಾದನು. ಈ ವರ್ತಮಾನವು ತಾರಾಬಾಯಿಗೆ ತಿಳಿದು, ಆಕೆಯು ಪತಿಯನ್ನು ಸವಿಾಪಿಸಿ, ಆತನಿಗೆ ತಕ್ಕ ಚಿಕಿತ್ಸೆಯನ್ನು ಮಾಡಿದಳು. ಅದರಿಂದ ಏನೂ ಪ್ರಯೋಜನವು ಉಂಟಾಗದೆ ಆತನು ಮೃತನಾದನು. ತಾರಾ ಬಾಯಿಯ ಜೀವನಚರಿತ್ರೆಯು ಅಲ್ಲಿಗೆ ಮುಗಿಯಿತು, ರಾಜಪುತ್ರ ರಮಣಿಯರ ಆಚಾರದಂತೆ ತಾರಾಬಾಯಿಯು ಅನುಗಮನವನ್ನು ಮಾಡಿ ಪತಿಯನ್ನು ಅನುಸರಿಸಿ ಪರಮಪದವನ್ನು ಸೇರಿದಳು. r ವಿದ್ಯಾಸಾಗರಜನನಿ ಭಗವತೀದೇವಿ. ದೀನಬಂಧುವೂ, ವಂಗಮಾತೆಯ ಸತ್ಪುತ್ರನೂ, ಭರತವರ್ಷವೆಂಬ ಆಕಾಶಕ್ಕೆ ತೇಜೋಮಯನಾದ ನಕ್ಷತೇಶಸ್ವರೂಪನೂ, ಅನಾಥೆಯರಿಗೆ ಧರ ಪಿತನೂ ಆದ ಈಶ್ವರಚಂದ್ರ ವಿದ್ಯಾಸಾಗರನ ಜನನಿಯಾದ ಭಗವತೀದೇವಿಯ ಚರಿತ್ರೆಯು ಸ್ತ್ರೀ ಪುರುಷರಿಗೆಲ್ಲರಿಗೂ ಅನುಕರಣೀಯವಾದುದು, ಯಾವ ಸದ್ಗುಣ ಗಳಿಂದ ವಿದ್ಯಾಸಾಗರನು ಪ್ರಾತಃಸ್ಮರಣೀಯನಾದನೋ ಆ ಸದ್ದು ಣಗಳಿಗೆ ಆತನ ತಾಯಿಯೇ ಮೂಲಕಾರಣಳು ಎಂಬುದನ್ನು ಬಹು ಜನರು ಅರಿಯರು, ಎಂತಹ ಬೀಜವೋ ಅಂತಹ ಫಲವೇ ಉಂಟಾಗುವುದು ಎಂಬುದು, ಭಗವತೀದೇವಿ ಮತ್ತು ಈಶ್ವರಚಂದ್ರ ಇವರ ಚರಿತ್ರೆಯಿಂದ ತಿಳಿಯಬಹುದು. ಈಕೆಯು ೧೭೨೪ ನೆಯ ಬಂಗಾಲೀವರ್ಷದ ಫಾಲ್ಕು ಣಮಾಸದಲ್ಲಿ ವಂಗ ದೇಶದಲ್ಲಿ ಇರುವ ಒಂದು ಚಿಕ್ಕ ಗ್ರಾಮದಲ್ಲಿ ಬ್ರಾಹ್ಮಣ ವಂಶದಲ್ಲಿ ಜನಿಸಿದಳು. ಈಕೆಯ ತಂದೆಯ ಹೆಸರು ರಾಮಕಾಂತ ಚಟ್ಟೋಪಾಧ್ಯಾಯ, ತಾಯಿಯ ಹೆಸರು ಗಂಗಾದೇವಿ, ರಾಮಕಾಂತನು ಬಾಲ್ಯದಿಂದಲು ಐಹಿಕವಿಷಯದಲ್ಲಿ ವಿರಕ್ಕನಾಗಿ, ದೈವಭಕ್ತಿಯುಳ್ಳವನಾಗಿದ್ದನು. ಆದಕಾರಣ ಆತನು ಯಾರಬಳಿ ಯಲ್ಲಿ ಯೂ ವಿಶೇಷವಾಗಿ ಮಾತನಾಡದೆ ಆಗಾಗ ಅರಣ್ಯಕ್ಕೆ ಹೋಗಿ ಏಕಾಂತ ದಲ್ಲಿ ಜಪವನ್ನು ಮಾಡಿಕೊಳ್ಳುತಲಿದ್ದನು. ಕ್ರಮೇಣ ಈತನು ಪೂರ್ತಿಯಾಗಿ
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೬೦
ಗೋಚರ