ಅಸಾಮಾನ್ಯ, ೧೫೧ ಶರವೇಗದಿಂದ ಪ್ರವಹಿಸುತಲಿರುವ ಗಂಗಾನದಿಯು ಬಂದಿತು. ಬೇಗನಳು ಅಲ್ಲಿದ್ದ ನಾವಿಕರನ್ನು, ತನ್ನನ್ನು ಆಚೆಯ ದಡಕ್ಕೆ ಶೀಘ್ರವಾಗಿ ತೆಗೆದುಕೊಂಡು ಹೋಗಿರಿ,' ಎಂದು ಬೇಡಿಕೊಳ್ಳಲಾರಂಭಿಸಿದಳು. ಅಂತಹ ತುಪಾಸಿನಸಮಯ ದಲ್ಲಿ ಗಂಗೆಯಲ್ಲಿ ಹಡಗನ್ನು ನಡೆಸಲು ಆಗುವದಿಲ್ಲ ಎಂದು ನಾವಿಕರು ಹೇಳಿ ದರು, ಆದರೆ ಭಯಾಕುಲಳಾದ ಬೇಗಮಳು ತನ್ನ ಬೆರಳಿನಲ್ಲಿರುವ ರತ್ನಖಚಿತ ವಾದ ಉಂಗುರವನ್ನು ಅವರಿಗೆ ತೋರಿಸಿದಳು. ಬಹು ಅಮೂಲ್ಯವುಳ್ಳ ಆ ಉಂಗುರವು ದೊರೆಯುವುದು ಎಂಬ ಆಶೆಯಿಂದ ಒಬ್ಬ ನಾವಿಕನು ಹಡಗನ್ನು ನಡೆಸಲು ಉದ್ಯುಕ್ತನಾದನು. ಅವರು ಸ್ವಲ್ಪ ದೂರ ಹಡಗಿನಲ್ಲಿ ಹೋದರು. ಆದರೆ ನದಿಯ ಅತಿಶಯವಾದ ವೇಗವನ್ನು ತಡೆಯಲಾರದೆ ಹಡಗು ಮುಳು ಗಿತು. ಆ ಸಮಯಕ್ಕೆ ಅಸಾಮಾನ್ಯ ಯು ಗಂಗಾತೀರಕ್ಕೆ ಬಂದು ಹಡಗು ಮುಳುಗಿದುದನ್ನು ನೋಡಿ, ಅವರನ್ನು ರಕ್ಷಿಸಬೇಕೆಂದು, ಆ ಮಹಾನದಿಯೊಳಕ್ಕೆ ಧುಮುಕಿ, ತನ್ನ ಶಕ್ತಿಗೆ ಅನುಸಾರವಾಗಿ ಈಜುತ್ತ, ಪ್ರವಾಹವೇಗದಿಂದ ತಡೆ ಯಲ್ಪಡುತ್ತ, ಮುಳುಗುತ್ತ ಏಳುತ್ತ, ಹಡಗು ಮುಳುಗಿದ ಸ್ಥಳವನ್ನು ಸೇರಿದಳು. ದೃಢನಿಶ್ಚಯವುಳ್ಳವರು ಧೈರ್ಯದೊಡನೆ ಮಾಡಿದ ಯಾವ ಕಾರ್ಯವು ತಾನೇ ಕೊನೆಗಾಣದಿರುವದು ? ಅಸಾಮಾನ್ಯ ಯು ನೀರಿನಲ್ಲಿ ಮುಳುಗಿ ಗುಲ್ಬೇಗ ಮಳ ಜಡೆಯನ್ನು ಹಿಡಿದುಕೊಂಡು ತೀರಕ್ಕೆ ಬರಲಾರಂಭಿಸಿದಳು. ಬೇಗಮಿ ನೊಡನೆ ಆಕೆಯು ಕಟ್ಟಿಕೊಂಡಿದ್ದ ಮಗುವು ಸಹ ಈಚೆಗೆ ಬಂದಿತು. ಆಗ್ಗೆ ತುಫಾನು ಸ್ವಲ್ಪ ನಿಂತಿತು. ಅಸಾಮಾನ್ಯ ಯು ಬಹು ಪ್ರಯಾಸದೊಡನೆ ಅವ ರನ್ನು ತೀರಕ್ಕೆ ತಂದು ಸವಿಾಪದಲ್ಲಿದ್ದ ಗುಡುಸಲಿಗೆ ಕರೆದುಕೊಂಡು ಹೋಗಿ, ಅಲ್ಲಿನ ಜನರನ್ನು ಕೇಳಿ ಒಣಹುಲ್ಲು, ಬೆಂಕಿ ಮೊದಲಾದುವುಗಳನ್ನು ತಂದು ಅವರಿಗೆ ಉಷ್ಟೋಪಚಾರಗಳನ್ನು ಮಾಡಿದಳು. ಆದರೆ ಗಂಗಾದೇವಿಯು ನಶ್ವರ ವಾದ, ಈ ದುಃಖಭೂಯಿಷ್ಪ ಪ್ರಪಂಚದಿಂದ ಬೇಗನಳನ್ನು ಮುಕ್ತಳನ್ನಾಗಿ ಮಾಡಿ ದ್ದಳು, ಅದರಿಂದ ಆಕೆಯು ದೀರ್ಘನಿದ್ರೆಯಿಂದ ಪುನಃ ಏಳಲೇ ಇಲ್ಲ. ಶಿಶು ವಿಗೆ ಸ್ಪಲ್ಪ ಹೊತ್ತಿಗೆ ಸ್ಮತಿಯುಂಟಾಯಿತು. ಅಸಾಮಾನ್ಯ ಯು ಬೇಗಮಳಿಗೆ ದಹನವಿಧಿಗಳನ್ನು ಅಲ್ಲಿಯೇ ನೆರವೇರಿಸಿ, ಆ ಶಿಶುವನ್ನು ತನ್ನ ಗೃಹಕ್ಕೆ ತೆಗೆದು ಕೊಂಡು ಹೋಗಿ ಹೆತ್ತ ಮಗುವಿನಂತೆ ಪ್ರೇಮದಿಂದ ಸಲಹಿದಳು. ಬಂಗಾಳೆ ಯಲ್ಲಿ ಇಂದಿನವರೆಗೂ ಅಸಾಮಾನ್ಯರನ್ನು ದೇವತೆಯಂತೆ ಭಾವಿಸಿ ಮಗು ವನ್ನು ಎತ್ತಿಕೊಂಡಿರುವಂತೆ ಆಕೆಯ ವಿಗ್ರಹವನ್ನು ಮಾಡಿ ಪೂಜಿಸುವ ಪದ್ಧತಿಯು ಉಂಟಂತೆ. ಅಸಾಮಾನೆಯು ತನ್ನ ದೃಢನಿಶ್ಚಯದಿಂದಲೂ, ಶತ್ರುಗಳಲ್ಲಿ ಇಟ್ಟಿರುವ ಮಿತ್ರಭಾವದಿಂದಲೂ, ಬೇರೊಬ್ಬರಿಗೆ ಅಸಾಧ್ಯವಾದ ಸತ್ಯ ತ್ಯವನ್ನು ಮಾಡಿ ತನ್ನ ಹೆಸರನ್ನು ಸಾರ್ಥಕಮಾಡಿಕೊಂಡಳು. ಅದರಂತೆಯೇ ಆಕೆಯ ಚರಿತ್ರೆಯನ್ನು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೭೬
ಗೋಚರ