ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖಾರಾಬಾಯಿ. ೧೫t ರಸಪೂರಿತಗಳಾದ ಕೀರ್ತನೆಗಳನ್ನು ಮಾಡುತ್ತ, ಆನಂದಾತಿಶಯದಿಂದ ನಾಟ್ಯ ವನ್ನಾಡುತಲಿದ್ದಳು! ಆಕೆಯ ನಿಷ್ಕಳಂಕ ಭಕ್ತಿಯಿಂದ ಆಕೆಯ ಕೀರ್ತಿಯು ನಾಲ್ಕು ದಿಕ್ಕಿನಲ್ಲಿಯೂ ಪ್ರಸರಿಸಲು, ತತ್ವವಿಚಾರಪರರೂ, ಯೋಗಿಗಳೂ, ಸಾಧು ಗಳೂ ಆಕೆಯ ದರ್ಶನಾರ್ಥವಾಗಿ ಪ್ರತಿದಿನವೂ ಗುಂಪುಗುಂಪಾಗಿ ಆ ಕೃಷ್ಣ ಮಂದಿರಕ್ಕೆ ಬರುತಲಿದ್ದರು. ಅವರ ಸಾಂಗತ್ಯದಿಂದ ಆಕೆಗೆ ಸ್ವಾಭಾವಿಕ ವಾಗಿದ್ದ ಭಕ್ತಿಯು ದಿನದಿನಕ್ಕೆ ಹೆಚ್ಚು ತಲಿತ್ತು. - ಮಾರಾಬಾಯಿಯ ಖ್ಯಾತಿಯು ಅನೇಕ ದೇಶಗಳಲ್ಲಿ ವ್ಯಾಪಿಸಿತು. ಆಕೆಯು ರಚಿಸಿದ ಪದ್ಯಗಳನ್ನೂ, ಕೀರ್ತನೆಗಳನ್ನೂ ಪ್ರತಿ ಗ್ರಾಮದಲ್ಲಿಯೂ ಜನರು ಭಕ್ತಿಯೊಡನೆ ಪಾಡುತಲಿದ್ದರು. ಆ ಸಮಯದಲ್ಲಿ ದಿಲ್ಲಿಯಲ್ಲಿ ಬಾದಷಹ ನಾಗಿದ್ದ ಅಕ್ಟರನು ಮಾರಾಬಾಯಿಯ ಕೀರ್ತಿಯನ್ನು ಕೇಳಿ ಆ ಪರಮ ಭಕ್ಕಳನ್ನು ನೋಡಲು ಕುತೂಹಲವುಳ್ಳವನಾದನು. ಆದರೆ ಉದಯಪುರೇಶನು ತನಗೆ ಅಧೀನನಾಗಿರಲಿಲ್ಲವಾದುದರಿಂದಲೂ, ಸ್ತ್ರೀಯರು ಯವನರ ಕಣ್ಣಿಗೆ ಬೀಳುವುದು ಬಹು ಅವಮಾನಕರವಾದುದು ಎಂದು, ರಜಪೂತರು ಎಣಿಸು ತಾರೆ ಎಂಬುದನ್ನು ತಿಳಿದವನಾದುದರಿಂದಲೂ, ತತ್ತ್ವತ್ವದಲ್ಲಿ ಒಬ್ಬ ಮೇಚನು ರಾಜ ಪುತ್ರ ಸ್ತ್ರೀಯನ್ನು ನೋಡಲು ಅಪೇಕ್ಷಿಸಿದ ಮಾತ್ರಕ್ಕೆ ಚಿತ್ತೂರಿನ ರಾಜ ಪುತ್ರರಮಣಿಯರೆಲ್ಲರೂ ಅಗ್ನಿ ಪ್ರವೇಶವನ್ನು ಮಾಡಿದರು ಎಂಬುದನ್ನು ಕೇಳಿದವ ನಾದುದರಿಂದಲೂ, ಅಕ್ಟರನು ರಾಜವೇಷದಲ್ಲಿ ಮಾರಾಬಾಯಿಯನ್ನು ನೋಡಲು ಆಗುವುದಿಲ್ಲ ಎಂದೆಣಿಸಿದನು, ಆಮೇಲೆ ಆತನು ತನ್ನ ಸಭೆಯಲ್ಲಿ ಗಾನ ವಿಶಾರದನಾದ ತಾನಸೇನನನ್ನು ಕರೆಯಿಸಿ, ಖಾರಾಬಾಯಿಯನ್ನು ನೋಡಲು ಉಪಾಯವನ್ನು ಕೇಳಿದನು. ಆತನ ಆಲೋಚನೆಯಂತೆ ಇಬ್ಬರೂ ಸಾಧಾರಣ ವಾದ ಹಿಂದೂ ಬೈರಾಗಿಗಳಂತೆ ವೇಷವನ್ನು ಧರಿಸಿಕೊಂಡು ಗೂಢವಾಗಿ ಉದಯಪುರವನ್ನು ಸೇರಿ, ಮಾರಾಬಾಯಿಯು ಪೂಜೆಮಾಡುತಲಿದ್ದ ಕೃಷ್ಣ ಮಂದಿರವನ್ನು ಪ್ರವೇಶಿಸಿದರು. ಆಗ ಬಾದಷಹನು ಮಾರಾಬಾಯಿಯ ಭಕ್ತಿ, ಜ್ಞಾನಗಳನ್ನು ನೋಡಿ ಆನಂದಮಗ್ನನಾಗಿ ಆಕೆಯ ಬಳಿಯಲ್ಲಿ ತಾನು ಪರಮಾ ರ್ಥೋಪದೇಶವನ್ನು ಮಾಡಿಸಿಕೊಳ್ಳ ಬೇಕು ಎಂದೆಣಿಸಿ, ಪವಿತ್ರಳಾದ ಮಾರಾ ಬಾಯಿಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು. ಅದಕ್ಕೆ ಮಾರಾಬಾಯಿಯು, 'ನೀನು ನನಗೆ ಏಕೆ ನಮಸ್ಕಾರವನ್ನು ಮಾಡುವೆ ? ಪರಮೇಶ್ವರನಿಗೆ ನಮಸ್ಕಾರವನ್ನು ಮಾಡು, ನನ್ನಿಂದ ನಿನಗೆ ಏನು ಬೇಕೋ ಹೇಳು,” ಎಂದು ಕೇಳಿದಳು. ಆಗ ಬಾದಷಹನು, “ ನನಗೆ ಪರಮಾರ್ಥಸಾಧನ ವನ್ನು ಉಪದೇಶ ಮಾಡು,” ಎಂದನು. ಆಗ ಆಕೆಯು, * ಸತ್ವದಾ ಪರಮೇಶ್ವರ ನಲ್ಲಿ ಭಕ್ತಿಯಿಂದ ಇರುವುದೇ ಪರಮಾರ್ಥಸಾಧನ,' ಎಂದು ಉಪದೇಶವನ್ನು ಮಾಡಿದಳು. ಅದನ್ನು ಗ್ರಹಿಸಿದ ಬಳಿಕ ಬಾದಷಹನು ತನ್ನಲ್ಲಿ ಬಚ್ಚಿಟ್ಟು