ಅಬಲಾ ಸಚ್ಚರಿತ್ರ ರತ್ನ ಮಾಲೆ. ಎಂದಿಗೂ ಮಾಡದೆ ಸ್ವಶಕ್ಕನುಸಾರವಾಗಿ ಉಪಕಾರವನ್ನು ಮಾಡುತಲಿರಬೇಕು. ಈ ವಿಷಯವನ್ನು ಪಾಠಕಮಹಾಶಯ ಸೋದರಿಯರು ಯಾವಾಗಲೂ ಮರೆಯ ಕೂಡದು ಎಂದು ಬೇಡುವೆನು, ನಾವು ಸರ್ವದಾ ಹೀಗೆಯೇ ಆಚರಿಸುವುದ ರಿಂದ ಈ ಲೋಕದಲ್ಲಿ ನಮಗೆ ಶತ್ರುಗಳು ಇಲ್ಲದೆ ಎಲ್ಲರೂ ಮಿತ್ರರಾಗುವರು. ಧನಮದದಿಂದ ಕಣ್ಣು ಕಾಣದೆ ಇತರರನ್ನು ತುಚ್ಛವಾಗಿ ನೋಡಿ ಬಾಧಿಸುವವ ರಿಗೆ ವಿಪದ್ದೆಶೆಯು ಬಂದಾಗ ಜಗತ್ತೆಲ್ಲವೂ ಪ್ರತಿಕೂಲವಾಗುವುದು. ಆದುದ ರಿಂದ ಐಶ್ವರವಂತರು ಬಡವರನ್ನು ಆದರದಿಂದಕಾಣಬೇಕು ಎಂಬ ಉಪದೇಶ ವನ್ನು ಸುರಾಜನ ಚರಿತ್ರೆಯಿಂದ ನಾವು ಕಲಿಯಬಹುದು. ಪತಿಯು ಗತಿಸಿದಂದಿನಿಂದಲೂ ಅಸಾಮಾನೈಯು ಮೂರುವರ್ಷದವರೆಗೂ ಉನ್ಮಾದಿನಿಯಾಗಿಯೇ ಇದ್ದಳು. ಆಕೆಯ ತಂದೆಯು ಅನೇಕ ವಿಧವಾದ ಉಪಾಯ ಗಳಿಂದ ಆಕೆಯ ಹುಚ್ಚನ್ನು ಹೋಗಲಾಡಿಸಲು ಪ್ರಯತ್ನಿಸಿದನು. ಅವು ಗಳಿಂದ ಗುಣ ಉಂಟಾಗಲಿಲ್ಲ. ಸುರಾಜನ ಶಿರಚ್ಛೇದವಾದ ಅನಂತರ, ಕೆಲವು ಘನವೈದ್ಯರು ಅಸಾಮಾನೈಗೆ ಪತಿಯ ಮರಣದಿಂದ ಉನ್ಮಾದವು ಉಂಟಾಯಿ ತಾದಕಾರಣ, ಆಕೆಯ ಪತಿಯನ್ನು ಕೊಂದವನು ಸತ್ತ ಸಮಾಚಾರವನ್ನು ಆಕೆಗೆ ತಿಳಿಸಿ, ಅವನ ತಲೆಯನ್ನೂ ತೋರಿಸಿದರೆ ಉನ್ಮಾದವು ಆಕೆಯನ್ನು ಬಿಟ್ಟು ಹೋಗುವುದು ಎಂದು ಹೇಳಿದರು. ಆಮೇಲೆ ಆ ಮಾತನ್ನು ಪರೀಕ್ಷೆ ಮಾಡುವುದಕ್ಕಾಗಿ, ಸುರಾಜನ ಶಿರಸ್ಸನ್ನು ಭಲ್ಲೆಗೆ ಸಿಕ್ಕಿಸಿ ಜನಗಳಿಗೆ ತೋರಿಸುತ್ತಿದ್ದ ಸ್ಥಳಕ್ಕೆ ಸಮಿಾಪದಲ್ಲಿ ಇದ್ದ ಒಂದು ಮಹಡಿಯಮೇಲಿನಿಂದ ಆಕೆಗೆ ಅವನ ತಲೆಯನ್ನು ತೋರಿಸಿದರು. ಆಕೆಯು ಆ ಶಿರಸ್ಸನ್ನು ನೋಡಿ ದೊಡನೆಯೇ ಅತ್ಯಂತ ದಯೆಯಿಂದ, “ ಪಾಪ! ಆ ದುರದೃಷ್ಟವಂತನು ಆರು,” ಎಂದು ಕೇಳಿದಳು. ಅವರು, “ ಅಮ್ಮಾ, ನಿಮ್ಮ ಪತಿಯನ್ನು ಅತಿ ಕ್ರೂರಾತ್ರ ನಾಗಿ ವಧಿಸಿದವನು ಇವನೇ, ಇವನ ಶತ್ರುಗಳು ಇವನಿಗೆ ತಕ್ಕ ಶಿಕ್ಷೆಯನ್ನು ಮಾಡಿದರು,” ಎಂದರು. ಅದಕ್ಕೆ ಆಕೆಯು ಕನಿಕರದಿಂದ, “ ಅಯ್ಯೋ ಪಾಪ! ಇವನಿಗೆ ಇಂತಹ ದುರವಸ್ಥೆಯು ಪ್ರಾಪ್ತವಾಯಿತೇ ? ಎಂದು ನುಡಿದು, “ ಇನ್ನು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ, ” ಎಂದಳು. ಆಕೆಯು ಮನೆಗೆ ಹೋದ ಅನಂತರ ಹುಚ್ಚುವಾಸಿಯಾಯಿತು. ಆನಂತರ ಆಕೆಯು ಸುರಾಜನ ವಿಷಯವನ್ನು ಸವಿಸ್ತಾರವಾಗಿ ಕೇಳಿ ತಿಳಿದುಕೊಂಡು, ದುರದೃಷ್ಟವಂತಳಾದ ಅವನ ಹೆಂಡತಿಯ ವಿಷಯವನ್ನೂ ತಿಳಿದುಕೊಂಡಳು. ಅಕಸ್ಮಾತ್ತಾಗಿ ಆಕೆಯ ಉನ್ಮಾದವು ಬಿಟ್ಟು ಹೋದುದನ್ನು ನೋಡಿ ಆಕೆಯ ಆಪ್ತರಿಗೆ ಆಶ್ಚರ್ಯವೂ, ಆನಂದವೂ ಉಂಟಾದುವು. ಆಕೆಯು ಹುಚ್ಚು ಹೋದ ಅನಂತರ ಆಗಾಗ “ ಪರ ಮೇಶ್ವರನು, ನಾನು ಮಾಡಬೇಕಾದ ಕಾರ್ಯವನ್ನು ತಾನೇ ಮಾಡಿದನು. ಆದಕಾರಣ ಆತನು ಮಾಡಬೇಕಾದ ಕಾರ್ಯವನ್ನು ನಾನೇ ಮಾಡಬೇಕು ಎಂದು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೭೧
ಗೋಚರ