೧೬o ಅಬಲಾ ಸಚ್ಚರಿತ್ರ ರತ್ನ ಮಾಲೆ. ಕೊಂಡಿದ್ದ ರತ್ನಹಾರವನ್ನು ಗುರು ದಕ್ಷಿಣೆಯಾಗಿ ಆಕೆಗೆ ಕೊಡುವುದಕ್ಕೆ ಹೋಗಲು, ಆ ಹಾರವನ್ನು ನೋಡಿ ಆಕೆಯು, ' ಇಂತಹ ಅಪೂರ್ವವಾದ ರತ್ನ ಹಾರವು ಬೈರಾಗಿಯಾದ ನಿನಗೆ ಎಲ್ಲಿಂದ ಬಂದಿತು ?” ಎಂದು ಕೇಳಲು, ಬಾದ ಷಹನು, ' ನಾನು ಒಬ್ಬ ರಾಜನ ಬಳಿಯಲ್ಲಿ ಒಂದು ಅಪೂರ್ವವಾದ ಕಾರ್ಯ ವನ್ನು ಮಾಡಲು ಆತನು ಅದಕ್ಕೆ ಮೆಚ್ಚಿ ಈ ಹಾರವನ್ನು ಬಹುಮಾನವಾಗಿತ್ತು, ಎಂದು ನುಡಿದನು. ಮಾರಾಬಾಯಿಯು ತನಗೆ ಆ ಹಾರವು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದಳು, ಆದರೆ ವೇಷಧರನಾದ ಆ ಬೈರಾಗಿಯು ರತ್ನಹಾರ ವನ್ನು ಮಂದಿರದಲ್ಲಿರುವ ಸ್ವಾಮಿಯ ಕಂಠದಲ್ಲಿ ಹಾಕಿ ಹೊರಟುಹೋದನು. ಈ ಹಾರದಿಂದಲೇ ಮಾರಾಬಾಯಿಯ ಸಂಸಾರಸುಖವು ಹಾಳಾಯಿತು. ಬಾದಷಹನು ಹೊರಟುಹೋದ ಮಾರನೆಯ ದಿನವೇ ಹಾರದ ಸಂಗತಿಯು ಗ್ರಾಮದಲ್ಲೆಲ್ಲ ಹರಡಿತು. ರಾಣಾವಿಗೂ ತಿಳಿಯಿತು, ಕೂಡಲೆ ದೊರೆಯು ಆ ಹಾರವನ್ನು ತರಿಸಿ, ರತ್ನ ಪರೀಕ್ಷಕರಿಂದ ಅದರ ಬೆಲೆಯು ಹತ್ತು ಲಕ್ಷ ರೂಪಾಯಿಗಳು ಬಾಳುವುದು ಎಂದು ತಿಳಿದುಕೊಂಡನು. ಆ ರತ್ನ ಪರೀಕ್ಷಕ ರಲ್ಲಿ ಒಬ್ಬನು, “ ನಾನು ಈ ಹಾರವನ್ನು ಡಿಲೀ ಬಾದಷಹನಿಗೆ ಮಾರಿದೆನು,” ಎಂದು ನುಡಿದನು. ಆ ಮಾತನ್ನು ಕೇಳಿ ರಾಣಾ, ಹಾರವನ್ನು ಕೊಟ್ಟವರು ಯಾರಾಗಿರಬಹುದು ಎಂದು ಯೋಚಿಸಿ, ವಿಚಾರಿಸಿ, ವಿಚಾರಿಸಿ ಕೊನೆಗೆ ಹಾರ ವನ್ನು ಕೊಟ್ಟವನು ಡಿಲೀ ಪತಿಯಾದ ಅಕ್ಟರನೆಂತಲೂ, ಅವನು ತನ್ನ ಪತ್ನಿಯ ಪಾದಗಳನ್ನು ಮುಟ್ಟ, ಆಕೆಯೊಡನೆ ಮಾತನಾಡಿದನೆಂತಲೂ ತಿಳಿದುಕೊಂಡನು. ಅದರಮೇಲೆ ರಾಜನು ಅತ್ಯಾಗ್ರಹವುಳ್ಳವನಾಗಿ ತನ್ನ ಪತ್ನಿಯು ದುಶ್ಮೀಲೆಯು ಎಂದೆಣಿಸಿ, ಅಂತಹ ದುಷ್ಟಳು ಜೀವಿಸಿ ಇರುವುದು ಬಹು ಅವಮಾನಕರ ವಾದುದು ಎಂದು ಭಾವಿಸಿ, ರಜಪೂತ ಕುಲಕ್ಕೆ ಕಳಂಕವನ್ನುಂಟು ಮಾಡಿದ ಆಕೆಯನ್ನು ತಕ್ಷಣವೆ ಕೊಲ್ಲುವಂತೆ ಆಜ್ಞಾಪಿಸಿದನು. ಆದರೆ ಮಿರಾಬಾಯಿ ಯನ್ನು ಕೊಲ್ಲುವಂತಹ ಘೋರಕಾರ್ಯವನ್ನು ಮಾಡಲು ಯಾರೂ ಒಪ್ಪಿಕೊಳ್ಳ ಲಿಲ್ಲ, ಆದುದರಿಂದ “ ಆತ್ಮಹತ್ಯವನ್ನು ಮಾಡಿಕೊಳ್ಳಬೇಕು,' ಎಂದು ಮಿರಾ ಬಾಯಿಗೆ ಒಂದು ಕಾಗದ ಬರೆದು, ಅದರ ಮೇಲೆ ರಾಣಾ ತನ್ನ ಕೈ ಮುದ್ರೆಯನ್ನು ಹಾಕಿ, ಆಕೆಗೆ ಕಳುಹಿಸಿದನು. ಆ ಲೇಖನವನ್ನು ಒಬ್ಬ ಮಂತ್ರಿಯು, ಮಾರಾ ಬಾಯಿಯು ದೇವಮಂದಿರದಿಂದ ತನ್ನ ಮಂದಿರಕ್ಕೆ ಬರುತಲಿದ್ದ ಸಮಯದಲ್ಲಿ ಆಕೆಗೆ ಕೊಟ್ಟನು. ಆಕೆಯು ಅದನ್ನು ಓದಿ ಭೀತಿಹೊಂದದೆ ಅಮಾತ್ಯನನ್ನು ಕುರಿತು, 'ಒಂದು ಸಲ ನನ್ನ ಪತಿಯ ದರ್ಶನವು ದೊರೆಯುವುದೇ,' ಎಂದು ಕೇಳಿದಳು. ಮಾಠಾಬಾಯಿಯ ಮುಖವನ್ನು ನೋಡುವುದಿಲ್ಲ ಎಂದು ರಾಣಾ ಪ್ರತಿಜ್ಞೆಯನ್ನು ಮಾಡಿದುದರಿಂದ, ರಾಜದರ್ಶನವು ದೊರೆಯಲಾರದು ಎಂದು ಆತನು ನುಡಿದನು, ಅದರ ಮೇಲೆ ಆಕೆಯು, 'ನೀನು ಹೋಗಿ ನಿಮ್ಮ ಪತ್ನಿಯು
ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೮೫
ಗೋಚರ